ಮೇಷ
ವಾಹನ, ನಿವೇಶನ ಖರೀದಿಸುವವರಿಗೆ ಸಕಾಲ. ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ಪತ್ರ ವ್ಯವಹಾರಗಳನ್ನು ಕಾನೂನು ರೀತ್ಯ ತಪಾಸಣೆಗೆ ಒಳಪಡಿಸುವುದು ಒಳ್ಳೆಯದು. ಇಲ್ಲದೆ ಇದ್ದಲ್ಲಿ ಮೋಸ ಹೋಗುವ ಸಂದರ್ಭವಿರುತ್ತದೆ.
ವೃಷಭ
ಆರಂಭಿಸಿದ ಕೆಲಸ ಕಾರ್ಯಗಳಿಗೆ ಸ್ನೇಹಿತರ ಬೆಂಬಲ ದೊರೆಯುವುದು. ಅಂತೆಯೇ ಅಧಿಕ ಖರ್ಚಿಗೆ ದಾರಿಯಾಗುವುದು. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಕುಲದೇವತಾ ಪ್ರಾರ್ಥನೆ ಮಾಡಿರಿ.
ಮಿಥುನ
ಸುಖಭೋಜನ ಲಭಿಸುವುದು. ನಿಮ್ಮ ಇಚ್ಛೆಯಂತೆ ಕಾರ್ಯಗಳು ನೆರವೇರುತ್ತವೆ. ನೂತನ ಕೆಲಸಗಳು ಕೈಗೂಡುವುದು. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷ ಣಗಳನ್ನು ಕಳೆಯುವಿರಿ.
ಕಟಕ
ಷೇರು ವ್ಯವಹಾರದಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸುವುದು ಒಳ್ಳೆಯದು. ನೀವು ಲಾಭವಿಲ್ಲ ಎಂದು ಮಾರಿದ ಷೇರು ಮರುದಿನ ಹೆಚ್ಚು ಬೆಲೆಯಲ್ಲಿ ಮಾರಾಟವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಸಿಂಹ
ವೃತ್ತಿಯಲ್ಲಿ ಅಲ್ಪ ಶ್ರಮದಿಂದ ದೊಡ್ಡ ಹೆಸರು ಪಡೆಯುವಿರಿ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಿರಿ. ಪ್ರಯಾಣ ಕಾಲದಲ್ಲಿ ಎಚ್ಚರ. ಮುಂಬರುವ ದಿನಗಳಲ್ಲಿ ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು.
ಕನ್ಯಾ
ಹಮ್ಮಿಕೊಂಡ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಕುಲದೇವರ ಆರಾಧನೆಯಿಂದ ಒಳಿತಾಗುವುದು. ವಿನಯಶಾಲಿಯೇ ವಿಜಯಶಾಲಿ ಎಂಬಂತೆ ಈದಿನ ಆದಷ್ಟು ತಾಳ್ಮೆಯಿಂದ ವ್ಯವಹರಿಸಿರಿ.
ತುಲಾ
ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಸ್ನೇಹಿತರ ಬೆಂಬಲ ದೊರೆಯುವುದು. ಅಧಿಕ ಖರ್ಚು ಎದುರಾಗುವ ಸಂಭವ. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿರಿ. ಕಾರ್ಯದಲ್ಲಿ ಯಶಸ್ಸನ್ನು ಹೊಂದುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ.
ವೃಶ್ಚಿಕ
ಶುಭವಾರ್ತೆ ನಿರೀಕ್ಷಿಸಬಹುದು. ಆರೋಗ್ಯ ಉತ್ತಮ. ಕುಟುಂಬದವರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಮನೆಗೆ ಅಲಂಕಾರ ವಸ್ತುಗಳ ಖರೀದಿ ಮಾಡುವಿರಿ.
ಧನು
ನೀವಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದೊಂದಿಗೆ ದೇಗುಲ ದರ್ಶನ ಮಾಡುವಿರಿ. ಮಗನ ಪ್ರಗತಿಯ ಕಂಡು ಹರ್ಷಚಿತ್ತರಾಗುವಿರಿ. ಆದರೆ ಹಣಕಾಸಿನ ವಿಷಯದಲ್ಲಿ ಜಾಗ್ರತೆ. ಕೊಟ್ಟ ಹಣ ವಾಪಸ್ಸು ಬರುವ ಸಾಧ್ಯತೆಯಿದೆ.
ಮಕರ
ದೈವಕೃಪೆಯಿಂದ ವಿವಾಹಯೋಗ್ಯರಿಗೆ ಮನೆಯಲ್ಲಿ ವಿವಾಹದ ಬಗ್ಗೆ ಮಾತುಕತೆಗಳು ನಡೆಯುವವು. ವಿವಾಹದ ಮಾತುಕತೆಯಲ್ಲಿ ಮಹತ್ತರ ಘಟ್ಟ ತಲುಪುವಿರಿ. ಮನಸ್ಸಿಗೆ ನೆಮ್ಮದಿ ಉಂಟಾಗುವುದು.
ಕುಂಭ
ಒಳ್ಳೆಯ ಹೆಸರು ಪಡೆಯುತ್ತೀರಿ. ಪ್ರಯಾಣ ಹಿತಕರವಾಗಿರುತ್ತದೆ. ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಹತ್ತು ಹಲವು ಬಾರಿ ಚಿಂತಿಸಿರಿ. ಆರ್ಥಿಕ ಸದೃಢತೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
ಮೀನ
ವ್ಯಾಪಾರಸ್ಥರಿಗೆ ಲೇವಾದೇವಿ ವ್ಯವಹಾರದಲ್ಲಿ ಸಮಸ್ಯೆಗಳು ಬರುವ ಸಾಧ್ಯತೆ. ಅದನ್ನು ಚಾಣಾಕ್ಷ ತನದಿಂದ ಬಗೆಹರಿಸಿಕೊಳ್ಳುವಿರಿ. ಸಹೋದರನು ನಿಮಗೆ ಸಹಾಯ ಮಾಡುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಅನುಕೂಲ.