ನಿತ್ಯ ಭವಿಷ್ಯ ಅಕ್ಟೋಬರ್ 13, 2017 (ಶುಕ್ರವಾರ)

0
424

 

ಮೇಷ

01-Mesha

ಕೈಕೊಂಡ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಿದರೂ ಅಂತಿಮವಾಗಿ ಯಶಸ್ಸನ್ನು ತಂದು ಕೊಡುತ್ತದೆ. ವ್ಯಾಪಾರದಲ್ಲಿನ ನಷ್ಟ ಸರಿದೂಗಿಸಿಕೊಳ್ಳುವ ಚಾಣಾಕ್ಷ ತನ ಇಂದು ನಿಮಗೆ ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ವೃಷಭ

02-Vrishabha

ಧಾರ್ಮಿಕ ಕ್ರಿಯೆಗಳಿಂದ ಮನಸ್ಸಿಗೆ ಸಮಾಧಾನವಾಗುವುದು. ಅಲ್ಪ ಪ್ರವಾಸದಿಂದ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಪ್ರಯಾಣದಲ್ಲಿ ಸಹ ಪ್ರಯಾಣಿಕರೊಂದಿಗೆ ನಿಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸದಿರಿ.

ಮಿಥುನ

03-Mithuna

ಮರೆಗುಳಿತನದಿಂದ ಭಾರಿ ಬೆಲೆ ತೆರಬೇಕಾಗುವುದು. ಹಾಗಾಗಿ ನೀವು ಕೈಕೊಳ್ಳಬೇಕಾಗಿರುವ ಕೆಲಸಗಳನ್ನು ಆದ್ಯತೆಯ ಪ್ರಕಾರ ಪಟ್ಟಿ ಮಾಡಿ ಬರೆದಿಟ್ಟುಕೊಳ್ಳಿರಿ. ಇದರಿಂದ ಕೆಲಸ ಮಾಡಲು ಅನುಕೂಲವಾಗುವುದು.

ಕಟಕ

04-Kataka

ಇವತ್ತು ಬುದ್ಧಿವಂತ ಜನರ ನಡುವೆ ಒಡನಾಟ ದೊರೆಯುವುದು. ಹಾಗೂ ಕೆಲವು ಮಹತ್ತರ ವಿಷಯಗಳನ್ನು ಅರಿಯುವಿರಿ. ಹಾಗಾಗಿ ವರ್ತಮಾನದಲ್ಲಿ ಸುಖ ಸಂತೋಷ ನೆಮ್ಮದಿಯನ್ನು ಕಾಣುವಿರಿ.

ಸಿಂಹ

05-Simha

ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಧೈರ್ಯಗೆಡದೆ ಮುನ್ನಡೆಯಿರಿ. ಅಡಚಣೆಗಳು ತಾನಾಗಿಯೇ ದೂರವಾಗುವುದು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುವುದು.

ಕನ್ಯಾ

06-Kanya

ದೂರದ ಊರಿನಲ್ಲಿ ವಾಸಿಸುವ ಯೋಗವಿರುತ್ತದೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ನಿಮ್ಮ ಜ್ಞಾನದ ಮಟ್ಟ ಪರೀಕ್ಷಿಸುವ ಸಂದರ್ಭ ಬರಬಹುದು. ನಿಮಗೆ ವಿದ್ಯೆ ಕಲಿಸಿದ ಗುರುಗಳ ಸ್ಮರಣೆ ಮಾಡಿಕೊಂಡು ಉತ್ತರಿಸಿ. ಜಯಶೀಲರಾಗುವಿರಿ.

ತುಲಾ

07-Tula

ಆರ್ಥಿಕವಾಗಿ ಅಲ್ಪ ಅನನುಕೂಲವಾದರೂ ಹಮ್ಮಿಕೊಂಡ ಕಾರ್ಯಗಳನ್ನು ಪೂರೈಸಲು ತೊಂದರೆ ಆಗುವುದಿಲ್ಲ. ಆರಂಭಿಸಿದ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುವವು. ಮಕ್ಕಳೊಂದಿಗೆ ಬೆರೆತು ಮನಸ್ಸು ಹಗುರ ಮಾಡಿಕೊಳ್ಳಿರಿ.

ವೃಶ್ಚಿಕ

08-Vrishika

ಸ್ನೇಹಿತರು ಆಡುವ ಮಾತುಗಳಿಂದ ನಿಮಗೆ ಬೇಸರ ಮೂಡುವುದು ಸಹಜ. ಆದರೆ ಆ ಮಾತುಗಳ ಹಿಂದಿನ ರಹಸ್ಯವನ್ನು ಅರಿಯಿರಿ. ಆಗ ಮನಸ್ಸು ನಿರಾಳವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಧನು

09-Dhanussu

ಹಿರಿಯರ ಮಾತನ್ನು ಧಿಕ್ಕರಿಸಿ ಹಮ್ಮಿಕೊಂಡ ಕಾರ್ಯದಲ್ಲಿ ಅಪಯಶಸ್ಸನ್ನು ಹೊಂದುವಿರಿ. ದೇಹಾಲಸ್ಯವಿದ್ದರೆ ವಿಶ್ರಾಂತಿ ಪಡೆಯಿರಿ. ನಿಮ್ಮ ಕೋಪತಾಪಗಳನ್ನು ಮಡದಿ ಮಕ್ಕಳ ಮೇಲೆ ಹಾಕದಿರಿ.

ಮಕರ

10-Makara

ಬಹುಕಾಲದಿಂದ ಬರಬೇಕಾಗಿದ್ದ ಹಣವು ನಿಮ್ಮ ಕೈಸೇರುವುದು. ನಿಮ್ಮ ಮಾತಿನ ವೈಖರಿಯಿಂದ ಕಚೇರಿಯ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದು. ಇದು ನಿಮ್ಮ ಸ್ನೇಹಿತರಿಗೆ ಅಚ್ಚರಿಯನ್ನುಂಟು ಮಾಡುವುದು.

ಕುಂಭ

11-Kumbha

ನಿಮ್ಮ ವೃತ್ತಿಯು ಸರಾಗವಾಗಿ ನಡೆಯುವುದು. ಪ್ರವೃತ್ತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಒಳಿತು. ವಿವೇಕಯುಕ್ತ ನಿರ್ಣಯ ಕೈಗೊಳ್ಳುವುದರಿಂದ ಸಮಾಜದಲ್ಲಿ ಗೌರವ ಮೂಡುವುದು.

ಮೀನ

12-Meena

ಯಾವುದೇ ಋುಣಾತ್ಮಕ ವಿಚಾರಗಳಿಗೆ ಕಿವಿಗೊಡದಿರುವುದು ಒಳಿತು. ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿರಿ. ನೀವು ಆಡುವ ಮಾತು ಪರರನ್ನು ನೋಯಿಸದಂತೆ ನೋಡಿಕೊಳ್ಳಿರಿ. ಸಮಾಜದಲ್ಲಿ ನಿಮ್ಮ ಸ್ಥಾನಮಾನಕ್ಕೆ ಚ್ಯುತಿ ಇರುವುದಿಲ್ಲ.