ನಿತ್ಯ ಭವಿಷ್ಯ ಅಕ್ಟೋಬರ್ 30, 2017 (ಸೋಮವಾರ)

0
539

ಮೇಷ

01-Mesha

ಧನಾತ್ಮಕ ಚಿಂತನೆಯಿಂದಾಗಿ ಇಷ್ಟಕಾರ್ಯ ಸಿದ್ಧಿಯಾಗುವುದು. ದೇಹದಲ್ಲಿ ಉತ್ತಮ ಆರೋಗ್ಯ ಇರುವುದು. ಮನಸ್ಸು ಲವಲವಿಕೆಯಿಂದ ಕೂಡಿದ್ದು ನೂತನ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಬಂದು ಮಿತ್ರರೊಡನೆ ಭೋಜನ ಕೂಟದಲ್ಲಿ ಭಾಗವಹಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ವೃಷಭ

02-Vrishabha

ನಿಮ್ಮ ಕೆಲಸದ ಒತ್ತಡದ ನಡುವೆ ಮಕ್ಕಳೊಡನೆ ಕಾಲ ಕಳೆಯಲು ಆಗುತ್ತಿಲ್ಲ ಎಂಬ ಚಿಂತೆ ಕಾಡುವುದು. ದೇಹಕ್ಕೆ ವಿಶ್ರಾಂತಿಯ ನೆಪದಲ್ಲಿ ಕಚೇರಿಗೆ ರಜೆ ಹಾಕಿ ಮಕ್ಕಳೊಡನೆ ಕಾಲ ಕಳೆಯಿರಿ. ಮನಸ್ಸು ಹಗುರವಾಗುವುದು. ಮತ್ತು ಮುಂದಿನ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡುವಿರಿ.

ಮಿಥುನ

03-Mithuna

ಈ ದಿನ ಕೆಲಸ ಬಾಹುಳ್ಯದಿಂದ ಸರಿಯಾದ ಸಮಯಕ್ಕೆ ಆಹಾರ ಸೇವಿಸಲು ಆಗುವುದಿಲ್ಲ. ಇದೇ ಕಾರಣಕ್ಕೆ ಸಂಜೆಯ ವೇಳೆಗೆ ಅಲ್ಪ ಆಲಸ್ಯ ಕಾಡುವ ಸಂಭವವಿದೆ. ಮನೆಗೆದ್ದು ಮಾರುಗೆಲ್ಲು ಎನ್ನುವಂತೆ ಮೊದಲು ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.

ಕಟಕ

04-Kataka

ಇಂದು ನಿಮ್ಮ ಮಾತೇ ಅಂತಿಮ. ಕೆಲಸ ಕಾರ್ಯಗಳಲ್ಲಿ ನೀವು ತೆಗೆದುಕೊಂಡ ತೀರ್ಮಾನವನ್ನು ಎಲ್ಲರೂ ಪಾಲಿಸುವರು. ಶತ್ರು ನಾಶ, ಆರೋಗ್ಯ ವೃದ್ಧಿ, ಉತ್ಸಾಹ ಉಂಟಾಗುವುದು. ಕೌಟುಂಬಿಕ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೆಲವು ವಿಚಾರಗಳನ್ನು ಬಹಿರಂಗಗೊಳಿಸದಿರುವುದೇ ಮೇಲು.

ಸಿಂಹ

05-Simha

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಅಂತೆಯೇ ನೀವು ಮುಂದೆ ಮಾಡಬೇಕೆನ್ನುವ ಕ್ರೀಯಾಶೀಲ ಕೆಲಸಗಳಿಗೆ ಸ್ನೇಹಿತರ ನೆರವು ಪಡೆಯುವಿರಿ. ಹಿರಿಯರೊಡನೆ ಅನಗತ್ಯ ವಾದ ಬೇಡ. ಸಂಬಂಧಿಕರೊಂದಿಗೆ ನಿಷ್ಠುರ ಮಾತುಕತೆ ಮಾಡದಿರುವುದು ಕ್ಷೇಮಕರ.

ಕನ್ಯಾ

06-Kanya

ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಆಗುವ ಸಂಭವವಿದೆ. ಮನೆ ವೈದ್ಯರ ಸಲಹೆ ಪಡೆಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇದ್ದು ಪರೀಕ್ಷೆಯಲ್ಲಿ ಸಮರ್ಪಕವಾಗಿ ಉತ್ತರಿಸುವಿರಿ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಅಲ್ಪ ಹಿನ್ನಡೆ ತೋರುವುದು. ಶಿವನ ಆರಾಧನೆ ಮಾಡುವುದು ಒಳ್ಳೆಯದು.

ತುಲಾ

07-Tula

ಸಿವಿಲ್‌ ಎಂಜಿನಿಯರ್‌ ಮತ್ತು ಕಟ್ಟಡ ಸಾಮಗ್ರಿ ಮಾರಾಟಗಾರರಿಗೆ ಉತ್ತಮ ದಿನ. ನಿಮ್ಮ ಯೋಜನೆಯಂತೆ ಕಾರ್ಯಗಳು ಸುಲಲಿತವಾಗುವುದು. ಮಕ್ಕಳು ಮಾಡುವ ತುಂಟತನದಿಂದ ಬೇಸರ ಮೂಡುವುದು. ಆಧ್ಯಾತ್ಮ ಸೇವಾ ಕಾರ್ಯದಲ್ಲಿ ತೊಡಗಿಕೊಂಡರೆ ಮನಸ್ಸು ಶಾಂತವಾಗುವುದು.

ವೃಶ್ಚಿಕ

08-Vrishika

ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಮೊಬೈಲ್‌, ಟಿ.ವಿ. ಮುಂತಾದ ಸಂವಹನ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ ಒದಗಿ ಬರುವುದು. ಆಂಜನೇಯ ಮಂತ್ರ ಪಠಿಸಿರಿ ಮತ್ತು ದೀನದಲಿತರಿಗೆ ಆಹಾರ ನೀಡಿರಿ.

ಧನು

09-Dhanussu

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಈ ದಿನ ನೀವಾಡುವ ಮಾತಿನಲ್ಲಿ ತಪ್ಪನ್ನು ಹುಡುಕುವ ಜನರು ಎದುರಾಗುವರು. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದು ಸಾಧುವಲ್ಲ. ಸರಿಯಾದ ಸಮಯಕ್ಕೆ ಭೋಜನ ಸ್ವೀಕರಿಸಿರಿ.

ಮಕರ

10-Makara

ಸಜ್ಜನರ ಸಂಘವದು ಹೆಜ್ಜೇನು ಸವಿದಂತೆ ಎನ್ನುವಂತೆ ಈ ದಿನ ಉಲ್ಲಾಸದಿಂದ ಸಮಯ ಕಳೆಯುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ದೇಹದಲ್ಲಿ ಉತ್ತಮ ಆರೋಗ್ಯ ಇರುವುದು. ಧನಾತ್ಮಕ ಚಿಂತನೆಯಿಂದ ಮನಸ್ಸು ಪ್ರಫುಲ್ಲಿತವಾಗುವುದು. ಹಿರಿಯರ ಆರೋಗ್ಯದ ಕಡೆ ಗಮನ ನೀಡಿರಿ.

ಕುಂಭ

11-Kumbha

ಈ ದಿನ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಕಾಣಬೇಕಾಗುವುದು. ನೂತನ ಕಾರ್ಯಗಳನ್ನು ಮುಂದೂಡುವುದು ಒಳ್ಳೆಯದು. ಊಟದಲ್ಲಿ ರುಚಿ ಕಡಿಮೆ ಎನಿಸುವುದು. ಆಪ್ತ ಸ್ನೇಹಿತರಿಂದ ಬೇಸರ ಉಂಟಾಗುವ ಸಾಧ್ಯತೆಯಿದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ.

ಮೀನ

12-Meena

ಹುಡುಕುವ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ಈ ದಿನ ನಿಮ್ಮ ಕಾರ್ಯಗಳು ಶೀಘ್ರಗತಿಯಲ್ಲಿ ಸಾಗುವುದು. ವಿವಾಹ ಯೋಗ್ಯರಿಗೆ ಕಂಕಣಭಾಗ್ಯ ಒದಗಿ ಬರುವುದು. ಕೆಲವರಿಗೆ ವಿದೇಶ ಪ್ರವಾಸದ ಆಮಂತ್ರಣ ಬರುವ ಸಾಧ್ಯತೆ ಇದೆ. ಗುರು-ಹಿರಿಯರ ಹಿತವಚನವನ್ನು ಪಾಲಿಸಿರಿ.