ನಿತ್ಯ ಭವಿಷ್ಯ ಜುಲೈ 30, 2017 (ಭಾನುವಾರ)

0
456

ಜುಲೈ 30, 2017 (ಭಾನುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲಪಕ್ಷ, ಸಪ್ತಮಿ ತಿಥಿ,
ಚಿತ್ತೆ ನಕ್ಷತ್ರ,

ರಾಹುಕಾಲ: ಮಧ್ಯಾಹ್ನ 5:09 pm – 6:43 pm
ಗುಳಿಕಕಾಲ: ಮಧ್ಯಾಹ್ನ 3:34 pm – 5:09 pm
ಯಮಗಂಡಕಾಲ: ಮಧ್ಯಾಹ್ನ 12:26 pm – 2:00 pm

ಮೇಷ

01-Mesha

ನಿಮ್ಮನ್ನು ಹೀಯಾಳಿಸುವ ಜನ ಸಿಗುತ್ತಾರೆ. ಬೇಸರ ಬೇಡ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ದಾರಿ ಲಭ್ಯ. ಶುಭಸಂಖ್ಯೆ: 1

ವೃಷಭ

02-Vrishabha

ಬರೀ ಮಾತುಗಳ ಬಡಿವಾರ ಬೇಡ. ನಿಮ್ಮ ನಿಜವಾದ ಶಕ್ತಿಯನ್ನು ಪ್ರದರ್ಶಿಸಿ. ಅನ್ಯರ ಬೆಂಬಲ ಸಿಗಲಿದೆ. ಶುಭಸಂಖ್ಯೆ: 8

ಮಿಥುನ

03-Mithuna

ದಶರಥಕೃತ ಶನಿಸ್ತೋತ್ರವನ್ನು ಓದುವುದರಿಂದ ಇಷ್ಟಾರ್ಥವಾದ ಧನಸಂಪಾದನೆಯ ದಾರಿ ಸ್ಪಷ್ಟವಾಗಲಿದೆ. ಶುಭಸಂಖ್ಯೆ: 1

ಕಟಕ

04-Kataka

ಯಾವುದೋ ಒಂದು ಕೆಲಸ ಎಂದು ಅಂದುಕೊಂಡು ತೆಪ್ಪಗಿರುವ ನಿಮಗೆ ಹೊಸಕೆಲಸ ಸಿಗುವ ಸಾಧ್ಯತೆ ಹೇರಳ. ಶುಭಸಂಖ್ಯೆ: 5

ಸಿಂಹ

05-Simha

ಅನೇಕ ಜನರು ನಿಮ್ಮನ್ನು ಪ್ರಶಂಸಿಸುತ್ತಾರೆ ಎಂಬುದು ಈ ದಿನದ ಸತ್ಯವಾದರೂ ಸ್ವವಿಮರ್ಶೆಗೆ ದಾರಿ ಇರಲಿ. ಶುಭಸಂಖ್ಯೆ: 9

ಕನ್ಯಾ

06-Kanya

ಶನಿಕಾಟದಿಂದ ಬೇಸತ್ತಿದ್ದೀರಿ. ರಾಹುಕಾಟವೂ ಇದೆ. ಆದರೆ ಸಹೋದ್ಯೋಗಿಯೊಬ್ಬರಿಂದ ನೆರವಿಗೆ ದಾರಿ ಇದೆ. ಶುಭಸಂಖ್ಯೆ: 6

ತುಲಾ

07-Tula

ಸಾಲಿಗ್ರಾಮವನ್ನು ಪೂಜಿಸುವವರು ಹಾಲಿನ ಸಿಹಿ ನೈವೇದ್ಯದಿಂದ ಪೂಜೆಯನ್ನು ನೆರವೇರಿಸಿ. ಮನದ ಸಂಕಲ್ಪ ಸಿದ್ಧಿ. ಶುಭಸಂಖ್ಯೆ: 3

ವೃಶ್ಚಿಕ

08-Vrishika

ನಿಮ್ಮ ಚಿಂತೆಗಳನ್ನು ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಹಂಚಿಕೊಳ್ಳಿ. ನಿರಾಳತೆ ಸಾಧ್ಯವಾಗಲಿದೆ. ಶುಭಸಂಖ್ಯೆ: 5

ಧನು

09-Dhanussu

ಎಲ್ಲರಿಂದಲೂ ದೂರವಾಗಿದ್ದೇನೆ ಎಂಬನಿರಾಸೆ ಬೇಡ. ಜನರು ಆರಾಧಿಸುವ ದಿನಗಳಿಗಾಗಿ ಹೊಸ ಸಾಧ್ಯತೆ ಲಭ್ಯ. ಶುಭಸಂಖ್ಯೆ: 2

ಮಕರ

10-Makara

ಯಾವುದೋ ಕಾಲದ ಹಳೆಯವಿಚಾರಗಳೆಂದು ಮೂಗು ಮುರಿಯದಿರಿ. ಅವುಗಳ ನೈಜ ಬೆಲೆ ತಿಳಿಯಲಿದೆ. ಶುಭಸಂಖ್ಯೆ: 7

ಕುಂಭ

11-Kumbha

ಎಷ್ಟೋ ದಿನಗಳ ಕನಸು ನನಸಾಗುವದಿನವಾಗಿದೆ. ಬೇಸರದಿಂದ ಹೊರಬಂದು ಕ್ರಿಯಾಶೀಲರಾಗಿರಿ. ಶುಭಸಂಖ್ಯೆ: 1

ಮೀನ

12-Meena

ನಿಮ್ಮನ್ನು ಪ್ರಶಂಸಿಸುವವರನ್ನು ಮಾತ್ರವೇ ಆದರಿಸಬೇಡಿ, ಇತರರನ್ನೂ ಆರಾಽಸಿ. ಹೊಸದಕ್ಕೆ ಸಾಧ್ಯತೆ ಜಾಸ್ತಿ. ಶುಭಸಂಖ್ಯೆ: 7