ನಿತ್ಯ ಭವಿಷ್ಯ: 16 ಫೆಬ್ರವರಿ 2018

0
710
ದಿನ ಭವಿಷ್ಯ

Astrology in kannada | kannada news

ಮೇಷ:

ಆಪ್ತ ಬಂಧುಗಳಿಗೆ ಆಕಸ್ಮಿಕ ಸಹಾಯ ನೀಡುವಿಕೆ ಪ್ರಶಂಸೆ, ನಿರುದ್ಯೋಗಿಗಳಿಗೆ ಅಧಿಕಾರಿಗಳಿಂದ ಶುಭ ಸಂದೇಶ, ಮನೋಲ್ಲಾಸ.

ವೃಷಭ:

ಮನಸ್ಸಿನ ವಿರುದ್ಧ ನಡೆಯುವುದನ್ನು ತಪ್ಪಿಸಲು ಯತ್ನ, ಸಜ್ಜನರ ಸಮಾಗಮದಿಂದ ಮನೆಯಲ್ಲಿ ಧರ್ಮ ಕಾರ್ಯಕ್ಕೆ ಚಾಲನೆ, ಹರ್ಷ.

ಮಿಥುನ:

ನೆಂಟರ ಅಲಕ್ಷ್ಯದಿಂದ ಪುಟ್ಟ ಕಾರ್ಯಗಳಿಗೆ ವಿಘ್ನ, ಸಾಮಾಜಿಕ ಸಂಘಟನೆ ಬಗ್ಗೆ ಆಪ್ತೇಷ್ಟರೊಡನೆ ಚರ್ಚೆ. ಮೂಲೋದ್ದೇಶಕ್ಕೆ ಧಕ್ಕೆ.

ಕಟಕ:

ಕೆಲಸಗಳಲ್ಲಿಯ ಅಡಚಣೆ ದೂರಾಗುವುದರಿಂದ ಮನಸ್ಸಿಗೆ ಸಮಾಧಾನ. ಅಧಿಕಾರಿ ವರ್ಗದವರಿಗೆ ಉದ್ಯೋಗದಲ್ಲಿ ಅಧಿಕ ಹೊರೆ.

ಸಿಂಹ:

ಶುಭ ಕಾರ್ಯಗಳ ಅನುಸರಣೆಯಿಂದ ಮಾನಸಿಕ ತೃಪ್ತಿ, ವಾಣಿಜ್ಯದಲ್ಲಿನ ಬದಲಾವಣೆಯಿಂದ ಅರ್ಥ ವಿಚಾರದಲ್ಲಿ ಸಾಧಾರಣ ಪ್ರಗತಿ.

ಕನ್ಯಾ:

ಹಿರಿಯ ಜತೆಗೆ ಕಲಿತು ನಡೆಯುವ ವಿಚಾರಕ್ಕೆ ಬದ್ಧ, ವ್ಯಾಪಾರಿಗಳಲ್ಲಿ ಬಹಳಷ್ಟು ಆಶ್ಚರ‌್ಯಕರ ಸುದ್ದಿ ಬರುವುದರಿಂದ ಉಲ್ಲಾಸ.

ತುಲಾ:

ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಸರಳ ನೆರವು. ಹಿರಿಯರಿಗೆ ನೀಡುವ ಗೌರವದ ಫಲವಾಗಿ ನೀವು ಶುಭ ಫಲ ಪಡೆಯುವಿರಿ.

ವೃಶ್ಚಿಕ:

ಕೆಲಸ ಕಾರ್ಯಗಳು ತಕ್ಷಣ ನೆರವೇರುವುದರಿಂದ ಉತ್ಸಾಹವೃದ್ಧಿ ವಿವಾದಾಸ್ಪದ ಸಮಸ್ಯೆಗಳಿಗೆ ತೆರೆ ಎಳೆಯುವಿಕೆಯಿಂದ ಸಂತಸ.

ಧನಸ್ಸು:

ಆರ್ಥಿಕವಾಗಿ ಮನೆಯಲ್ಲಿ ಸುಧಾರಣೆ ಕಂಡು ಬಂದರೂ ಖರ್ಚು ಹೆಚ್ಚಳವಾಗಿ ಬೇಸರ. ಹಿತ ಶತ್ರುಗಳಿಂದ ಹೆಜ್ಜೆಗೆ ಹೆಜ್ಜೆಗೆ ಅಡೆತಡೆ.

ಮಕರ:

ದೈವ ಕಾರ್ಯಗಳಿಗೆ ಧನ ಮೀಸಲಿಡುವ ಯೋಜನೆಗೆ ಎಲ್ಲರ ಸಹಕಾರ. ಸುತ್ತಲಿನವರ ಅಪಹಾಸ್ಯ ಮಾತಿನಿಂದ ಬೇಸರ.

ಕುಂಭ:

ಕಚೇರಿ ಕೆಲಸಗಳಲ್ಲಿ ಶುಭ ಬದಲಾವಣೆ, ಆಪ್ತರ ಸಹಕಾರದಿಂದ ಇಷ್ಟ ಕಾರ್ಯಗಳ ನಿರ್ವಹಣೆ, ಗೌರವ ಲಾಭ.

ಮೀನ:

Meena1

ತರ್ಕ ಶಕ್ತಿಯಿಂದ ಕಾರ್ಯ ವಿಧಾನದಲ್ಲಿ ಗೆಲ್ಲುವ ಯೋಜನೆ ಚತುರ ರಾಜಕಾರಣಿಗಳಿಗೆ ಸದವಕಾಶ, ಸಂಬಂಧಿಗಳ ಭೇಟಿಯಿಂದ ಸಂತಸ.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!