ನಿತ್ಯ ಭವಿಷ್ಯ: ಜನವರಿ 8, 2018

0
1272

ಮೇಷ:

ಅನಿರೀಕ್ಷಿತ ಧನಾಗಮ. ದೂರದ ಊರುಗಳಿಂದ ಬಂಧುಬಾಂಧವರ ಆಗಮನದ ವಾರ್ತೆ ಕೇಳುವಿರಿ. ಮನಸ್ಸಿಗೆ ಸಂತೋಷ ನೀಡುವ ಕಾರ್ಯದಲ್ಲಿ ಭಾಗವಹಿಸುವಿರಿ. ನೆರೆಮನೆಯವರು ನಿಮಗೆ ಸಹಕಾರ ನೀಡುವರು.

ವೃಷಭ:

ಗ್ರಹಚಾರ ಕೆಟ್ಟಾಗ ಮನೆಮಂದಿಯೂ ಆದರಿಸುವುದಿಲ್ಲ. ಆದರೆ ಇಂದು ನಿಮಗೆ ಸ್ನೇಹಿತರು ಸಹಕಾರ ನೀಡುವರು. ಸಹೋದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುವರು. ಪರಮೇಶ್ವರನನ್ನು ಆರಾಧಿಸಿ ಪ್ರಸನ್ನವದನರಾಗಿರಿ.

ಮಿಥುನ:

ಮಾನಸಿಕ ಆರೋಗ್ಯದ ವಿಚಾರವಾಗಿ ಸೂಕ್ತ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಮಾನಸಿಕ ಖಾಯಿಲೆಗಳ ಬಗ್ಗೆ ಉದಾಸೀನ ಮಾಡದಿರಿ. ಹಣವು ನೀರಿನಂತೆ ಖರ್ಚಾದರೂ ಉತ್ತಮ ಕಾರ್ಯಕ್ಕೆ ಹಣ ವಿನಿಯೋಗಿಸಿದ ತಪ್ತಿ ನಿಮ್ಮದು.

ಕಟಕ:

ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು. ಧನಲಾಭ, ಕಾರ‌್ಯಾನುಕೂಲ. ಕ್ಷೀರಾನ್ನ ಭೋಜನ. ಅಲಂಕಾರ ವಸ್ತುಗಳ ಖರೀದಿಯು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ.

ಸಿಂಹ:

ಅಹಂಕಾರವು ಅವನತಿಗೆ ದಾರಿ ಮಾಡಿಕೊಡಲಿದೆ. ಆದಷ್ಟು ಗುರುಹಿರಿಯರ ಮಾತನ್ನು ಆಲಿಸಿದಲ್ಲಿ ವೃಥಾ ಅಪವಾದಗಳಿಂದ ದೂರ ಉಳಿಯುವಿರಿ. ಆಹಾರ-ವಿಹಾರದ ಬಗ್ಗೆ ಗಮನವಿರಲಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ:

ಒತ್ತಡದಿಂದಾಗಿ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗದೆ ಇರಬಹುದು. ಆದರೆ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂದು ನಿಮಗೆ ತಿಳಿದಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ದಿನ.

ತುಲಾ:

ನೀವು ಅಂದುಕೊಂಡ ರೀತಿಯಲ್ಲಿ ಧನಾಗಮನ ಆಗದೆ ಇರುವ ಸಾಧ್ಯತೆ. ಪ್ರಯಾಣದಲ್ಲಿ ಎಚ್ಚರಿಕೆ. ಮೇಲಾಧಿಕಾರಿಗಳಿಂದ ಟೀಕೆ ಟಿಪ್ಪಣಿಗಳನ್ನು ಕೇಳಬೇಕಾಗುವುದು. ಈದಿನ ಕೆಲಸ ಮುಗಿದರೆ ಸಾಕು ಎಂದೆನಿಸುವುದು.

ವೃಶ್ಚಿಕ:

ದೂರ ಪ್ರಯಾಣದ ಸಾಧ್ಯತೆ. ಹೆಚ್ಚುವರಿ ಹೊಣೆಗಾರಿಕೆಯಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಮಕ್ಕಳ ಅಭಿವೃದ್ಧಿಯು ಸಂತಸವನ್ನುಂಟು ಮಾಡುವುದು. ಗುರುವಿನ ಶ್ರೀರಕ್ಷೆ ಇರುವುದರಿಂದ ಹೆಚ್ಚಿನ ತೊಂದರೆಯಿಲ್ಲ.

ಧನಸ್ಸು:

ವೈಯಕ್ತಿಕವಾಗಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಔದಾರ್ಯವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಯತ್ನಿಸುವರು. ಮನೆಯಲ್ಲಿ ಬೆಲೆ ಬಾಳುವ ವಸ್ತುಗಳ ಸಂಗ್ರಹ ಮಾಡುವಿರಿ.

ಮಕರ:

ಕೆಲವರು ನಿಮ್ಮಿಂದ ಪ್ರಯತ್ನಪೂರ್ವಕವಾಗಿ ಅಂತರ ಕಾಪಾಡಿಕೊಳ್ಳಲು ಯತ್ನಿಸಬಹುದು. ಇದರ ಬಗ್ಗೆ ಯೋಚಿಸಬೇಡಿ. ನಿಮ್ಮ ಮುಂದಿನ ಗುರಿ ದೊಡ್ಡದಿದೆ. ಆ ಬಗ್ಗೆ ಗಮನ ನೀಡಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕುಂಭ:

ನಿಮ್ಮ ಪ್ರಾಮಾಣಿಕ ಕಾರ್ಯ ನಿರ್ವಹಣೆಗೆ ಅನಿರೀಕ್ಷಿತ ಮತ್ತು ಅಚ್ಚರಿಯ ಪ್ರತಿಫಲ ಕಾದಿದೆ. ಆದರೆ ಆರ್ಥಿಕ ವಿಷಯದಲ್ಲಿ ದುಡುಕಬೇಡಿ. ಹಿರಿಯರ ಸಲಹೆ ಇಲ್ಲದೆ ಹೂಡಿಕೆ ಬಗ್ಗೆ ನಿರ್ಧಾರ ಬೇಡ.

ಮೀನ:


ಲಾಭದಾಯಕ ಒಪ್ಪಂದಗಳಿಗೆ ಸಹಿ ಹಾಕುವಿರಿ. ಮರೆತು ಹೋಗಿದ್ದ ಬಾಂಧವ್ಯಗಳು ಮತ್ತೆ ಗರಿಗೆದರುವುದು. ಕಚೇರಿಯಲ್ಲಿ ಸ್ಥಾನಪಲ್ಲಟ. ಹೆಚ್ಚಿನ ಅನುಕೂಲಕ್ಕಾಗಿ ಮನೆದೇವರನ್ನು ಪ್ರಾರ್ಥಿಸಿರಿ.