ನಿತ್ಯ ಭವಿಷ್ಯ ಜುಲೈ 21, 2017 (ಶುಕ್ರವಾರ)

0
575

ಜುಲೈ 21, 2017 (ಶುಕ್ರವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮೃಗಶಿರ ನಕ್ಷತ್ರ,

ರಾಹುಕಾಲ: ಬೆಳಿಗ್ಗೆ 10:51 am – 12:25 pm
ಗುಳಿಕಕಾಲ: ಬೆಳಿಗ್ಗೆ 7:41 am – 9:16 am
ಯಮಗಂಡಕಾಲ: ಮಧ್ಯಾಹ್ನ 3:35 pm – 5:10 pm

ಮೇಷ

01-Mesha

ಮನೆ ಕಟ್ಟಿಸಿ ಮಾರಾಟ ಮಾಡುವಿರಿ, ಸಾರಿಗೆ ಸೇವೆಯಿಂದ ಅಭಿವೃದ್ಧಿ, ಅಂದುಕೊಂಡ ಕಾರ್ಯದಲ್ಲಿ ಯಶಸ್ಸು, ಚತುರತೆಯಿಂದ ವ್ಯಾಪಾರ ವೃದ್ಧಿ.

ವೃಷಭ

02-Vrishabha

ಷೇರುಪೇಟೆ ಲಾಭದಾಯಕವಾಗಲಿದೆ, ಪರಾಕ್ರಮ ಮತ್ತು ಪ್ರಯತ್ನದಿಂದ ಧನಲಾಭ, ಮಿತ್ರರ ಸಹಕಾರ. ದೇಹದಲ್ಲಿ ಉತ್ಸಾಹ. ಶಿಕ್ಷಣದಲ್ಲಿ ಯಶಸ್ಸು.

ಮಿಥುನ

03-Mithuna

ನೂತನ ಉದ್ಯೋಗ ಪ್ರಯತ್ನ, ಸಂತಾನದ ಚಿಂತೆ, ಪತ್ನಿಯಿಂದ ಧನಪ್ರಾಪ್ತಿ, ಸೇವಾಕಾರ್ಯ ನಿರತರಿಗೆ ಯಶಸ್ಸು. ಪ್ರಯತ್ನದಿಂದ ತೊಂದರೆಗಳ ನಿವಾರಣೆ.

ಕಟಕ

04-Kataka

ಪ್ರತಿಭೆಗೆ ತಕ್ಕ ಅವಕಾಶ ದೊರೆಯಲಿದೆ. ವೈಯಕ್ತಿಕ ಕೆಲಸಗಳ ಕಡೆ ಹೆಚ್ಚಿನ ಗಮನವಿರಲಿ, ಮನೆಯಲ್ಲಿ ತಾಳ್ಮೆಯಿಂದ ವ್ಯವಹರಿಸಿ.

ಸಿಂಹ

05-Simha

ಹಿತಶತೃಗಳಿಂದ ಎಚ್ಚರವಹಿಸಿ, ಗೃಹ ನಿರ್ಮಾಣ ಕಾರ್ಯಗಳನ್ನು ಮುಂದೂಡಿ, ವೃಥಾ ಅಪವಾದ ಬರುವ ಸಂಭವ. ಸಾಲಬಾಧೆಯಿಂದ ಮುಕ್ತಿ.

ಕನ್ಯಾ

06-Kanya

ಗೃಹ ಸಂಬಂಧ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುವುದು, ಮಕ್ಕಳಿಂದ ನೆಮ್ಮದಿ, ಅಧಿಕಾರಿಗಳಿಂದ ಪ್ರಶಂಸೆ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ.

ತುಲಾ

07-Tula

ಹೊಸ ವಸ್ತು ಖರೀದಿ, ದೇಹದಲ್ಲಿ ಉಲ್ಲಾಸ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಬೇಕು. ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಲಾಭ.

ವೃಶ್ಚಿಕ

08-Vrishika

ಮಿತ್ರರ ಆಗಮನದಿಂದ ಪ್ರಯಾಣ ರದ್ದು, ನ್ಯಾಯಾಲಯದ ತೀರ್ಪು ಮುಂದೂಡುವ ಸಾಧ್ಯತೆ ಹೆಚ್ಚಿದೆ. ಕೃಷಿ ಕ್ಷೇತ್ರದಲ್ಲಿ ಲಾಭದ ನಿರೀಕ್ಷೆ ಇರಲಿ.

ಧನು

09-Dhanussu

ಉದ್ಯೋಗ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಿರಿ, ಅಧಿಕಾರಿ ವರ್ಗದ ಸಹಕಾರ ಲಭ್ಯ, ಕೃಷಿಯಲ್ಲಿ ಹಿನ್ನಡೆ. ನಿಮ್ಮ ವಿಶ್ವಾಸವೇ ನಿಮಗೆ ದಾರಿದೀಪ.

ಮಕರ

10-Makara

ಹೊಸ ವ್ಯವಹಾರದಲ್ಲಿ ತೊಡಗುವುದು ಸೂಕ್ತವಲ್ಲ, ಶುಭಕಾರ್ಯಗಳು ನಡೆಯುವುವು, ದೂರ ಪ್ರಯಾಣ ಸಾಧ್ಯತೆ.ಕುಟುಂಬದಲ್ಲಿ ತಾಳ್ಮೆ ವಹಿಸಿ.

ಕುಂಭ

11-Kumbha

ಸೋದರರಿಂದ ಸಹಾಯ, ಕೈಗೊಂಡ ಕೆಲಸ ಸುಗಮ, ಆಯುಧಗಳಿಂದ ಎಚ್ಚರಿಕೆವಹಿಸಿ, ಆರೋಗ್ಯದಲ್ಲಿ ಏರುಪೇರು. ಶರೀರದಲ್ಲಿ ಆಲಸ್ಯ. ಆರೋಗ್ಯ ವಿಷಯದಲ್ಲಿ ಎಚ್ಚರಿಕೆ.

ಮೀನ

12-Meena

ವಿಶೇಷ ವಸ್ತುಗಳ ಖರೀದಿ ಯೋಗ, ನೆಮ್ಮದಿ ದೊರೆಯಲಿದೆ, ಹೊಸ ವ್ಯವಹಾರಕ್ಕೆ ಆತುರ ಬೇಡ. ದೂರ ಪ್ರಯಾಣ ಸಾಧ್ಯತೆ. ಖರ್ಚು-ವೆಚ್ಚ ಅಧಿಕ.