ಭಾರತೀಯರ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದುಕೊಂಡ ಜ್ಯೋತಿಷ್ಯ ಶಾಸ್ತ್ರ ನಡೆದು ಬಂದ ದಾರಿ..!!

0
1658

ಪ್ರಪಂಚದಲ್ಲಿರುವ ಶಾಸ್ತ್ರಗಳಲ್ಲಿ ಅತಿ ಪುರಾತನವಾದದ್ದು ಜ್ಯೋತಿಷ್ಯಶಾಸ್ತ್ರ. ಜ್ಯೋತಿ ಎಂದರೆ ಬೆಳಕು. ಶಾಸ್ತ್ರ ಎಂದರೆ ವಿಜ್ಞಾನ. ಜ್ಯೋತಿಷ್ಯ ಶಾಸ್ತ್ರವು ವೇದಗಳ ಭಾಗವಾಗಿದ್ದು, ಭಾರತೀಯರ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ. ಮಾನವ ಹುಟ್ಟಿನಿಂದ ಸಾಯುವವರೆಗೂ ಜೀವನದ ಆಗುಹೋಗುವ ಶುಭ ಹಾಗೂ ಅಶುಭ ಫಲಗಳನ್ನು ನಿರ್ಣಯಿಸಲು ಈ ಶಾಸ್ತ್ರ ಪ್ರಮುಖವಾಗಿದೆ. ಹುಟ್ಟಿದ ಮಗುವಿನ ನಕ್ಷತ್ರ ನೋಡದೇ ಯಾವ ಶುಭ ಕೆಲಸವನ್ನು ಮಾಡಲು ಸಾಧ್ಯವಾಗಲ್ಲ. ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಉತ್ಸುಕತೆ, ಕೂತುಹಲವಿದ್ದೇ ಇರುತ್ತದೆ.

source: getbackyourlostlove.files.wordpress.com

ಜ್ಯೋತಿಷ್ಯ ಶಾಸ್ತ್ರ ಬೆಳಕಿಗೆ ಬಂದಿದ್ದು ಹೇಗೆ?

ಆದಿ ಪುರುಷನಾದ ಬ್ರಹ್ಮ ದೇವನು ಶಾಸ್ತ್ರವನ್ನು ಹಿರಣ್ಯ ಗರ್ಭದಿಂದ ತಿಳಿದುಕೊಂಡು ಋಷಿಮುನಿಗಳಿಗೆ ಮೊದಲು ಬೋಧಿಸಿದನು ಎಂದು ವಸಿಷ್ಠ ಮಹರ್ಷಿಗಳು ತಿಳಿಸುತ್ತಾರೆ. ಯಜುರ್ವೆದ ಹಾಗೂ ಋಗ್ವೇದದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಪಟ್ಟ ಅನೇಕ ಮೂಲಭೂತ ವಿಚಾರಗಳು ನಮಗೆ ಲಭ್ಯವಾಗಿದೆ. ಹೋಮ ಯಜ್ಞ ಶುಭ ಮೂಹರ್ತದಲ್ಲಿ ಪ್ರಾರಂಭಿಸಬೇಕು ಆಗ ಒಳ್ಳೆಯ ಫಲ ದೊರೆಯುತ್ತದೆ. ಪೂರ್ವಿಕರು ಗ್ರಹ ಸಂಯೋಗಗಳನ್ನು, ಗ್ರಹಗತಿಗಳನ್ನು ಸಂಶೋಧಿಸಿ ಜ್ಯೋತಿಷ್ಯ ಶಾಸ್ತ್ರದ ಗ್ರಂಥವನ್ನು ರಚಿಸಿದ್ದಾರೆ. ಇದರಿಂದ ಜ್ಯೋತಿಷ್ಯ ಶಾಸ್ತ್ರವನ್ನು ಅನುಸರಿಸಲು ತುಂಬಾ ಸಹಾಯವಾಗುತ್ತಿದೆ.

source: zenski.ba

ಭಾರದ್ವಾಜಮುನಿ, ಶುಕಮುನಿ, ಯಜ್ಷವಲ್ಕ, ಮಾಂಡವ್ಯ ಸೇರಿದಂತೆ ಹಲವಾರು ಋಷಿಮುನಿಗಳಿಂದ ರಚಿತವಾದ ಜ್ಯೋತಿಷ್ಯ ಗ್ರಂಥಗಳು ನಮಗೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಗಾಧ ಮಾಹಿತಿ ನೀಡುತ್ತವೆ. ನಮ್ಮ ಮುಖ್ಯಗ್ರಂಥಗಳಲ್ಲೊಂದಾಗಿರುವ ಆರ್ಯಭಟ್ಟ ಸಿದ್ಧಾಂತ ಗ್ರಂಥ ಜ್ಯೋತಿಷ್ಯ ಶಾಸ್ತ್ರಕ್ಕೆ ಆಧಾರವಾಗಿರುವ ಗ್ರಹಗತಿಗಳು, ನಕ್ಷತ್ರಗಳ ಬಗ್ಗೆ ತಿಳಿಸುತ್ತದೆ.

source: media.licdn.com

ಈ ನಮ್ಮ ಬ್ರಹ್ಮಾಂಡದಲ್ಲಿ ಲಕ್ಷಾಂತರ ನಕ್ಷತ್ರಗಳು, ಸಾವಿರಾರು ಗ್ರಹಗಳು ಇದ್ದರೂ ಶಾಸ್ತ್ರಜ್ಞರು ಅದರಲ್ಲಿ ಸೂರ್ಯ ಮಂಡಲದಿಂದ 7 ಗ್ರಹಗಳಾದ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಹಾಗೂ ರಾಹು ಕೇತುಗಳಿಗೆ ಮಾತ್ರ ಮಹತ್ವ ಕೊಟ್ಟಿದ್ದಾರೆ. ಭೂಮಿಯ ಮೇಲಿರುವ ಎಲ್ಲ ಜೀವಿಗಳೂ, ಚರಾಚರವಸ್ತುಗಳು ಪಂಚಭೂತಗಳಾದ ಆಕಾಶ, ಆಗ್ನಿ, ವಾಯು, ನೀರು, ತೇಜಸ್ಸುಗಳಿಂದ ನಿರ್ಮಿತವಾಗಿದೆ. ಈ ನವಗ್ರಹಗಳು ಸಹ ಪಂಚಭೂತಗಳ ಅಧಿನವಾಗಿದೆ. ಆದ್ದರಿಂದ ನವಗ್ರಹಳಿಗೂ ಭೂಮಂಡಲಕ್ಕೂ ನಿಕಟ ಸಂಬಂಧ ಇರುವುದರಿಂದ ಈ ಗ್ರಹಗಳ ಪ್ರಭಾವ ಮಾನವನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸೂರ್ಯನ ಬೆಳಕು ಹಾಗೂ ಶಾಖ ಇಲ್ಲದೇ ಇದ್ದರೆ ಮಳೆ ಬೆಳೆ ಆಗುವುದು ಸಾಧ್ಯವಿಲ್ಲ. ಅದೇ ರೀತಿ ಚಂದ್ರನ ಪ್ರಭಾವವೂ ಸಹ ಹುಣ್ಣಿಮೆ ದಿನ ಸಮುದ್ರ ಸಾಗರದ ಮೇಲೆ ಬೀರಿ ಅಲೆಗಳಲ್ಲಿ ಏರಿಳಿತವನ್ನು ಉಂಟುಮಾಡುತ್ತದೆ. ಚಂದ್ರ ಗ್ರಹ ಮಾನವನ ಮನಸ್ಸಿನ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತದೆ.

source: holisticyogaandayurvedagoa.com

ಈ ಜ್ಯೋತಿಷ್ಯ ಶಾಸ್ತ್ರದಿಂದ ಜೀವನದ ಎಲ್ಲಾ ಕ್ಷೇತ್ರದಲ್ಲೂ ಕತ್ತಲನ್ನು ನೀಗಿಸಿ ಬೆಳಕು ತರುತ್ತದೆ ಹಾಗೂ ಜನ್ಮ ಜನ್ಮಾಂತರದ ಕರ್ಮಗಳ ತೊಂದರೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಿದ್ಧಾಂತ, ಸಂಹಿತ ಹಾಗೂ ಹೋರ ಎಂಬ ಮೂರು ವಿಭಾಗಳಿದ್ದು ಇದನ್ನು ತ್ರಿಸ್ಕಂದ ಜ್ಯೋತಿಷ್ಯ ಎಂದು ಕರೆಯುತ್ತಾರೆ.

ಸಿದ್ಧಾಂತ: ಇದರಿಂದ ಅಂತರಿಕ್ಷದಲ್ಲಿನ ಗ್ರಹಗಳ ಚಲನೆ ಅದರ ಕಾಲಗಣನೆ, ಗ್ರಹಗಳ ಕಾಲಮಾನ ಹಾಗೂ ಪಂಚಾಗದ ಲೆಕ್ಕಾಚಾರ ತಿಳಿಯಬಹುದು.

ಸಂಹಿತ: ಇದರಿಂದ ಭೌತಿಕ ವಸ್ತು, ಭೂಗರ್ಭ ಶಾಸ್ತ್ರ ಮತ್ತು ಶಕುನ ಶಾಶ್ತ್ರದ ಬಗ್ಗೆ ತಿಳಿಯಬಹುದಾಗಿದೆ.

ಹೋರ: ಇದರಿಂದ ಫಲ ಜ್ಯೋತಿಷ್ಯ, ಆಕಾಶ ಕಾಯಕಗಳಾದ ಗ್ರಹ ನಕ್ಷತ್ರಗಳು ಜೀವಿಗಳ ಮೇಲೆ ಬೀರುವ ಪ್ರಭಾವ ಲೆಕ್ಕಾಚಾರ ಹಾಗೂ ಮೂಹರ್ತ ಶಾಸ್ತ್ರದ ವಿಷಯಗಳ ಬಗ್ಗೆ ತಿಳಿಯಬಹುದು.

source: findyourfate.com

ಜ್ಯೋತಿಷ್ಯ ಶಾಸ್ತ್ರವು ವೇದಗಳಲ್ಲಿ ಒಂದು ಅಂಗವಾಗಿದ್ದು, ಈ ಶಾಸ್ತ್ರದ ಬಗ್ಗೆ ನಂಬಿಕೆ ಅಥವಾ ಅಪನಂಬಿಕೆ ಅವರ ಅವರ ತರ್ಕಕ್ಕೆ ಬಿಟ್ಟಿದ್ದು. ಶಾಸ್ತ್ರವನ್ನು ಸರಿಯಾಗಿ ಅಭ್ಯಾಸ ಮಾಡಿ ಫಲಾಫಲಗಳನ್ನು ತಿಳಿದುಕೊಳ್ಳಿ.