ನಿತ್ಯ ಭವಿಷ್ಯ ಆಗಸ್ಟ್ 10, 2017 (ಗುರುವಾರ)

0
673

ಆಗಸ್ಟ್ 10, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ತದಿಗೆ ತಿಥಿ,
ಶತಭಿಷೆ ನಕ್ಷತ್ರ,

ರಾಹುಕಾಲ: ಮದ್ಯಾಹ್ನ 1:58 pm – 3:32 pm
ಗುಳಿಕಕಾಲ: ಬೆಳೆಗ್ಗೆ 9:17 am – 10:51 am
ಯಮಗಂಡಕಾಲ: ಬೆಳೆಗ್ಗೆ 6:10 am – 7:43 am

ಮೇಷ

01-Mesha

ಕುಟುಂಬದ ಸದಸ್ಯರ ಜೊತೆಯಲ್ಲಿ ಅಲ್ಪ ಪ್ರವಾಸ ಕೈಗೊಳ್ಳುವಿರಿ. ನಿಮ್ಮಲ್ಲಿ ಹೊಸ ಹುರುಪು ತುಂಬುವುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದರಿಂದ ಮನೆಯಲ್ಲಿ ಸಂತಸದ ವಾತಾವರಣ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ.

ವೃಷಭ

02-Vrishabha

ಇತರರು ಏನು ತಿಳಿದುಕೊಳ್ಳುತ್ತಾರೆ ಎಂದು ನೀವು ಸತ್ಯದ ಹಾದಿಯಿಂದ ವಿಮುಖರಾಗುವುದು ಒಳ್ಳೆಯದಲ್ಲ. ನಿಮಗೆ ಸರಿ ಎನಿಸಿದ್ದನ್ನು ಮಾಡುವ ಇಲ್ಲವೆ ಹೇಳುವ ಹಕ್ಕು ನಿಮ್ಮದಾಗಿರುತ್ತದೆ. ನಿಮ್ಮ ನಿಲುವಿನಿಂದ ಹಿಂದೆ ಸರಿಯದಿರಿ.

ಮಿಥುನ

03-Mithuna

ಸ್ವಯಂಕೃತ ಅಪರಾಧದಿಂದ ಈದಿನ ಕೆಲವು ಕಷ್ಟಕರ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು. ಯಾರನ್ನು ಅತಿಯಾಗಿ ನಂಬಿದಿರಿ. ನಂಬಿದ ವ್ಯಕ್ತಿಯಿಂದಲೇ ಇಂದು ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇರುವುದು.

ಕಟಕ

04-Kataka

ಈ ದಿನ ನಿಮಗೆ ನಿಮ್ಮ ಮಾತೇ ಬಂಡವಾಳವಾಗುವುದು. ವಾಕ್‌ ಸ್ಥಾನದಲ್ಲಿನ ಗ್ರಹಗಳು ನಿಮ್ಮ ಮಾತಿಗೆ ಬೆಲೆಯನ್ನು ತಂದುಕೊಡುವರು. ನೂತನ ಸ್ನೇಹಿತರು ನಿಮ್ಮ ಸ್ನೇಹವನ್ನು ಅರಸಿ ಬರುವರು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ

05-Simha

ಆಧ್ಯಾತ್ಮ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ನಿಮ್ಮ ಹುಟ್ಟುಹಬ್ಬದ ಸವಿ ನೆನಪಿಗಾಗಿ ದೀನದಲಿತರಿಗೆ ಹಣ್ಣು-ಹಂಪಲುಗಳನ್ನು ನೀಡಿರಿ. ನಿಮಗೆ ಸಾಮಾಜಿಕ ಬದ್ಧತೆ ಹೆಚ್ಚಾಗಲಿದೆ. ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ.

ಕನ್ಯಾ

06-Kanya

ನೀವಿಂದು ಹೆಚ್ಚು ಪ್ರಭಾವಶಾಲಿಯಾಗಿದ್ದೀರಿ ಎಂದರೆ ಹಲವಾರು ಕಷ್ಟದ ಸಮಯವನ್ನು ಮೆಟ್ಟಿ ನಿಂತಿರುವುದರಿಂದ ಈ ದಿನ ಹಮ್ಮಿಕೊಳ್ಳುವ ಕೆಲಸಗಳು ಸರಾಗವಾಗಿ ಆಗುವುದು. ಸ್ನೇಹಿತರು ನಿಮ್ಮ ನೆರವಿಗೆ ಬರುವುದು.

ತುಲಾ

07-Tula

ಕುಟುಂಬದಲ್ಲಿ ಶಾಂತಿಯ ವಾತಾವರಣ. ಸಾಮಾಜಿಕ ಮತ್ತು ರಾಜಕೀಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ನಿಮ್ಮ ಮನೋಕಾಮನೆಗಳು ಪೂರ್ಣವಾಗಿ ಕೈಗೂಡುವುದು. ಆರ್ಥಿಕ ಸ್ಥಿತಿಯಲ್ಲಿ ಅಲ್ಪ ಹಿನ್ನಡೆ ತೋರುವುದು.

ವೃಶ್ಚಿಕ

08-Vrishika

ಸಮಸ್ಯೆಗಳ ಸುಳಿಯಿಂದ ಹೊರಬರಲು ಹನುಮಾನ್‌ ಚಾಲೀಸಾ ಪಠಣ ಮಾಡಿರಿ. ದೀನದಲಿತರಿಗೆ ಆಹಾರವನ್ನು ನೀಡಿರಿ. ಪ್ರಯಾಣದಲ್ಲಿ ಎಚ್ಚರ ಅಗತ್ಯ. ಗುರು-ಹಿರಿಯರ ಆಶೀರ್ವಾದ ಪಡೆಯಿರಿ. ಆರೋಗ್ಯದ ಕಡೆ ಗಮನವಿರಲಿ.

ಧನು

09-Dhanussu

ಗೃಹ ಕೈಗಾರಿಕೆಗೆ ಪೂರಕ ವಾತಾವರಣ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆಯುವುದು. ಗ್ರಹಗಳ ಶುಭ ಸಂಚಾರದಿಂದ ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಚಾಲನೆ ದೊರೆಯುವುದು. ಉತ್ತಮ ಆರೋಗ್ಯವಿದೆ.

ಮಕರ

10-Makara

ಇಂದು ನಿಮಗೆ ಪರೀಕ್ಷೆ ಕಾಲ. ಕೆಲಸಗಾರರ ಅಸಹಕಾರದಿಂದ ಹಮ್ಮಿಕೊಂಡ ಕಾರ್ಯದಲ್ಲಿ ಹಿನ್ನಡೆ ತೋರುವುದು. ನಿಮ್ಮನ್ನು ನಂಬಿ ವ್ಯವಹಾರದಲ್ಲಿ ಹಣ ಹೂಡಿದವರಿಗೆ ಸೂಕ್ತ ಭರವಸೆಯನ್ನು ನೀಡಬೇಕಾಗುವುದು.

ಕುಂಭ

11-Kumbha

ನಿಮ್ಮ ಅದೃಷ್ಟ ನಿಮ್ಮ ಬಾಗಿಲಿಗೆ ಬಂದಿರುವಾಗ ಅದನ್ನು ಹೊರ ತಳ್ಳುವುದು ಸೂಕ್ತವಲ್ಲ. ಬರಬೇಕಾಗಿದ್ದ ಹಣಕಾಸು ಇಂದು ನಿಮ್ಮ ಕೈಸೇರುವುದು. ಕುಟುಂಬ ಸದಸ್ಯರ ಭಿನ್ನಾಭಿಪ್ರಾಯ ಬಗೆಹರಿಯುವುದು.

ಮೀನ

12-Meena

ಸಂಕಲ್ಪಿತ ಯೋಜನೆಗಳಿಗೆ ಈ ದಿನ ಕೊಂಚ ಅಡೆತಡೆ ಕಂಡುಬರುವುದು. ಆದರೆ ಈ ಹಿಂದೆ ಹಮ್ಮಿಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆದುಕೊಂಡು ಹೋಗುವುದು. ಮಕ್ಕಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿರಿ.