ನಿತ್ಯ ಭವಿಷ್ಯ ಆಗಸ್ಟ್ 17, 2017 (ಗುರುವಾರ)

0
663

ಆಗಸ್ಟ್ 17, 2017 (ಗುರುವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಮೃಗಶಿರ ನಕ್ಷತ್ರ,

ಮೇಷ

01-Mesha

ಮನೆ ಬದಲಾವಣೆ ಮಾಡುವುದರಿಂದ ಒಳಿತಾಗುವುದೆಂದು ನಂಬುವಿರಿ. ಆದರೆ ಸದ್ಯದ ಗ್ರಹಸ್ಥಿತಿ ಅದಕ್ಕೆ ಪೂರಕವಾಗಿಲ್ಲ. ಸ್ನೇಹಿತರ, ಹಿತೈಷಿಗಳ ಸಲಹೆ ಪಡೆಯಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು.

ವೃಷಭ

02-Vrishabha

ಕುಟುಂಬದಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ಹಮ್ಮಿಕೊಂಡ ಕಾರ್ಯಗಳು ಗುರುವಿನ ಕೃಪೆಯಿಂದ ಬಹುಬೇಗನೆ ಮುಗಿಯುವುದು. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಮಿಥುನ

03-Mithuna

ಗ್ರಹಗತಿಗಳು ನಿಮ್ಮ ವಿರುದ್ಧವಾಗಿ ಸಂಚರಿಸುತ್ತಿರುವುದರಿಂದ ಈದಿನ ನಿಮ್ಮ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಆರ್ಥಿಕ ಮುಗ್ಗಟ್ಟನ್ನು ಸರಿದೂಗಿಸಲು ಸಾಲ ಮಾಡಬೇಕಾಗುವುದು.

ಕಟಕ

04-Kataka

ಎಷ್ಟೇ ಮುತುವರ್ಜಿಯಿಂದ ಕೆಲಸ ಮಾಡಿದರೂ ಅಪವಾದ ತಪ್ಪುವುದಿಲ್ಲ. ತಣ್ಣೀರನ್ನೇ ಆರಿಸಿ ಕುಡಿಯುವ ಕಾಲ. ಯಾವುದೇ ಕೆಲಸವನ್ನು ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿರಿ. ಹಣಕಾಸಿನ ಮುಗ್ಗಟ್ಟು ಇರುತ್ತದೆ.

ಸಿಂಹ

05-Simha

ಗುರುವಿನ ಶುಭ ಸಂಚಾರದಿಂದಾಗಿ ಇಂದು ಭಾಗ್ಯವನ್ನೇ ಹೊಂದುವಿರಿ. ಆದರೆ ಕೆಲವು ಮಂಗಳ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ತಂದೆ ಮಕ್ಕಳಲ್ಲಿ ವಿಶೇಷ ಪ್ರೀತಿ-ಪ್ರೇಮ ವಾತ್ಸಲ್ಯಗಳು ಹೆಚ್ಚಾಗುವವು.

ಕನ್ಯಾ

06-Kanya

ಉತ್ತಮ ಆರೋಗ್ಯ, ಹಣಕಾಸು ವ್ಯವಹಾರಗಳಲ್ಲಿ ಯಶಸ್ಸು, ನೀವು ಆಯೋಜಿಸಿದ ಕಾರ್ಯಕ್ರಮಗಳು ಯಶಸ್ಸಿನತ್ತ ಸಾಗುವುದು. ಸಮಾಜ ಬಾಂಧವರಿಂದ ಮೆಚ್ಚುಗೆಯ ನುಡಿಗಳನ್ನು ಕೇಳುವಿರಿ.

ತುಲಾ

07-Tula

ಪರಾಕ್ರಮ ಸ್ಥಾನದ ಗುರು ವ್ಯಯಸ್ಥಾನದಲ್ಲಿ ಸಂಚರಿಸುವ ಮೂಲಕ ಕೆಲವು ಕಾರ್ಯಗಳಿಗೆ ಮುನ್ನುಗ್ಗಿ ಹೋಗಲು ಅಧೈರ್ಯವುಂಟಾಗುವುದು. ಗುರುವಿನ ಸ್ತೋತ್ರ ಪಠಿಸುವುದರಿಂದ ಇಚ್ಛಿತ ಕಾರ್ಯಗಳು ನಡೆಯುವವು.

ವೃಶ್ಚಿಕ

08-Vrishika

ನೌಕರಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ. ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭಾಂಶ ಕಂಡು ಬರುವುದು. ಉತ್ತಮ ಆರೋಗ್ಯ. ಮಹತ್ತರ ಕಾರ್ಯ ಚಾಲನೆಗೆ ಗುರುವಿನ ಶುಭಯೋಗವಿರುವುದು.

ಧನು

09-Dhanussu

ಕೌಟುಂಬಕವಾಗಿ ಉತ್ತಮ ಜೀವನ ನಡೆಸುವಿರಿ. ಕಚೇರಿಯಲ್ಲಿ ಬಿಕ್ಕಟ್ಟು ನಿವಾರಣೆಯಾಗಲಿದೆ. ಹಿತ ಚಿಂತಕರೊಡನೆ ಆಪ್ತ ಸಮಾಲೋಚನೆ ನಡೆಸುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಚೇತರಿಕೆ ಕಂಡುಬರುವುದು.

ಮಕರ

10-Makara

ಗುರಿ ಸಾಧಿಸುವುದರಲ್ಲಿ ಸಫಲರಾಗುತ್ತೀರಿ. ಸಂಗಾತಿಯ ಕೆಲವು ತಪ್ಪುಗಳನ್ನು ಕ್ಷ ಮಿಸಿಬಿಡಿ. ಗೆಳೆಯರ ಜತೆ ವಿನೋದವಾಗಿ ಕಾಲ ಕಳೆಯುವಿರಿ. ಹಣಕಾಸು ವಿಷಯದಲ್ಲಿ ತೊಂದರೆ ಇರುವುದಿಲ್ಲ.

ಕುಂಭ

11-Kumbha

ಗುರುವಿನ ಬಲ ಕಡಿಮೆ ಇರುವುದರಿಂದ ಮಹತ್ತರ ಕೆಲಸಗಳನ್ನು ಮುಂದೂಡುವುದು ಒಳಿತು. ಸಮಾಜ ಬಾಂಧವರಿಂದ ಟೀಕೆ ಟಿಪ್ಪಣಿಗಳು ಎದುರಾಗುವ ಸಾಧ್ಯತೆ ಇದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಮೀನ

12-Meena

ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಬರಹಗಾರರಿಗೆ ಸೂಕ್ತ ಸಂಭಾವನೆ ಕೈಸೇರುವುದು. ಸ್ನೇಹಿತರು ನಿಮ್ಮನ್ನು ಕೊಂಡಾಡುವರು. ಆರೋಗ್ಯದ ಕಡೆ ಕೊಂಚ ಗಮನ ಹರಿಸುವುದು ಒಳ್ಳೆಯದು.