ನಿತ್ಯ ಭವಿಷ್ಯ 2 ನವೆಂಬರ್ 2017 (ಗುರುವಾರ)

0
426

ಮೇಷ

01-Mesha

ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಉಲ್ಲಾಸ, ಕೋರ್ಟು ಕಚೇರಿಗಳಲ್ಲಿ ಜಯ ನಿಮ್ಮ ಕಡೆಗೆ ಆಗಿ ವಿಜಯ ಪತಾಕೆಯನ್ನು ಹಾರಿಸುವಿರಿ. ಸಂಬಂಧಿಯಿಂದ ಮಹತ್ವದ ಕೆಲಸಗಳಲ್ಲಿ ನೆರವು ದೊರೆಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮ.

ವೃಷಭ

02-Vrishabha

ವ್ಯಾಪಾರ ವ್ಯವಹಾರಗಳಲ್ಲಿ ತುಸು ನಷ್ಟ ಅನುಭವಿಸುವಿರಿ. ಕುಹಕದ ಮಾತುಗಳಿಗೆ ಬೆಲೆ ನೀಡಬೇಡಿ. ಕೋಪ ಹಿಡಿತದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ದುರ್ಗಾದೇವಿಯ ಪ್ರಾರ್ಥನೆ ಈದಿನ ಒಳ್ಳೆಯದು.

ಮಿಥುನ

03-Mithuna

ಬ್ಯಾಂಕಿನ ವ್ಯವಹಾರಗಳನ್ನು ಮುಗಿಸಿಕೊಳ್ಳಲು ಇಂದು ಸೂಕ್ತ ಸಮಯ. ಮನೆ ಸಾಲ ಅಥವಾ ವಾಹನ ಸಾಲವು ಮಂಜೂರು ಆಗುವ ಸಾಧ್ಯತೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವರು. ಹಣದ ಚಿಂತೆ ಬೇಡ.

ಕಟಕ

04-Kataka

ರಾಜಿ ಪಂಚಾಯಿತಿಯಲ್ಲಿ ಭಾಗವಹಿಸಿ ಮುಖಭಂಗಕ್ಕೆ ಒಳಗಾಗುವಿರಿ. ಊರ ಉಸಾಬರಿ ನಿಮಗೇಕೆ ಸುಮ್ಮನಿದ್ದುಬಿಡಿ. ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯಕ್ಕೆ ಒಂದು ವಿರಾಮ ದೊರೆಯಲಿದೆ. ಗುರುಸ್ತೋತ್ರ ಪಠಿಸಿರಿ.

ಸಿಂಹ

05-Simha

ಹೆಂಡತಿ ಒಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ ಎನ್ನುವಂತೆ ಈದಿನ ನಿಮ್ಮ ಮಡದಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ. ಪತ್ನಿ-ಪುತ್ರರಲ್ಲಿಯ ಅಸಮಾಧಾನ ತಿಳಿಗೊಳ್ಳುವುದು. ಆರೋಗ್ಯ ಉತ್ತಮ.

ಕನ್ಯಾ

06-Kanya

ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಪ್ರಯಾಣದಲ್ಲಿ ಎಚ್ಚರ. ಶಿರೋವೇದನೆ ಅಥವಾ ನೇತ್ರದೋಷಗಳು ಕಂಡು ಬರುವುದು. ಸೂಕ್ತ ವೈದ್ಯಕೀಯ ಉಪಚಾರ ತೆಗೆದುಕೊಳ್ಳಿ. ಆರ್ಥಿಕ ಮುಗ್ಗಟ್ಟನ್ನು ಎದುರಿಸುವಿರಿ.

ತುಲಾ

07-Tula

ಅಧಿಕ ತಿರುಗಾಟದಿಂದ ದೇಹಾಲಸ್ಯ, ಅಕಾಲ ಭೋಜನ, ಸಂಗಾತಿಯ ಮುನಿಸು, ಕಾರ್ಯಕ್ಷೇತ್ರದಲ್ಲಿ ಕೆಲಸಗಾರರ ಅಸಹಕಾರ ಗುರು ರಾಘವೇಂದ್ರರ ಸ್ಮರಣೆ ನಿರಂತರ ಮಾಡಿ. ಬರಬೇಕಾಗಿದ್ದ ಹಣವು ವಿಳಂಬವಾಗಿ ದೊರೆಯುವುದು.

ವೃಶ್ಚಿಕ

08-Vrishika

ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಾಂಶ ಬರುವುದು. ಸಂತೋಷದಿಂದ ಕೆಲಸ ಕಾರ್ಯಗಳನ್ನು ಮುಗಿಸುವಿರಿ. ಆಂಜನೇಯ ಸ್ತೋತ್ರವನ್ನು ಪಠಿಸಿ. ಆಂಜನೇಯ ನಿಮಗೆ ಉತ್ತಮ ಶಿಕ್ಷ ಣವನ್ನು ನೀಡುವರು ಮತ್ತು ಜನರ ನಿಜವಾದ ಬಣ್ಣವನ್ನು ಬಯಲು ಮಾಡಿಸುವರು.

ಧನು

09-Dhanussu

ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡು ಬರುವುದು. ಪತಿ-ಪತ್ನಿಯರ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮಕ್ಕಳು ಯಾರ ಕಡೆ ತೀರ್ಮಾನ ನೀಡಬೇಕೆಂದು ಪೇಚಾಡುವರು. ನಿಮ್ಮನ್ನು ನೀವೇ ಸಾಂತ್ವನಗೊಳಿಸಿಕೊಂಡು ಸಂಸಾರದಲ್ಲಿ ನೆಮ್ಮದಿಯನ್ನು ತಂದುಕೊಳ್ಳಿ.

ಮಕರ

10-Makara

ಸದಾ ಪರರಿಗೆ ದುಡಿಯುವ ನೀವು ಇಂದು ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿರಿ. ಸಂಗಾತಿಯನ್ನು ಹೊರಗೆ ಸುತ್ತಾಡಿಸಿಕೊಂಡು ಬನ್ನಿ. ಮನೆ ಗೆದ್ದು ಮಾರು ಗೆಲ್ಲು ಎನ್ನುವಂತೆ ಮನೆಯ ಸದಸ್ಯರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಿರಿ.

ಕುಂಭ

11-Kumbha

ವ್ಯಾಪಾರ-ವ್ಯವಹಾರದಲ್ಲಿ ನೀವು ನಿರೀಕ್ಷಿಸಿದಷ್ಟು ಆದಾಯ ಬರದೇ ಇರುವ ಸಾಧ್ಯತೆ. ಪ್ರಯಾಣದಲ್ಲಿ ಸಣ್ಣ ಪುಟ್ಟ ಅಪಘಾತಗಳು ತೋರುವುದು. ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿ.

ಮೀನ

12-Meena

ಅತ್ಯಂತ ಭಾವುಕರಾಗುವ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರವನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ದೊರೆಯುವುದು. ಆದ್ದರಿಂದ ದುರ್ಗಾ ಜಪ ಮಾಡಿ. ಹಣಕಾಸಿನ ತೊಂದರೆ ಇರುವುದಿಲ್ಲ.