ನಿತ್ಯ ಭವಿಷ್ಯ ಆಗಸ್ಟ್ 5, 2017 (ಶನಿವಾರ)

0
543

ಆಗಸ್ಟ್ 5, 2017 (ಶನಿವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಪೂರ್ವಾಷಾಢಾ ನಕ್ಷತ್ರ,

ರಾಹುಕಾಲ: ಬೆಳೆಗ್ಗೆ 9:17 am – 10:51 am
ಗುಳಿಕಕಾಲ: ಬೆಳೆಗ್ಗೆ 6:09 am – 7:43 am
ಯಮಗಂಡಕಾಲ: ಮದ್ಯಾಹ್ನ 1:59 pm – 3:33 pm

ಮೇಷ

01-Mesha

ಸದಾ ಪರರ ಹಿತವನ್ನು ಬಯಸುವ ನೀವು ಇಂದು ನಿಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಪರರನ್ನು ಅವಲಂಬಿಸಬೇಕಾಗುವುದು. ಮನೆ ಸದಸ್ಯರನ್ನು ಪ್ರೀತಿ ವಿಶ್ವಾಸದಿಂದ ಗೆದ್ದಲ್ಲಿ ಜಗತ್ತನ್ನೇ ಗೆದ್ದ ಅನುಭವವಾಗುವುದು.

ವೃಷಭ

02-Vrishabha

ಕೌಟುಂಬಿಕ ಜೀವನದಲ್ಲಿ ಮನಸ್ತಾಪಗಳು ಕಂಡುಬಂದರೂ ಅದು ಕೇವಲ ಕ್ಷ ಣಿಕ ಪುನಃ ಪತಿ-ಪತ್ನಿಯರು ಒಮ್ಮತದಿಂದ ಈ ದಿನವನ್ನು ಕಳೆಯುವಿರಿ. ಇದಕ್ಕೆ ಮಕ್ಕಳ ಸಲಹೆಯೂ ಪೂರಕವಾಗಿರುವುದು.

ಮಿಥುನ

03-Mithuna

ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡುಬರುವುದು. ಗ್ರಹಗಳ ಶುಭ ಸಂಚಾರದಿಂದಾಗಿ ಹಣವನ್ನು ಇಂದು ಉಳಿತಾಯ ಮಾಡಬಲ್ಲಿರಿ. ಬ್ಯಾಂಕಿನ ವ್ಯವಹಾರಗಳನ್ನು ಇಂದು ಪೂರೈಸಿಕೊಳ್ಳುವುದು ಉತ್ತಮ.

ಕಟಕ

04-Kataka

ಅಧಿಕ ತಿರುಗಾಟದಿಂದ ದೇಹಾಲಸ್ಯ, ಅಕಾಲ ಭೋಜನ, ಸಂಗಾತಿಯ ಮುನಿಸು, ಕಾರ್ಯಕ್ಷೇತ್ರದಲ್ಲಿ ಕೆಲಸಗಾರರ ಅಸಹಕಾರ, ಆಂಜನೇಯನ ಸ್ಮರಣೆ ನಿರಂತರ ಮಾಡಿ. ಬರಬೇಕಾಗಿದ್ದ ಹಣವು ಇಂದು ನಿಮ್ಮ ಕೈಸೇರುವುದು.

ಸಿಂಹ

05-Simha

ಬೇಡದ ವಿಚಾರಗಳು ನಿಮಗೆ ಘಾಸಿ ಮಾಡುವುದು. ಶಿರೋವೇದನೆ ಇಲ್ಲವೇ ನೇತ್ರ ದೋಷಗಳು ಕಂಡುಬರುವುದು. ಸೂಕ್ತ ವೈದ್ಯಕೀಯ ಉಪಚಾರ ತೆಗೆದುಕೊಳ್ಳಿ. ಆರ್ಥಿಕ ಮುಗ್ಗಟ್ಟು ಕಡಿಮೆ ಆಗುವುದು.

ಕನ್ಯಾ

06-Kanya

ಈ ದಿನ ನಿಮ್ಮ ಸಂಗಾತಿಯ ಮಾತು ಕೇಳುವುದರಿಂದ ಅಧಿಕ ಲಾಭಾಂಶವನ್ನೇ ಹೊಂದುವಿರಿ. ಮಡದಿ-ಮಕ್ಕಳಲ್ಲಿನ ಅಸಮಾಧಾನ ಅಂತ್ಯಗೊಳ್ಳುವುದು. ಆರೋಗ್ಯ ಉತ್ತಮ.

ತುಲಾ

07-Tula

ರಾಜಿ ಪಂಚಾಯಿತಿಯಲ್ಲಿ ಭಾಗವಹಿಸಿ ಮುಖಭಂಗಕ್ಕೆ ಒಳಗಾಗುವಿರಿ. ಊರ ಉಸಾಬರಿ ನಿಮಗೇಕೆ ಸುಮ್ಮನಿದ್ದು ಬಿಡಿ. ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯಕ್ಕೆ ವಿರಾಮ ದೊರೆಯಲಿದೆ. ಆಂಜನೇಯ ಸ್ತೋತ್ರ ಪಠಿಸಿ.

ವೃಶ್ಚಿಕ

08-Vrishika

ಇಂದು ಎಲ್ಲವೂ ಇದ್ದು ನಿಮಗೆ ಸಕಾಲಕ್ಕೆ ಯಾವುದೂ ದೊರೆಯುವುದಿಲ್ಲ. ಹಾಗಂತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ನಿಮ್ಮದಲ್ಲ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನು

09-Dhanussu

ವ್ಯಾಪಾರ-ವ್ಯವಹಾರಗಳಲ್ಲಿ ತುಸು ನಷ್ಟ ಅನುಭವಿಸುವಿರಿ. ಕುಹಕದ ಮಾತುಗಳಿಗೆ ಬೆಲೆ ನೀಡಬೇಡಿ. ಕೋಪ ಹಿಡಿತದಲ್ಲಿಟ್ಟು ಕೊಳ್ಳುವುದು ಒಳ್ಳೆಯದು. ಸುಬ್ರಹ್ಮಣ್ಯ ಧ್ಯಾನದ ಜತೆಯಲ್ಲಿ ಆಂಜನೇಯ ಮಂತ್ರವನ್ನು ಪಠಿಸಿ.

ಮಕರ

10-Makara

ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಉಲ್ಲಾಸ. ಕೋರ್ಟು, ಕಚೇರಿಯಲ್ಲಿ ಜಯ ನಿಮ್ಮ ಕಡೆಗೆ ಆಗಿ ವಿಜಯ ಪತಾಕೆಯನ್ನು ಹಾರಿಸುವಿರಿ. ಸ್ನೇಹಿತರು, ಬಂಧುಗಳಿಂದ ಮಹತ್ತರ ಕೆಲಸಕ್ಕೆ ನೆರವು ದೊರೆಯಲಿದೆ.

ಕುಂಭ

11-Kumbha

ಅತ್ಯಂತ ಭಾವುಕರಾದ ನೀವು ಕೆಲವೊಮ್ಮೆ ನಿಮ್ಮ ಮನಸ್ಸಿನ ಎಲ್ಲ ವಿಚಾರಗಳನ್ನು ಪರರ ಮುಂದೆ ಹೇಳಿಕೊಳ್ಳುವಿರಿ. ಇದರಿಂದ ಬೇರೊಂದು ಅರ್ಥವೇ ಪ್ರಚಾರಕ್ಕೆ ಬರುವುದು. ದುರ್ಗಾ ಜಪ ಮಾಡಿ.

ಮೀನ

12-Meena

ವ್ಯಾಪಾರ-ವ್ಯವಹಾರಗಳಲ್ಲಿ ನೀವು ನಿರೀಕ್ಷಿಸಿದಷ್ಟು ಅದಾಯ ಬರದೇ ಇರುವ ಸಾಧ್ಯತೆ. ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು. ಸಂಜೆಯ ವೇಳೆಗೆ ಶುಭ ಸೂಚನೆ ದೊರೆಯುವುದು.