ಜುಲೈ 29, 2017 (ಶನಿವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲಪಕ್ಷ, ಷಷ್ಠಿ ತಿಥಿ,
ಹಸ್ತ ನಕ್ಷತ್ರ,
ರಾಹುಕಾಲ: ಬೆಳೆಗ್ಗೆ 9:17 am – 10:51 am
ಗುಳಿಕಕಾಲ: ಬೆಳೆಗ್ಗೆ 6:08 am – 7:42 am
ಯಮಗಂಡಕಾಲ: ಮಧ್ಯಾಹ್ನ 2:00 pm – 3:34 pm
ಮೇಷ
ಎಲ್ಲರ ಬಗ್ಗೆ ಚಿಂತಿಸುವುದು ಒಳಿತಲ್ಲ. ಅದರಷ್ಟಕ್ಕೆ ಬಿಟ್ಟು ಬಿಡುವುದು ಉತ್ತಮ, ಆಪ್ತರ ಸಲಹೆಗಳನ್ನು ಸ್ವೀಕರಿಸುವುದನ್ನು ಕಲಿಯಿರಿ.
ವೃಷಭ
ಗೃಹಗಳು ನಿಮಗೆ ಪೂರಕವಾಗಿದೆ. ಗೆಳೆಯ ರೊಂದಿಗೆ ಸಂತೋಷದಿಂದ ಕಳೆಯಿರಿ, ಪ್ರೀತಿ ಪಾತ್ರರಿಂದ ಸಹಕಾರ, ಗೃಹದಲ್ಲಿ ಶಾಂತಿ, ಹಿಡಿದಕಾರ್ಯ ಕೈಗೂಡುವುದು.
ಮಿಥುನ
ದುಸ್ಸಾಹಸಕ್ಕಿಳಿದು ಕಷ್ಟಗಳನ್ನು ಮೈ ಮೇಲೆ ಎಳೆದುಕೊಳ್ಳುವಿರಿ, ವಿವೇಕತೆಯಿಂದ ವರ್ತಿಸಿ, ಅನಾವಶ್ಯಕ ವೆಚ್ಚಗಳನ್ನು ನಿಯಂತ್ರಿಸಿ, ವ್ಯವಹಾರದಲ್ಲಿ ಎಚ್ಚರ.
ಕಟಕ
ಆಪ್ತರಿಂದಲೇ ಟೀಕೆಗಳು ಬರಬಹುದು, ಸಹನೆಗೆಡದ ನಿಮ್ಮ ಕಾರ್ಯದ ಬಗ್ಗೆ ಗಮನ ಹರಿಸಿ ಧನಲಾಭ, ದುಂದು ವೆಚ್ಚ ಜಾಸ್ತಿ. ತಾಳ್ಮೆಯಿಂದ ವ್ಯವಹರಿಸಿ.
ಸಿಂಹ
ವ್ಯಕ್ತಿಗಳೊಂದಿಗೆ ಫಲಪ್ರದ ಸಂವಹನ, ಗೃಹ ಸುಖ, ಆಪ್ತರಭೇಟಿ, ಕಾರ್ಯಸಿದ್ಧಿ, ಧನಲಾಭ, ಸಕಲ ಗೌರವ ಪ್ರಾಪ್ತಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ.
ಕನ್ಯಾ
ಗೃಹದಲ್ಲಿ ಸಂತಸದ ವಾತಾವರಣ, ಆಪ್ತರ ಭೇಟಿ, ಗೌರವ, ಜೀವನವನ್ನು ಬುದ್ಧಿವರೆಯಿಂದ ನಿಭಾಯಿಸಬೇಕು. ಭೂಮಿ ಖರೀದಿ.
ತುಲಾ
ಪ್ರೀತಿಗೆ ಸಂಬಂಧಿಸಿದಂತೆ ಚಿಂತೆಗೊಳಗಾಗು ತ್ತೀರಿ. ಮಾನಸಿಕ ಶಾಂತಿ ಹಾಗೂ ಅತೃಪ್ತಿ ಕಾಡುವುದು, ವಿವಾಹ ಪ್ರಸ್ತಾಪ ಮಂಡನೆಗೆ ಸೂಕ್ತ ಕಾಲ.
ವೃಶ್ಚಿಕ
ಆರ್ಥಿಕ ಪ್ರಗತಿ, ಬಾಕಿಯುಳಿದ ಕೆಲಸಗಳನ್ನು ಪೂರೈಸುತ್ತೀರಿ, ಆಪ್ತರೊಂದಿಗಿನ ಭಿನ್ನಾಭಿ ಪ್ರಾಯಗಳು ಮಾಯ, ಭೂಮಿ ನಿವೇಶನ ಖರೀದಿ ಯೋಗ.
ಧನು
ಪ್ರಯಾಣದಲ್ಲಿ ಜಾಗೃತರಾಗಿರಿ, ಅಧಿಕಾರಿಗಳ ಕಿರಿ,ಕಿರಿ, ರಾಜಕಾರಣಿಗಳಿಗೆ ಒಳ್ಳೆಯ ಸಮಯ, ನಿಮ್ಮಿಂದ ಬೇರೆಯವರ ಮನಸ್ಸಿಗೆ ನೋವಾದೀತು. ಧಾನ್ಯಲಾಭ.
ಮಕರ
ಮಾನಸಿಕ ಒತ್ತಡ ಕಡಿಮೆಯಾಗುವುದು, ಸರಕಾರಿ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ಗೌರವ ಪ್ರಾಪ್ತಿ, ಮಕ್ಕಳಿಂದ ಶುಭ, ಆರೋಗ್ಯ ಪ್ರಾಪ್ತಿ. ಮನೆಯಲ್ಲಿ ಸಂತಸದ ವಾತಾವರಣ.
ಕುಂಭ
ಸಾಮಾಜಿಕ ಚಟುವಟಿಕೆ ಹೆಚ್ಚು, ಅನಾರೋಗ್ಯ, ಹಳೆಯ ಘಟನೆಗಳ ಚಿಂತೆ, ತಾಳ್ಮೆಯ ಅಗತ್ಯವಿದೆ. ಸಂತಾನ ಲಾಭ, ಧನ ವೃದ್ಧಿ. ಸ್ತ್ರೀ ಸಹವಾಸ.
ಮೀನ
ಶತ್ರುಭಯ, ಕಾರ್ಯದಲ್ಲಿ ಉತ್ತಮ ಯಶಸ್ಸು, ಯಾವುದೇ ವಿಷಯದ ಬಗ್ಗೆ ಅಸಹನೆ ಗೊಳ್ಳದಿರಿ. ವಿದ್ಯೆಯಲ್ಲಿ ಉತ್ತಮ ಪ್ರಗತಿ. ಆಪ್ತರಿಂದ ಪ್ರಶಂಸೆ ಪ್ರಾಪ್ತಿ.