ನಿತ್ಯ ಭವಿಷ್ಯ ಅಕ್ಟೋಬರ್ 29, 2017 (ಭಾನುವಾರ)

0
525

ಮೇಷ

01-Mesha

ಈ ದಿನ ನಿಮ್ಮ ಹಠಮಾರಿತನ ಧೋರಣೆಯು ನಿಮ್ಮನ್ನು ಸಂದಿಗ್ಧಕ್ಕೆ ಸಿಲುಕಿಸುವುದು. ಅಷ್ಟಮ ಶನಿಯ ಬಿಡುಗಡೆ ಆಗಿದ್ದರೂ ಗುರುವಿನ ಬಲವಿಲ್ಲ. ಇದರಿಂದ ಆದಷ್ಟು ಸೋತು ಗೆಲ್ಲುವ ಹವ್ಯಾಸವನ್ನು ರೂಢಿಸಿಕೊಳ್ಳಿರಿ.

ವೃಷಭ

02-Vrishabha

ಈ ದಿನ ಆರೋಗ್ಯದ ಸಲುವಾಗಿ ಆಸ್ಪತ್ರೆಗೆ ಅಡ್ಡಾಡಬೇಕಾಗುವುದು. ಶೀತ, ಕೆಮ್ಮು, ಜ್ವರ ಎಂದು ಉದಾಸೀನ ಮಾಡದೆ ಸೂಕ್ತ ತಜ್ಞರ ಸಲಹೆಯನ್ನು ಸ್ವೀಕರಿಸಿರಿ. ಮಗನಿಂದ ಬರುವ ಕರೆಯು ಮನಸ್ಸಿಗೆ ಮುದ ನೀಡುವುದು.

ಮಿಥುನ

03-Mithuna

ಸತ್ಯದ ಹಾದಿಯಿಂದ ನಿಮ್ಮ ದಾರಿ ಸುಗಮವಾಗಲಿದೆ. ಬಂಧು ಬಾಂಧವರು ಮತ್ತು ಸ್ನೇಹಿತರು ಈ ದಿನ ನಿಮ್ಮ ಸಹಾಯಕ್ಕೆ ಹಸ್ತ ನೀಡುವರು. ಪ್ರಯಾಣದಲ್ಲಿ ತುಸು ಎಚ್ಚರಿಕೆಯಿಂದ ಇರಬೇಕು. ಆಂಜನೇಯ ಸ್ತೋತ್ರ ಪಠಿಸಿರಿ.

ಕಟಕ

04-Kataka

ಪಂಚಮ ಶನಿಯ ಕಾಡಾಟವಿದ್ದು, ಮಕ್ಕಳ ಪ್ರಗತಿಯು ನಿಮ್ಮ ಮಾನಸಿಕ ನಿದ್ದೆಯನ್ನು ಕೆಡಿಸುತ್ತದೆ. ಯಾವುದೇ ಗುರುವಿನ ಸ್ತೋತ್ರ ಪಠಿಸಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

ಸಿಂಹ

05-Simha

ಮನೆಯಿಂದ ಹೊರಗಿನ ವಾತಾವರಣವೇ ಹಿತವೆನಿಸುವುದು. ಆದರೆ ಮನೆಯಲ್ಲಿನ ಮಡದಿ ಮಕ್ಕಳ ಆರೈಕೆಯು ನಿಮ್ಮ ಜವಾಬ್ದಾರಿ ಆಗಿರುವುದರಿಂದ ಈ ದಿನ ಆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾರಿರಿ. ಮಡದಿಯ ಸಂಗಡ ಮನಬಿಚ್ಚಿ ಮಾತಾಡಿರಿ.

ಕನ್ಯಾ

06-Kanya

ಅನಗತ್ಯ ಭಯದಿಂದ ದೂರವಿರಿ. ನಿಮ್ಮ ಬಗ್ಗೆ ನೀವೇ ಬೇಸರ ಮಾಡಿಕೊಂಡರೆ ಹೇಗೆ? ಭಗವಂತ ನಿಮಗೆ ನೀಡಿದ ಬುದ್ಧಿಮತ್ತೆಯೇ ನಿಮ್ಮ ಜೀವನಕ್ಕೆ ಆಧಾರವಾಗಿರುವುದು. ಮತ್ತೊಬ್ಬರೊಡನೆ ನಿಮ್ಮನ್ನು ಹೋಲಿಸಿಕೊಂಡು ಕೀಳರಿಮೆಯಲ್ಲಿ ಕೊರಗದಿರಿ.

ತುಲಾ

07-Tula

ಸತ್ಯದ ಮಾರ್ಗದಲ್ಲಿ ಯಶಸ್ಸು ಇದೆ. ಹಾಗಾಗಿ ನಿಮ್ಮ ಇವತ್ತಿನ ಆರ್ಥಿಕ ಸ್ಥಿತಿಯ ಬಗ್ಗೆ ಮನೆಯವರೊಂದಿಗೆ ಹಂಚಿಕೊಳ್ಳಿರಿ. ಆರ್ಥಿಕ ಸಂಕಷ್ಟದಿಂದ ಹೊರ ಬರುವ ದಾರಿ ಗೋಚರಿಸುವುದು. ನಿಮ್ಮ ವೃತ್ತಿಯನ್ನು ಪ್ರೀತಿಸಿರಿ. ಮಗನ ಆರೋಗ್ಯದ ಕಡೆಗೂ ಲಕ್ಷ ಕೊಡಿರಿ.

ವೃಶ್ಚಿಕ

08-Vrishika

ಅತ್ಯಂತ ಭಾರವಾದ ವಸ್ತುವನ್ನು ಕೆಳಗೆ ಇಳಿಸಿದಾಗ ಆಗುವ ಸುಖ ಅನುಭವ ಇಂದು ನಿಮ್ಮದಾಗುವುದು. ಬೆಟ್ಟದಂತೆ ಬಂದ ಸಮಸ್ಯೆಯು ಕರಗಿ ನೀರಾಗುವ ಸಂದರ್ಭ ಬರುವುದು. ಗುರುವಿನ ಕೃಪಾಶೀರ್ವಾದವೇ ಅಂತಹದ್ದಿದೆ. ಆತ ತನ್ನ ನಂಬಿದವರನ್ನು ಕೈಬಿಡುವುದಿಲ್ಲ.

ಧನು

09-Dhanussu

ಈ ದಿನ ಕೆಲಸ ಕಾರ್ಯಗಳಲ್ಲಿ ಮಂದ ಪ್ರಗತಿ ಉಂಟಾಗುವುದು. ರಾತ್ರಿಯ ದುಸ್ವಪ್ನಗಳಿಂದ ಭಯಭೀತರಾಗಿರುವಿರಿ. ಈ ದಿನ ರಾತ್ರಿ ಮಲಗುವಾಗ ಆಂಜನೇಯ ಸ್ತೋತ್ರವನ್ನು ತಪ್ಪದೆ ಪಠಿಸಿರಿ. ಪ್ರಯಾಣದಲ್ಲಿ ಎಚ್ಚರಿಕೆ ಕರಲಿ.

ಮಕರ

10-Makara

ವ್ಯಯಸ್ಥಾನದ ಶನಿಯು ಆರ್ಥಿಕ ಮುಗ್ಗಟ್ಟನ್ನು ತಂದೊಡ್ಡುವ ಸಾಧ್ಯತೆ ಇದೆ. ಆದರೆ ಗುರುವಿನ ಶುಭ ದೃಷ್ಟಿ ನಿಮ್ಮ ರಾಶಿಯ ಮೇಲಿರುವುದರಿಂದ ಆಪತ್‌ ಬಾಂಧವರಂತೆ ಬರುವ ನಿಮ್ಮ ಸ್ನೇಹಿತರು ಸಹಕಾರ ನೀಡುವರು.

ಕುಂಭ

11-Kumbha

ಬಂಧುಗಳ ಆಗಮನವು ಮನಸ್ಸಿಗೆ ಮುದ ನೀಡುವುದು. ಬಹುದಿನದ ನಿರೀಕ್ಷೆಯು ಇಂದು ಫಲವನ್ನು ನೀಡುವುದು. ಹಾಗಾಗಿ ಒಂದು ಹಂತದ ಚಿಂತೆಗೆ ವಿರಾಮ ದೊರೆಯುವುದರಿಂದ ನಿಮ್ಮ ಮುಂದಿನ ಕಾರ್ಯಭಾರವು ಸುಲಲಿತವಾಗುವುದು.

ಮೀನ

12-Meena

ಇಂದು ಶುಭ ಸಮಾಚಾರವನ್ನು ಕೇಳುವಿರಿ. ಅದರ ಸಂಭ್ರಮದ ಆಚರಣೆಗೆ ನೀವು ಮತ್ತು ನಿಮ್ಮ ಸ್ನೇಹಿತರು ತಯಾರಿ ಮಾಡಿಕೊಳ್ಳುವಿರಿ. ಮತ್ತು ಈ ದಿನದ ಸಂಭ್ರಮಕ್ಕೆ ಕಾರಣರಾದ ಗುರುಹಿರಿಯರನ್ನು ಗೌರವಿಸಿರಿ.