ನಿತ್ಯ ಭವಿಷ್ಯ ಆಗಸ್ಟ್ 28, 2017 (ಸೋಮವಾರ)

0
833

ಆಗಸ್ಟ್ 28, 2017 (ಸೋಮವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ವಿಶಾಖ ನಕ್ಷತ್ರ,

ಮೇಷ

01-Mesha

ಸರಿಯಾದ ನಿರ್ಣಯದಿಂದ ಮಾತ್ರ ಬದುಕು ತಹಬಂದಿಗೆ ಬರಲು ಸಾಧ್ಯ. ಇಲ್ಲವಾದಲ್ಲಿ ಭವಿಷ್ಯದ ಚಿಂತೆ ವರ್ತಮಾನವನ್ನು ಹಾಳು ಮಾಡುವುದು. ಯಾರದೋ ಪಿತೂರಿಯಿಂದಾಗಿ ಮೇಲಧಿಕಾರಿಗಳ ಕೋಪಕ್ಕೆ ಒಳಗಾಗಬೇಕಾಗುವುದು.

ವೃಷಭ

02-Vrishabha

ವಾರಾಂತ್ಯದ ದಿನವಾದ ಇಂದು ಕೆಲವು ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳೊಂದಿಗೆ ಪ್ರವಾಸ ಹೋಗುವ ಚಿಂತನೆ ನಡೆಸುವಿರಿ. ಇದರಿಂದ ಮಾನಸಿಕ ಕ್ಷೋಭೆ ಕಡಿಮೆ ಆಗುವುದು.

ಮಿಥುನ

03-Mithuna

ಬಹುದಿನದ ಕನಸೊಂದು ಸಾಕಾರವಾಗುವ ಸಮಯ. ವೃತ್ತಿಯಲ್ಲಿ ವಿಶೇಷ ಗೌರವ ಪ್ರಾಪ್ತಿ. ಗಣ್ಯರ ಒಡನಾಟದಿಂದ ಹರ್ಷ ಉಂಟಾಗುವುದು. ತಾಯಿಯವರ ಆರೋಗ್ಯದ ಕಡೆ ಗಮನ ಹರಿಸಿರಿ. ಸ್ಥಿರಾಸ್ತಿ ಖರೀದಿಯ ಚಿಂತೆ ಬೇಡ.

ಕಟಕ

04-Kataka

ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಿರಿ. ಈ ದಿನ ಮಿಶ್ರಫಲವನ್ನು ಅನುಭವಿಸುವಿರಿ. ಈ ದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸುವಿರಿ.

ಸಿಂಹ

05-Simha

ಹಿಡಿದ ಕೆಲಸವನ್ನು ಬೇಗನೆ ಮುಗಿಸುವಿರಿ. ಧನಕಾರಕ ಗುರುವು ನಿಮಗೆ ಒಳ್ಳೆಯದನ್ನೆ ಮಾಡುವರು. ಕೌಟುಂಬಿಕವಾಗಿ ಮತ್ತು ಆರ್ಥಿಕವಾಗಿ ಸದೃಢಗೊಳ್ಳುವಿರಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.

ಕನ್ಯಾ

06-Kanya

ಅತಿಯಾದ ಆತ್ಮವಿಶ್ವಾಸ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಯನ್ನುಂಟು ಮಾಡುವುದು. ವ್ಯವಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿರ್ಧಾರ ತಳೆಯಿರಿ. ಗುರುಹಿರಿಯರ ಆಶೀರ್ವಾದದಿಂದ ಈ ದಿನ ಶುಭವನ್ನು ಕಾಣುವಿರಿ.

ತುಲಾ

07-Tula

ಕಾಲಲ್ಲಿ ಹೊಕ್ಕ ಮುಳ್ಳನ್ನು ಅರ್ಧ ತೆಗೆದರೆ ನೋವು ಕಡಿಮೆ ಆಗುವುದಿಲ್ಲ. ಅಂತೆಯೇ ಹಿಡಿದ ಕೆಲಸವನ್ನು ಪೂರ್ಣಗೊಳಿಸಿದಾಗ ಮಾತ್ರ ನಿಮ್ಮ ವಿದ್ವತ್ತಿಗೆ ಬೆಲೆ ಬರುವುದು. ಕೆಲವು ಮಹತ್ತರ ಕೆಲಸಗಳಿಂದ ವಿಮುಖರಾಗದಿರಿ.

ವೃಶ್ಚಿಕ

08-Vrishika

ನಿಮ್ಮ ಸುತ್ತಮುತ್ತ ಇರುವವರ ಬಗ್ಗೆ ಕೊಂಚ ಗಮನವಿರಲಿ. ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ. ಜನ್ಮಶನಿಯ ತೊಂದರೆ ನಿವಾರಣೆಗಾಗಿ ಈದಿನ ಭಿಕ್ಷ ುಕರಿಗೆ ಆಹಾರ ನೀಡಿರಿ.

ಧನು

09-Dhanussu

ಮನೆಯ ಹಿರಿಯರ ಅನಾರೋಗ್ಯ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ. ಕೌಟುಂಬಿಕ ಜೀವನ ಉತ್ತಮ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಹಳೆಯ ಸಂಬಂಧಗಳು ಪುನಃ ಸೇರ್ಪಡೆ ಆಗುವ ಸಾಧ್ಯತೆ ಇರುವುದು.

ಮಕರ

10-Makara

ಸರಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ಸಕಾಲದಲ್ಲಿ ಬರುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ಸು ಕಾಣುವರು. ಅಡ್ಡಾದಿಡ್ಡಿಯಾಗಿದ್ದ ಕೆಲಸವು ಈ ದಿನ ಒಂದು ಸರಿದಾರಿಗೆ ಬರುವುದು.

ಕುಂಭ

11-Kumbha

ಅತಿಯಾದ ಸಂಕೋಚದ ಸ್ವಭಾವದಿಂದಾಗಿ ಕೆಲಸ ಕಾರ್ಯಗಳಲ್ಲಿ ಭಾರಿ ಹಿನ್ನಡೆ ಆಗುವುದು. ಪಾಲುದಾರರಿಂದಲೇ ಮೋಸ ಹೋಗುವ ಸಾಧ್ಯತೆಯಿದೆ. ಹಣಕಾಸಿನ ವಿಷಯದಲ್ಲಿ ಬಿಗಿಹಿಡಿತ ಇರಲಿ. ಸಣ್ಣಪುಟ್ಟ ಅನಾರೋಗ್ಯವನ್ನು ಅಲಕ್ಷ ಮಾಡದಿರಿ.

ಮೀನ

12-Meena

ಹೊಸ ಉತ್ಸಾಹದಿಂದ ಈ ದಿನ ಕೆಲಸ ಕಾರ್ಯಗಳನ್ನು ಮಾಡುವಿರಿ. ಮತ್ತು ಅದರಲ್ಲಿ ಯಶಸ್ಸನ್ನು ಹೊಂದುವಿರಿ. ಸಪ್ತಮ ಸ್ಥಾನದ ಗುರುವು ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಮತ್ತು ತೃಪ್ತಿಯನ್ನು ತಂದು ಕೊಡುವನು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.