ನಿತ್ಯ ಭವಿಷ್ಯ ಆಗಸ್ಟ್ 7, 2017 (ಸೋಮವಾರ)

0
636

ಆಗಸ್ಟ್ 7, 2017 (ಸೋಮವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ ತಿಥಿ,
ಶ್ರವಣಾ ನಕ್ಷತ್ರ,

ರಾಹುಕಾಲ: ಬೆಳೆಗ್ಗೆ 7:43 am – 9:17 am
ಗುಳಿಕಕಾಲ: ಮದ್ಯಾಹ್ನ 1:59 pm – 3:33 pm
ಯಮಗಂಡಕಾಲ: ಬೆಳೆಗ್ಗೆ 10:51 am – 12:25 pm

ಮೇಷ

01-Mesha

ಜಿಡ್ಡುಗಟ್ಟಿದ ಕಾರ‍್ಯಕಾರಿ ಮಂಡಳಿಗೆ ಬಿಸಿ ಮುಟ್ಟಿಸಲು ಪ್ರತಿಭಟನೆಯಂತಹ ಹೋರಾಟ ಮಾಡುವಿರಿ. ಸಹೋದ್ಯೋಗಿಗಳು ನಿಮ್ಮ ನೇತೃತ್ವದಲ್ಲಿ ಮುಷ್ಕರ ಮಾಡುವ ಸಾಧ್ಯತೆ. ನ್ಯಾಯಬದ್ಧವಾದ ಬೇಡಿಕೆಗಳನ್ನು ಆಡಳಿತದಲ್ಲಿರುವ ಹಿರಿಯ ಅಧಿಕಾರಿಗಳು ಪೂರೈಸುವರು. ಹಾಗಾಗಿ ನೀವೊಬ್ಬ ಲೀಡರ್‌ ಆಗಿ ರೂಪುಗೊಳ್ಳುವಿರಿ.

ವೃಷಭ

02-Vrishabha

ಬ್ಯಾಂಕಿಂಗ್‌ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ. ಹಣವನ್ನು ಪಡೆಯುವಾಗ ಪರೀಕ್ಷಿಸಿ ಪಡೆಯಿರಿ. ಇಲ್ಲವೆ ತೊಂದರೆಗೆ ಸಿಲುಕಿಕೊಳ್ಳುವಿರಿ. ಸ್ವಂತ ವ್ಯವಹಾರಸ್ಥರಿಗೆ ಉತ್ತಮ ಪ್ರಗತಿಯಿದೆ. ನಿಮ್ಮ ಕಾರ್ಯಯೋಜನೆಗಳನ್ನು ಒಪ್ಪತಕ್ಕ ಜನರು ನಿಮ್ಮ ಸ್ನೇಹವನ್ನು ಬೆಳೆಸುವರು.

ಮಿಥುನ

03-Mithuna

ಒಳ್ಳೆಯ ಕೆಲಸ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ಊಟ-ಉಪಚಾರಗಳಲ್ಲಿ ಕ್ರಮತೆಯನ್ನು ಅನುಸರಿಸಿಕೊಂಡರೆ ಒಳ್ಳೆಯದು. ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭ. ಉತ್ತಮ ಆರೋಗ್ಯ.

ಕಟಕ

04-Kataka

ಬುದ್ಧಿ ಚಾತುರ‍್ಯದಿಂದ ಹಮ್ಮಿಕೊಂಡ ಕೆಲಸಗಳು ಪ್ರಶಂಸೆಗೆ ಪಾತ್ರವಾಗುವುದು. ಹಿತಚಿಂತಕರೊಡನೆ ಸಮಾಲೋಚಿಸುವಿರಿ. ಆರ್ಥಿಕ ಬಿಕ್ಕಟ್ಟು ಇಂದು ನಿಮ್ಮನ್ನು ಕಾಡುವುದು. ಕಚೇರಿ ಬಿಕ್ಕಟ್ಟು ಶಮನವಾಗುವುದು.

ಸಿಂಹ

05-Simha

ಆಸ್ತಿ ವ್ಯವಹಾರಗಳು ಚರ್ಚೆಗೆ ಬರುವುದು. ಉತ್ತಮ ಆರೋಗ್ಯ ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುವುದು. ಸಕಾಲದಲ್ಲಿ ಸ್ನೇಹಿತರ ನೆರವು ದೊರೆಯುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ.

ಕನ್ಯಾ

06-Kanya

ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ ಎನ್ನುವಂತೆ ಈದಿನ ನೀವು ಆಶಾವಾದಿ ಚೌಕಟ್ಟಿನಲ್ಲಿರುವಿರಿ. ಆದರೆ ಹಣವನ್ನು ಖರ್ಚು ಮಾಡುವ ಸಂದರ್ಭದಲ್ಲಿ ಕೈಬಿಗಿ ಹಿಡಿತ ಮಾಡುವುದು ಒಳ್ಳೆಯದು. ದೇವಿ ಆರಾಧನೆ ಮೂಲಕ ದೈವಿ ಕೃಪೆಯನ್ನು ಪಡೆಯಿರಿ.

ತುಲಾ

07-Tula

ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಬೇಡ. ರಾಜಕೀಯ ನಾಯಕರುಗಳಿಗೆ ಟೀಕೆಗಳು ತಪ್ಪುವುದಿಲ್ಲ. ವ್ಯಾಪಾರಸ್ಥರಿಗೆ ಉತ್ತಮ ಕಾಲ. ಶಿಸ್ತುಬದ್ಧ ಜೀವನದಿಂದ ಶಿವನು ತಲೆಬಾಗುತ್ತಾನೆ. ಹಾಗಾಗಿ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಿರಿ.

ವೃಶ್ಚಿಕ

08-Vrishika

ಸಕಲ ಅನರ್ಥಗಳಿಗೆ ಕೋಪ ಮೊದಲ ಬೇರು. ಜೀವನದಲ್ಲಿ ಸಣ್ಣಪುಟ್ಟ ಘಟನೆಗಳು ನಮ್ಮ ಆತ್ಮೀಯರಿಂದ ಆದಾಗ ಬೇಸರ ಮೂಡುವುದು ಸಹಜ. ಅಂತೆಯೇ ಈ ದಿನ ನಿಮ್ಮ ಕೋಪ-ತಾಪಗಳಿಂದ ದೂರವಿರುವುದು ಒಳ್ಳೆಯದು.

ಧನು

09-Dhanussu

ಗುರಿ ಸಾಧಿಸುವಲ್ಲಿ ಸಫಲರಾಗುತ್ತೀರಿ. ಹಳೆಯ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ಅಪರಿಚಿತ ವ್ಯಕ್ತಿಗಳೊಡನೆ ವ್ಯವಹಾರ ಬೇಡ. ಒಳ್ಳೆಯ ದಿನಗಳು ಕಾದಿವೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಮಕರ

10-Makara

ಇಂದು ನಿಮಗೆ ಮರೆಯಲಾರದ ದಿನ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದೆ. ಬಂಧುಬಾಂಧವರ ಸಹಕಾರ ದೊರೆಯುವುದು. ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಪ್ರಸ್ತಾಪ ನಡೆಯುವುದು. ಪರಸ್ಪರ ಒಪ್ಪಿಗೆಯಿಂದ ವಿವಾಹ ನಿಶ್ಚಯಕಾರ್ಯ ಮಾಡುವಿರಿ.

ಕುಂಭ

11-Kumbha

ಕೌಟುಂಬಿಕ ಜೀವನದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪತಿ-ಪತ್ನಿಯರಲ್ಲಿ ವಿರಸ ತೋರುವುದು. ಮನಸ್ಸಿನ ಸೌಖ್ಯಕ್ಕೆ ಧಕ್ಕೆ ಬರಲಿದೆ. ವಾದ-ವಿವಾದಗಳಿಂದ ದೂರ ಉಳಿಯುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಮೀನ

12-Meena

ನೌಕರಿಯಲ್ಲಿ ಸಮಸ್ಯೆಗಳು ಎದುರಾಗಬಹುದು. ಅವನ್ನು ನಿಮ್ಮ ಮಾತಿನ ಮೋಡಿಯಿಂದ ಬಗೆಹರಿಸಿಕೊಳ್ಳುವಿರಿ. ಇದಕ್ಕೆ ಸಹೋದ್ಯೋಗಿಗಳ ಬೆಂಬಲವಿರುವುದು. ಈ ದಿನ ಗೆಳೆಯರ ಜೊತೆ ವಿನೋದವಾಗಿ ಕಾಲ ಕಳೆಯುವಿರಿ. ಸಂಗಾತಿಯ ಸಲಹೆಯನ್ನು ತಿರಸ್ಕರಿಸದಿರಿ.