ನಿತ್ಯ ಭವಿಷ್ಯ ಜುಲೈ 11, 2017 (ಮಂಗಳವಾರ)

0
668

ಮೇಷ

01-Mesha

ಶುಭಕಾರ್ಯಗಳ ಚಿಂತನೆ ಸದ್ಯದಲ್ಲೇ ಕಾರ್ಯಗತವಾಗಲಿದೆ. ಧರ್ಮಪತ್ನಿಯ ಸಲಹೆಗೆ ಸೂಕ್ತವಾಗಿ ಸ್ಪಂದಿಸಿರಿ. ಹಳೇ ಬಾಕಿ ಮರುಪಾವತಿಯಾಗಲಿದೆ. ದಿನಾಂತ್ಯ ಶುಭವಿದೆ.

ವೃಷಭ
02-Vrishabha
ನಿರಂತರ ಆದಾಯ ಸಂತಸ ತರಲಿದೆ. ಸಂಚಾರದಲ್ಲಿ ವಾಹನ ಚಾಲನೆಯಲ್ಲಿ ಜಾಗ್ರತೆ ಮಾಡಿರಿ. ಆರೋಗ್ಯ ಭಾಗ್ಯ ಸುಧಾರಿಸುತ್ತಾ ಇರುವುದು. ಯೋಗ್ಯ ವಯಸ್ಕರಿಗೆ ಸಂಬಂಧಗಳು ಕೂಡಿ ಬಂದಾವು.

ಮಿಥುನ
03-Mithuna

ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಧಿಯಲ್ಲಿ ತೊಂದರೆಗಳು ಕಂಡು ಬಂದಾವು. ಅಧಿಕಾರಿ ವರ್ಗದವರಿಗೆ ಮುಂಭಡ್ತಿ ಯೋಗವಿದೆ. ಹಿರಿಯ ತಲೆ ವರ್ಗದವರಿಗೆ ಆಸ್ಪತ್ರೆ ದರ್ಶನ ಭಾಗ್ಯವಿದೆ.

ಕಟಕ
04-Kataka

ಅವಿವಾಹಿತರಿಗೆ ಕಂಕಣಬಲ ಕೂಡಿ ಬಂದೀತು. ನೂತನ ಕೆಲಸಕಾರ್ಯಗಳು ಸದ್ಯದಲ್ಲೇ ನೆರವೇರಲಿವೆ. ಅನಿರೀಕ್ಷಿತ ರೂಪದಲ್ಲಿ ಧನಾಗಮನ ತಂದೀತು. ಸಂಚಾರದಲ್ಲಿ ಜಾಗ್ರತೆ.

ಸಿಂಹ
05-Simha

ನಿರುದ್ಯೋಗಿಗಳಿಗೆ ಉದ್ಯೋಗದ ಸಮಸ್ಯೆ ನಿವಾರಣೆಯಾಗಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಹೊಂದಲಿದ್ದಾವೆ. ದಿನಾಂತ್ಯ ಶುಭ.

ಕನ್ಯಾ
06-Kanya

ಆಗಾಗ ದಾಯಾದಿಗಳ ಕಿರುಕುಳ ಕಿರಿಕಿರಿಯೆನಿಸಲಿದೆ. ವಿದ್ಯಾರ್ಥಿಗಳು ವಿದ್ಯಾ ಸಂಪನ್ನರಾದಾರು. ಹೆಚ್ಚಿನ ಶ್ರಮ ಹಾಕಬೇಕು. ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ನೆರವೇರಲಿದೆ .

ತುಲಾ
07-Tula

ಅನಿರೀಕ್ಷಿತ ರೂಪದಲ್ಲಿ ಕಾರ್ಯಧಿಸಾಧನೆಯಾಗಲಿದೆ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ವೃತ್ತಿರಂಗದಲ್ಲಿ ಹೆಚ್ಚಿನ ಸಮಾಧಾನ ಸಿಗದು. ನೆಂಟರಿಷ್ಟರ ಆಗಮನ.

ವೃಶ್ಚಿಕ
08-Vrishika

ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಗಮನ ಹರಿಸಿರಿ. ಹಿತಶತ್ರುಗಳಿಂದ ವಂಚನೆ ಕಂಡು ಬಂದೀತು. ವಿವಾಹ ಪ್ರಸ್ತಾವಗಳು ಕಂಕಣಬಲ ಒದಗಿಸಿ ಕೊಡಲಿವೆ. ಸಂಚಾರದಲ್ಲಿ ಜಾಗ್ರತೆ.

ಧನು
09-Dhanussu

ಕೇತುವಿನ ಅನುಗ್ರಹ ಕಾರ್ಯಸಾಧನೆಗೆ ಸಾಧಕವಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಖರ್ಚುವೆಚ್ಚಗಳನ್ನು ನಿಯಂತ್ರಿಸಿಕೊಳ್ಳಿ. ಕಾರ್ಮಿಕರ ಅಲಕ್ಷದಿಂದ ಸಮಸ್ಯೆಗಳು ತೋರಿ ಬಂದಾವು. ವಾಹನ ಖರೀದಿಯಲ್ಲಿ ಜಾಗ್ರತೆ..

ಮಕರ
10-Makara

ಹಿರಿಯ ಅಧಿಕಾರಿ ವರ್ಗದವರಿಗೆ ಕಾರ್ಯಾರ್ಥ ವಿದೇಶ ಸಂಚಾರ ಯೋಗವಿದೆ. ವೈವಾಹಿಕ ಪ್ರಸ್ತಾವಗಳು ಕಂಕಣಬಲವನ್ನು ಒದಗಿಸಿಕೊಡಲಿದೆ. ದೇವತಾ ಕಾರ್ಯಗಳಿಗೆ ಖರ್ಚುವೆಚ್ಚ ಬಂದಾವು.

ಕುಂಭ
11-Kumbha

ಹಂತ ಹಂತವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಸಮಾಧಾನದ ವಾತಾವರಣ ಮುನ್ನಡೆಗೆ ಸಾಧಕವಾಗಲಿದೆ. ಹಿರಿಯರೊಡನೆ ವಾದ ವಿವಾದಕ್ಕೆ ಆಸ್ಪದ ನೀಡದಿರಿ.

ಮೀನ
12-Meena

ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಲಾಭವನ್ನು ಸಂಪಾದಿಸಲಿದ್ದಾರೆ. ಧನಾಗಮನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ಅಧಿಕಾರಿ ವರ್ಗದವರಿಗೆ ಉದ್ಯೋಗದ ಬದಲಾವಣೆ ಸಂತಸ ತರಲಿದೆ.