ದಿನ ಭವಿಷ್ಯ: ಜನವರಿ 17, 2018

0
1183
ದಿನ ಭವಿಷ್ಯ

ಮೇಷ:

ಈ ದಿನ ತುಸು ಅನಾರೋಗ್ಯ ಕಾಡುವ ಸ್ಥಿತಿ ಇದೆ. ಆದರೆ ರೋಗ ನಿರೋಧಕ ಶಕ್ತಿ ನಿಮ್ಮಲ್ಲಿರುವುದರಿಂದ ಹೆಚ್ಚಿಗೆ ಚಿಂತಿಸುವ ಅಗತ್ಯವಿಲ್ಲ. ಇದರ ಹೊರತಾಗಿ ನೀವು ಇಂದು ಹೊಸ ಗೆಳೆಯನ ಭೇಟಿ ಮಾಡುವಿರಿ. ಆತನಿಂದ ನಿಮಗೆ ಅನುಕೂಲವಾಗುವುದು.

ವೃಷಭ:

ಕೋರ್ಟು ಕಚೇರಿಯ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರುವುದು. ಆದರೆ ಅದಕ್ಕಾಗಿ ಇಂದು ನೀವು ಖರ್ಚು ಮಾಡಬೇಕಾಗುವುದು. ನಗದು ಹಣವನ್ನು ಒಯ್ಯುವಾಗ ಎಚ್ಚರಿಕೆಯಿಂದ ಇರಿ. ವಿನಾಕಾರಣ ಮತ್ತೊಬ್ಬರ ವಿಷಯದಲ್ಲಿ ಮಧ್ಯೆ ಪ್ರವೇಶಿಸಬೇಡಿ.

ಮಿಥುನ:

ನಯವಾದ ಮಾತುಗಳಿಂದಲೇ ನಿಮ್ಮ ಗೆಳೆಯರು ಇಂದು ನಿಮ್ಮನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಆದರೆ ಗುರುವಿನ ಕೃಪೆ ಇರುವುದರಿಂದ ಈ ಬಗ್ಗೆ ನಿಮಗೆ ಮೊದಲೇ ಸುಳಿವು ದೊರೆಯುವುದು. ಗುರು ಸ್ತೋತ್ರವನ್ನು ಪಠಿಸಿ.

ಕಟಕ:

ನಿಮ್ಮ ಕೆಲಸಕಾರ್ಯದ ಬದಲಾವಣೆಯ ಬಗ್ಗೆ ಅತಿಯಾದ ಆತ್ಮವಿಶ್ವಾಸ ಬೇಡ. ತಾಳ್ಮೆಯ ನಡೆಯು ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ. ಈ ದಿನ ಹರ್ಷದಾಯಕ ವಾರ್ತೆಯನ್ನು ಕೇಳುವಿರಿ. ವಿದ್ಯಾಬುದ್ಧಿಯಲ್ಲಿ ಯಶಸ್ಸನ್ನು ಹೊಂದುವಿರಿ.

ಸಿಂಹ:

ಎದುರಾಳಿಯ ಬಲಾಬಲ ತಿಳಿದು ಹೋರಾಡಿದಲ್ಲಿ ನೀವು ಯಶಸ್ಸನ್ನು ಹೊಂದುವಿರಿ. ಈ ಬಗ್ಗೆ ಸ್ವಲ್ಪ ಉದಾಸೀನ ತೋರಿದರೂ ಸಹ ಶತ್ರುವಿನ ಪ್ರಾಬಲ್ಯ ಜಾಸ್ತಿ ಆಗುವುದು. ಕೌಟುಂಬಿಕ ಜೀವನದಲ್ಲಿನ ಸಮಸ್ಯೆ ನಿವಾರಣೆಗಾಗಿ ಈಶ್ವರ ದೇವರ ಧ್ಯಾನ ಮಾಡಿ.

ಕನ್ಯಾ:

ಈ ದಿನ ಮಂಗಳ ಕಾರ್ಯದಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಬೇಕಾಗುವುದು. ದೂರದಿಂದ ಬರುವ ವಾರ್ತೆಯು ನಿಮ್ಮ ಸಂತೋಷವನ್ನು ಹೆಚ್ಚಿಸುವುದು. ಕಚೇರಿ ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ಪಡೆಯುವಿರಿ.

ತುಲಾ:

ಮಾತು ಬಲ್ಲವನಿಗೆ ಜಗಳವಿಲ್ಲ’ ಎಂದರು ಹಿರಿಯರು. ಅಂತೆಯೆ ಮನೋಕಾರಕ ಚಂದ್ರ ದ್ವಿತೀಯ ವಾಕ್‌ಸ್ಥಾನದಲ್ಲಿ ಸಂಚರಿಸುವ ಮೂಲಕ ಈ ದಿನ ನಿಮಗೆ ಶುಭವನ್ನುಂಟು ಮಾಡುವರು. ಆ ಮೂಲಕ ಹಣಕಾಸಿನ ನೆರವು ದೊರೆಯುವುದು

ವೃಶ್ಚಿಕ:

ಚಂಚಲ ಸ್ವಭಾವವು ಈ ದಿನದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನುಂಟು ಮಾಡುವುದು. ದ್ವಿತೀಯ ವಾಕ್‌ ಸ್ಥಾನದಲ್ಲಿನ ಶನಿಯು ಮಾತಿನ ಮೂಲಕ ಅಪಶಬ್ದಗಳನ್ನು ನುಡಿಸಿ ಸಾರ್ವಜನಿಕವಾಗಿ ಅಪಮಾನಕ್ಕೆ ಒಳಗಾಗುವ ಸಂಭವವಿರುತ್ತದೆ. ಈಶ್ವರ ದೇವರನ್ನು ಪ್ರಾರ್ಥಿಸಿ.

ಧನಸ್ಸು:

ದೇಹಾಲಸ್ಯದಿಂದ ಹಮ್ಮಿಕೊಂಡ ಕಾರ್ಯಗಳು ಮುಂದೂಡಲ್ಪಡುವುದು. ಮನೆಯ ಸದಸ್ಯರೊಡನೆ ವಿನಾಕಾರಣ ಮನಃಸ್ತಾಪಗಳು ಉಂಟಾಗುವುದು. ಗುರುವಿನ ಅನುಗ್ರಹದಿಂದ ಹಿರಿಯರೊಬ್ಬರ ಮಾರ್ಗದರ್ಶನ ದೊರೆತು ಮನಸ್ಸು ನಿರಾಳವಾಗುವುದು.

ಮಕರ:

ಮನೋಕಾಮನೆಗಳು ಪೂರ್ಣಗೊಳ್ಳುವ ಸಮಯ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಉಂಟಾದರೆ ಕೆಲವರು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕುಂಭ:

ಕೌಟುಂಬಿಕ ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ ಕಂಡುಬರುವುದು. ಆದರೆ ನಿಮ್ಮವರೇ ಆದ ಹತ್ತಿರದ ಜನರು ನಿಮಗೆ ತಿಳಿಯದಂತೆ ಅಡ್ಡಗಾಲು ಹಾಕುವರು. ಅಂತಹವರ ಬಗ್ಗೆ ಜಾಗ್ರತೆಯಿಂದ ಇರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಮೀನ:

ನಿಮ್ಮಲ್ಲಿ ಅನೇಕ ರೀತಿಯ ಯೋಜನೆಗಳಿವೆ. ಅದಕ್ಕೆ ತಕ್ಕ ಬುದ್ಧಿಶಕ್ತಿಯು ಇದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುವಿರಿ. ಗುರುವಿನ ಸ್ತೋತ್ರವನ್ನು ಪಠಿಸಿ. ಹಣಕಾಸಿನ ತೊಂದರೆ ಸ್ವಲ್ಪಮಟ್ಟಿಗೆ ಕಾಡುವುದು.