ದಿನ ಭವಿಷ್ಯ: 19 ಡಿಸೆಂಬರ್ 2017

0
1093
ದಿನ ಭವಿಷ್ಯ

ಮೇಷ:

ಖಾಸಗಿ ರಂಗದಲ್ಲಿನ ಉದ್ಯೋಗಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಕುಟುಂಬದಲ್ಲಿ ಅನವಶ್ಯಕ ಚರ್ಚೆಯಿಂದ ಕೊಂಚ ಅಶಾಂತಿ.

ವೃಷಭ:

ಮಾತಾ-ಪಿತರಿಂದ ಆರ್ಥಿಕ ಸಹಾಯ, ಪತ್ನಿಯ ಸಹಕಾರದಿಂದ ಪ್ರಯಾಣಕ್ಕೆ ಸಿದ್ಧತೆ. ಕ್ಷೇತ್ರ ದರ್ಶನದಿಂದ ಮನಸ್ಸಿಗೆ ನೆಮ್ಮದಿ.

ಮಿಥುನ:

ವ್ಯಾಪಾರ ವಹಿವಾಟುಗಳಲ್ಲಿ ನಿರೀಕ್ಷೆಗೆ ಮೀರಿ ಲಾಭ. ಪ್ರೀತಿ ಪಾತ್ರರಿಂದ ಶುಭ ವಾರ್ತೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಸಹಾಯ.

ಕರ್ಕ:

ಅಹಿತಕರ ಘಟನೆ ವಾರ್ತೆಗಳಿಂದ ಭೀತಿ. ಪತ್ನಿಗೆ ಆರೋಗ್ಯದಲ್ಲಿ ಏರುಪೇರು. ಅನವಶ್ಯಕ ವಿಚಾರಗಳಿಂದ ಕ್ಲೇಶ, ಅಶಾಂತಿ.

ಸಿಂಹ:

ವ್ಯಾಪಾರಿಗಳಿಗೆ, ವೈದ್ಯರುಗಳಿಗೆ ನಿರೀಕ್ಷಿತ ಚೇತರಿಕೆ. ಪ್ರೀತಿಯ ವ್ಯಕ್ತಿಗಳ ಭೇಟಿಯಿಂದ ಸಹಾಯ. ಮನಸ್ಸಿಗೆ ನೆಮ್ಮದಿ.

ಕನ್ಯಾ:

ತಾಯಿಯ ಅನಾರೋಗ್ಯದಿಂದ ಆರ್ಥಿಕವಾಗಿ ಅಧಿಕ ಖರ್ಚು. ಹಳೆ ವಾಹನ ಖರೀದಿಯಿಂದಾಗಿ ಕಿರಿಕಿರಿ. ಮನೆಯಲ್ಲಿ ಅಶಾಂತಿ.

ತುಲಾ:

ಮಿತ್ರನ ಹೊಸ ವಾಹನದಲ್ಲಿ ದೂರ ಪ್ರಯಾಣ, ಸೋದರನ ಭೇಟಿಯಿಂದ ಸುಖ ಭೋಜನ. ಸಾಧು-ಸಂತರ ದರ್ಶನದಿಂದ ನೆಮ್ಮದಿ.

ವೃಶ್ಚಿಕ:

ಕುಟುಂದಲ್ಲಿ ಸಂಗಾತಿ ಬಗ್ಗೆ ಅನವಶ್ಯಕ ಚರ್ಚೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚುಗಳಿಂದ ಬೇಸರ. ನಿರುದ್ಯೋಗಿಗಳಿಗೆ ಪರದಾಟ.

ಧನು:

ಹೊಸ ವಾಹನದಿಂದ ಪ್ರಯಾಣ ಸೌಖ್ಯ. ಆಪ್ತ ಬಂಧುಗಳ, ಮಿತ್ರರ ಭೇಟಿ. ಶುಭ ವಾರ್ತೆಯಿಂದ ಸಂತಸದ ವಾತಾವರಣ.

ಮಕರ:

ಸಂಶೋಧಕರು, ಲೇಖಕರು, ಚಿತ್ರ ಕಲಾವಿದರಿಗೆ ಸೂಕ್ತ ಗೌರವ ಲಾಭ. ಹಿನ್ನಡೆ ಕಂಡ ಆರ್ಥಿಕ ಸಂಕಟ ಕೊಂಚ ದೂರ.

ಕುಂಭ:

ಆರೋಗ್ಯ ಸುಧಾರಣೆಯ ಸುದ್ದಿಯಿಂದ ಬಂಧುಗಳ ಆಗಮನ. ಸೋದರಿಯ ವಿವಾಹಕ್ಕೆ ಹಿರಿಯರಿಂದ ಮನ್ನಣೆ, ಸಹಾಯ.

ಮೀನ:

ದೂರದ ಸಂಬಂಧಿಗಳಿಂದ ಹಿತ ವಚನ, ಸಹಾಯ. ಮನೆಯ ಗೌರವ ಹೆಚ್ಚಳಕ್ಕೆ ಹಿರಿಯ ಸಹೋದರನ ಸಹಕಾರ, ಸಂತಸ.