ನಿತ್ಯ ಭವಿಷ್ಯ: 21 ಫೆಬ್ರವರಿ 2018

0
306
ದಿನ ಭವಿಷ್ಯ

Astrology in kannada | kannada news

ಮೇಷ:

ಮಹತ್ವಾಕಾಂಕ್ಷೆಯ ಸಿದ್ಧಿಗಾಗಿ ಈ ದಿನ ತುಂಬ ಶ್ರಮ ಪಡಬೇಕಾಗುವುದು. ಗುರಿ ತಲುಪಲು ಹೊಸ ಅವಕಾಶ ಒದಗಿ ಬರುವುದು. ನೆಚ್ಚಿನ ಸ್ನೇಹಿತರು ಇಂದು ನಿಮಗೆ ಸಹಾಯಕರಾಗಿ ಸೇವೆ ಸಲ್ಲಿಸುವರು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಷಭ:

ನೀವು ಇಂದು ಉತ್ತಮ ನಿರ್ಧಾರವನ್ನು ತಳೆಯುವಿರಿ. ಮಗನು ಮಾಡಿದ ಸಾಲವನ್ನು ತೀರಿಸುವತ್ತ ಸಂಗಾತಿಗೆ ಪ್ರೇರೇಪಿಸುವಿರಿ. ಇದಕ್ಕೆ ಸಂಗಾತಿಯು ಸಮ್ಮತಿಸುವುದರಿಂದ ನಿಮಗೆ ಹರ್ಷವುಂಟಾಗುವುದು. ಈ ದಿನ ಬಾಳಿನಲಿ ನೆಮ್ಮದಿಯ ದಿನವಾಗಿದೆ.

ಮಿಥುನ:

ಬರೇ ಆಲೋಚಿಸುತ್ತಾ ಕುಳಿತರೆ ಹಣವು ಮನೆಗೆ ಬಂದು ಬೀಳುವುದಿಲ್ಲ. ಅದಕ್ಕಾಗಿ ಸ್ವಲ್ಪವಾದರೂ ಶ್ರಮ ಪಡಬೇಕಾಗುತ್ತದೆ. ಸೂಕ್ತ ತಜ್ಞರ ಸಲಹೆ ಪಡೆದು ನೂತನ ಕಾರ್ಯವನ್ನು ಆರಂಭಿಸಿರಿ. ಜೀವನದಲ್ಲಿ ಯಶಸ್ಸನ್ನು ಕಾಣುವಿರಿ.

ಕಟಕ:

ನಿಮ್ಮ ಮಾತಿನ ಪ್ರಭಾವಕ್ಕೆ ಒಳಗಾಗಿ ಎಲ್ಲರೂ ನಿಮ್ಮನ್ನು ಈ ದಿನ ಬೆಂಬಲಿಸುವರು. ಅದರಲ್ಲೂ ಅವಕಾಶವಾದಿಗಳು, ಹೊಣೆಗೇಡಿಗಳು ನಿಮ್ಮ ಜೊತೆ ಸೇರಿ ನಿಮಗೆ ಅವಮಾನ ಪ್ರಸಂಗಗಳನ್ನು ಹುಟ್ಟು ಹಾಕುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರದಿಂದಿರಿ.

ಸಿಂಹ:

ನೀವು ಹಮ್ಮಿಕೊಂಡ ಕಾರ್ಯದಲ್ಲಿ ಗುರುವಿನ ರಕ್ಷೆ ಇದೆ. ಹಾಗಂತ ಎಲ್ಲಾ ಕಡೆಯಲ್ಲೂ ನೀವು ಗುರುಗಳನ್ನು ಕರೆದುಕೊಂಡು ಹೋಗುವುದಿಲ್ಲ. ನಿಮಗೆ ಅತ್ಯಂತ ಆತ್ಮೀಯರ ಬಳಿ ನಿಮ್ಮ ಕಾರ್ಯಯೋಜನೆ ಬಗ್ಗೆ ಮಾತನಾಡಿರಿ. ಇದರಿಂದ ಅನುಕೂಲವಾಗುವುದು.

ಕನ್ಯಾ:

ಶ್ರಮಪಟ್ಟು ಗಳಿಸಿದ ಹಣವು ಈ ದಿನ ಕರಗಿ ಹೋಗುವ ಸಾಧ್ಯತೆಯಿದೆ. ಈ ಹಿಂದೆ ಹಣಕಾಸು ವಹಿವಾಟಿನಲ್ಲಿ ಮಧ್ಯವರ್ತಿಯಾಗಿದ್ದ ನೀವು ಇಂದು ನಿಮ್ಮ ಹಣವನ್ನು ಜಾಮೀನು ಸಹಿ ಹಾಕಿದ ತಪ್ಪಿಗೆ ತುಂಬಬೇಕಾಗಿದೆ. ಹಾಗಾಗಿ ಲೆಕ್ಕಪತ್ರಗಳನ್ನು ಸರಿಯಾಗಿಟ್ಟುಕೊಳ್ಳಿ.

ತುಲಾ:

ಬಾಳಸಂಗಾತಿಯೊಡನೆ ಜಗಳ ಮನಸ್ತಾಪ ಬೇಡ. ನಿಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಆಕೆಗೆ ತಿಳಿಸಿ ಸದ್ಯದ ಪರಿಸ್ಥಿತಿಯ ನೈಜ ದರ್ಶನ ಮಾಡಿಸಿರಿ. ಆಗ ನಿಮ್ಮಲ್ಲಿನ ತಾತ್ವಿಕ ಭಿನ್ನಾಭಿಪ್ರಾಯಗಳು ಶಮನಗೊಳ್ಳುವುದು.

ವೃಶ್ಚಿಕ:

ಈ ದಿನ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಗಮನ ಕೊಡಿರಿ. ಬ್ಯಾಂಕಿನ ವ್ಯವಹಾರವಿದ್ದಲ್ಲಿ ಈ ದಿನ ಮುಗಿಸಿಕೊಳ್ಳಿರಿ. ಯಾರಿಗಾದರೂ ಸಾಲ ಮರುಪಾವತಿಗೆ ಈ ದಿನ ಸೂಕ್ತವಾದುದು. ಇದರಿಂದ ನಿಮ್ಮ ಸಾಲವೂ ಶೀಘ್ರವೇ ತೀರುವುದು.

ಧನಸ್ಸು:

ನಿಮ್ಮ ಯೋಚನಾಲಹರಿ ಸೂಕ್ತವಾದರೂ ಅದನ್ನು ಸರಿಯಾದ ಸಮಯಕ್ಕೆ ಅಭಿವ್ಯಕ್ತಿ ಗೊಳಿಸಲು ಆಗುವುದಿಲ್ಲ. ಆಂಜನೇಯ ಸ್ತೋತ್ರ ಪಠಿಸಿರಿ. ಈ ದಿನ ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ಮಕರ:

ಈ ದಿನ ನೀವು ತೆಗೆದುಕೊಳ್ಳುವ ತೀರ್ಮಾನವು ಮಹತ್ವದ್ದಾಗಿದ್ದು ನಿಮ್ಮ ತೀರ್ಮಾನವನ್ನು ಹಲವಾರು ಜನರು ಒಮ್ಮತದಿಂದ ಸ್ವೀಕರಿಸುವರು. ಮತ್ತು ಒಂದು ಸಂಘಟನೆಯ ನೇತಾರನಾಗುವಂತೆ ಒತ್ತಾಯಿಸುವರು.

ಕುಂಭ:

ಕತ್ತಲು ಕಳೆದು ಬೆಳಕು ಮೂಡುವ ಸಮಯವಿದು. ಕಚೇರಿ ಕೆಲಸಗಳಲ್ಲಿ ಮಾನ್ಯತೆ ಗೌರವ ದೊರೆಯುವುದು. ಮೇಲಧಿಕಾರಿಗಳು ನಿಮ್ಮ ತಪ್ಪನ್ನು ತಿದ್ದುವರು. ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

ಮೀನ:

Meena1

ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಹಳೆಯ ಸ್ನೇಹಿತರ ಸಹಕಾರ ದೊರೆಯುವುದು. ಮತ್ತು ಹಳೆ ವಿದ್ಯಾರ್ಥಿಗಳಿಂದ ಸಹಕಾರ ಸಿಗುವುದು. ಗುರುಹಿರಿಯರ ಆಶೀರ್ವಾದದಿಂದ ನಂಬಿಕೊಂಡ ಭಗವಂತನ ಪೂಜೆ ಮಾಡುವುದು ಒಳಿತು.

Also read: ಭಾರತದ ಪೂರ್ವಜರ ವಿವಾಹ ಪದ್ದತಿಯ ಹಿಂದೆ ಇರುವ ವೈಜ್ಞಾನಿಕ ಅರ್ಥ ಗೊತ್ತಾದ್ರೆ, ಹೆಮ್ಮೆ ಆಶ್ಚರ್ಯ ಎರಡೂ ಆಗುತ್ತೆ!!