ನಿತ್ಯ ಭವಿಷ್ಯ ಜುಲೈ 26, 2017 (ಬುಧವಾರ)

0
503

ಜುಲೈ 26, 2017 (ಬುಧವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲಪಕ್ಷ, ತದಿಗೆ ತಿಥಿ,
ಪುಬ್ಬೆ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 12:26 pm – 2:00 pm
ಗುಳಿಕಕಾಲ: ಬೆಳೆಗ್ಗೆ 10:51 am – 12:26 pm
ಯಮಗಂಡಕಾಲ: ಬೆಳೆಗ್ಗೆ 7:42 am – 9:16 am

ಮೇಷ

01-Mesha

ಧನವನ್ನು ಅದೃಷ್ಟವನ್ನು ಗಳಿಸುವಿರಿ, ಸಜ್ಜನರ ಸಾಂಗತ್ಯವನ್ನು ಪಡೆಯಲು ಪ್ರಯತ್ನಿಸಿ, ಸಹಿಸಲಾಗದ ತಲೆನೋವು ಬಂದೀತು, ಅಧಿಕಾರ ಬದಲಾವಣೆ.

ವೃಷಭ

02-Vrishabha

ಅಧಿಕಾರಿಗಳ ಅನಿರೀಕ್ಷಿತ ಕೋಪ, ಬಂಧುಗಳಿಗೆ ಅನಾರೋಗ್ಯ, ಬಹು ಕಷ್ಟದಿಂದ ಧನಾರ‍್ಚನೆ, ಆದರೂ ನಷ್ಟ ಸಂಭವ, ತೀರ್ಥಕ್ಷೇತ್ರಕ್ಕೆ ಪ್ರಯಾಣ.

ಮಿಥುನ

03-Mithuna

ಶತ್ರುಗಳ ಭಯ, ಉದ್ಯೋಗದಲ್ಲಿ ಸ್ಥಿರತೆ, ಅನಿರೀಕ್ಷಿತ ಮರಣ ವಾರ್ತೆ, ವಿದ್ಯಾರ್ಥಿಗಳಿಗೆ ಶುಭ, ಸರಕಾರಿ ಕೆಲಸಗಳಲ್ಲಿ ಜಯ, ದೂರ ಪ್ರಯಾಣಕ್ಕೆ ಕರೆ ಬಂದೀತು.

ಕಟಕ

04-Kataka

ಎಲ್ಲ ಕಡೆಯಿಂದಲೂ ಗೌರವ, ಧನಾರ್ಜನೆ, ತೃಪ್ತಿ, ಉತ್ತಮ ಜನರಲ್ಲಿ ಬೆರೆಯುವಿಕೆ, ಕಲಾವಿದರಿಗೆ ಉತ್ತಮ ಆದಾಯ, ನ್ಯಾಯಾಲಯದಲ್ಲಿ ಜಯ.

ಸಿಂಹ

05-Simha

ಎಲ್ಲ ಕೆಲಸಗಳ ಬಗ್ಗೆಯೂ ಉದಾಸೀನತೆ, ಸಹ ಕಾರ‍್ಯಕರ್ತರ ಕೋಪ ಮತ್ತು ಪ್ರತಿಭಟನೆ, ಕಾರ‍್ಯ ವಿಫಲ, ಧನ ನಷ್ಟ, ಕ್ಷಣಿಕ ಸುಖ, ಹಣಕಾಸು ವಿಷಯದಲ್ಲಿ ಎಚ್ಚರ ಅಗತ್ಯ.

ಕನ್ಯಾ

06-Kanya

ಧನಾರ‍್ಚನೆ, ಮಿತ್ರರೇ ನಿಮಗೆ ಮೋಸ ಮಾಡುವರು, ಮಾನಸಿಕ ದುಗುಡ ನಿರಾಸೆಗೆ ಗುರಿಯಾಗುವ ಸಂಭವ, ಆದರೂ ಅಧಿಕಾರದಲ್ಲಿ ಉನ್ನತಿ.

ತುಲಾ

07-Tula

ಮಾನಸಿಕವಾಗಿ ಬಹಳಷ್ಟು ಸಂತೋಷವನ್ನು ಅನುಭವಿಸುವಿರಿ, ಅನೇಕ ಆಸೆ ಆಕಾಂಕ್ಷೆಗಳು ನೆರವೇರುವವು, ಉತ್ತಮ ಪೌಷ್ಠಿಕ ಆಹಾರ ಸೇವನೆ, ಮಕ್ಕಳಲ್ಲಿ ಸೌಖ್ಯ.

ವೃಶ್ಚಿಕ

08-Vrishika

ಗುರುವಿನ ಆಗಮನ, ಗೋಪೂಜಾ ಕಾರ್ಯಗಳನ್ನು ಕೈಗೊಳ್ಳುವಿರಿ, ದುಸ್ವಪ್ನಭಯ, ಹಣದ ಚಂಚಲತೆ, ದೈವಾನುಗ್ರಹವಿದೆ.

ಧನು

09-Dhanussu

ಪತಿಯಿಂದ ಅದೃಷ್ಟ ಸೌಖ್ಯವನ್ನು ಪಡೆಯುವಿರಿ, ಅನೇಕ ಕಾರಣಗಳಿಂದ ಮಾನಸಿಕ ಅಶಾಂತಿ, ಅಪಘಾತ ಭಯ, ಕೆಟ್ಟ ಸಮಾಚಾರವನ್ನು ಕೇಳುವಿರಿ.

ಮಕರ

10-Makara

ಆರೋಗ್ಯ ಭಂಗ, ನೈಸರ್ಗಿಕ ವಿಪತ್ತುಗಳಿಗೆ ಬಲಿಯಾಗುವಿಕೆ, ಬಂಧುಗಳನ್ನು ಕಳೆದುಕೊಳ್ಳುವಿರಿ, ಧಾನ್ಯಲಾಭ, ವಿದ್ಯಾಭ್ಯಾಸಕ್ಕೆ ಅಡಚಣೆ.

ಕುಂಭ

11-Kumbha

ಬಹು ಉತ್ತಮವಾದ ಸಮಯ, ಅದೃಷ್ಟ ನಿಮ್ಮನ್ನು ವರಿಸುವುದು, ಎಲ್ಲ ಕಾರ್ಯಗಳಲ್ಲೂ ಉನ್ನತಿ, ವಿಜಯವನ್ನು ಸಾಧಿಸುವಿರಿ, ಎಲ್ಲರಿಂದ ಪ್ರಶಂಸೆ.

ಮೀನ

12-Meena

ಬಹುವಿಧವಾದ ಅಸೌಖ್ಯತೆ, ಅಡಚಣೆಗಳು, ವಿಷಾದ ಅನುಭವಗಳು, ಪತ್ನಿಯಿಂದ ಸುಖ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಮನೆಗೆ ಬಂಧುಗಳ ಆಗಮನ ಸಂಭವ.