ನಿತ್ಯ ಭವಿಷ್ಯ: ಜನವರಿ 22, 2018

1
985
ದಿನ ಭವಿಷ್ಯ

ಮೇಷ:

ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುತ್ತೀರಿ. ಸಾಮಾನ್ಯ ಗೃಹಬಳಕೆ ವಸ್ತುಗಳ ಬಗ್ಗೆ ಗಮನ ಹರಿಸುವಿರಿ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡುವುದು ಒಳ್ಳೆಯದು. ಆರ್ಥಿಕ ಸಂಕಷ್ಟ ಎದುರಾಗುವುದು.

ವೃಷಭ:

ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಫಲರಾಗುತ್ತೀರಿ ಎಂದರೆ ನಿಮ್ಮ ಮನೋದೌರ್ಬಲ್ಯವನ್ನು ಮೆಟ್ಟಿ ನಿಂತಿರುವಿರಿ ಎಂದು ಅರ್ಥ. ಬದುಕು ಹಸನಾಗಿರುವುದು. ಬೇಡದ ಚಿಂತನೆಗಳನ್ನು ದೂರ ಮಾಡಿರಿ. ಗುರುವಿನ ಆಶೀರ್ವಾದ ನಿಮ್ಮ ಮೇಲಿದೆ.

ಮಿಥುನ:

ಸ್ಥಿರಾಸ್ಥಿ ಖರೀದಿಗೆ ಸಂಬಂಧಪಟ್ಟ ಮಾತುಕತೆಗಳು ಫಲಪ್ರದವಾಗುವುದು. ಕೆಲವರು ನೂತನ ವಾಹನ ಖರೀದಿಯ ಬಗ್ಗೆ ಚಿಂತನೆ ನಡೆಸುವರು. ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ಕಟಕ:

ಇದುವರೆಗೂ ಹರಿದು ಬರುತ್ತಿದ್ದ ಹಣಕಾಸು ನಿಂತು ಹೋಗುವ ಸಾಧ್ಯತೆಯಿದೆ. ಹಣಕಾಸಿನ ವಿಷಯವಾಗಿ ಬೇರೊಂದು ಉಪಾಯವನ್ನು ಮಾಡಲೇಬೇಕಿದೆ. ಸ್ನೇಹಿತರು ಇಲ್ಲವೆ ಬಂಧುಗಳು ನಿಮಗೆ ಸಕಾಲದಲ್ಲಿ ಸಹಾಯ ಮಾಡುವರು.

ಸಿಂಹ:

ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ತಲ್ಲೀನರಾಗುವುದರಿಂದ ನಿಮ್ಮನ್ನು ವಿರೋಧಿಸುತ್ತಿದ್ದವರು ಹಿಂದೆ ಸರಿಯುವರು. ಗುರುವಿನ ಶ್ರೀರಕ್ಷೆ ಇರುವುದರಿಂದ ಯಾವುದಕ್ಕೂ ಹೆದರುವ ಪ್ರಮೇಯವಿಲ್ಲ.

ಕನ್ಯಾ:

ಹಣದ ಹೂಡಿಕೆಗಳು ಈಗ ಆಪತ್ಕಾಲದಲ್ಲಿ ನೆರವು ನೀಡುವುದು. ಮಗನ ತುರ್ತು ಕೆಲಸಗಳಿಗಾಗಿ ಹಣ ಸಂದಾಯ ಮಾಡಬೇಕಾಗುವುದು. ದೂರದ ಪ್ರಯಾಣದ ತಯಾರಿಯೂ ನಡೆಯಲಿದೆ. ಸ್ನೇಹಿತರು ನಿಮಗೆ ಸಹಾಯ ಮಾಡುವರು.

ತುಲಾ:

ನೀವಾಡುವ ಮಾತು ಎಲ್ಲೆಡೆಯೂ ಗೌರವವನ್ನು ತಂದು ಕೊಡುತ್ತದೆ. ಗುರುವು ವ್ಯಯಸ್ಥಾನದಲ್ಲಿ ಸಂಚರಿಸುವ ಮೂಲಕ ನೀವು ಧಾರ್ಮಿಕ ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡಬೇಕಾಗುವುದು. ಮನಸ್ಸು ಕೂಡಾ ಧಾರ್ಮಿಕತೆಯತ್ತ ಹೊರಳುವುದು.

ವೃಶ್ಚಿಕ:

ಸವಾಲು ಎದುರಿಸುವಲ್ಲಿ ಅಥವಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಇಂದು ನೀವು ಪ್ರಮುಖ ಪಾತ್ರ ವಹಿಸುವಿರಿ. ನ್ಯಾಯವಾದ ತೀರ್ಮಾನದಿಂದ ಉಭಯತರ ವ್ಯಕ್ತಿಗಳಿಗೂ ಪ್ರೀತಿಪಾತ್ರರಾಗುವಿರಿ. ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ಸಾಧಿಸುವರು.

ಧನಸ್ಸು:

ನಿರುದ್ಯೋಗಿಗಳಿಗೆ ಉತ್ತಮ ಶುಭ ಯೋಗವನ್ನುಂಟು ಮಾಡುವುದು. ದೂರದಿಂದ ಬರುವ ವಾರ್ತೆಯು ಶುಭವನ್ನು ಹೊತ್ತು ತರುವುದು. ಆಂಜನೇಯ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿರಿ. ಮತ್ತೊಬ್ಬರ ಹಣಕಾಸಿನ ವ್ಯವಹಾರದಲ್ಲಿ ಕೈಹಾಕಬೇಡಿರಿ.

ಮಕರ:

ಈ ದಿನ ನಿಮ್ಮ ಪ್ರಯತ್ನಗಳು ಗುರುವಿನ ಕೃಪೆಯಿಂದ ಸಫಲವಾಗುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಕಲೆ-ಸಾಂಸ್ಕೃತಿಕ ಚಟುವಟಿಕೆಗಳಿಂದ ಜನಾನುರಾಗಿಯಾಗುತ್ತೀರಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಕುಂಭ:

ಒಡ ಹುಟ್ಟಿದವರ ಸಹಕಾರದಿಂದ ರಚನಾತ್ಮಕ ಕೆಲಸಗಳ ನಿರ್ವಹಣೆ ಮಾಡುವಿರಿ. ಮಕ್ಕಳ ಆಟಪಾಠಗಳು ಮತ್ತು ಮಗುವಿನ ಬಾಲ ಭಾಷೆಯು ಇಂದು ನಿಮ್ಮನ್ನು ಹೆಚ್ಚು ಆಕರ್ಷಿಸುವುದು.

ಮೀನ:

ದೈವ ಬಲವಿರುವಾಗ ಅನ್ಯರ ಹಂಗೇಕೆ? ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆಸ್ತಿಗೆ ಸಂಬಂಧಪಟ್ಟ ತಕರಾರುಗಳು ನಿಮ್ಮ ಮಧ್ಯಸ್ಥಿಕೆಯಿಂದ ಸುಖಾಂತ್ಯವಾಗುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.