ನಿತ್ಯ ಭವಿಷ್ಯ ಆಗಸ್ಟ್ 29, 2017 (ಮಂಗಳವಾರ)

0
511

ಆಗಸ್ಟ್ 29, 2017 (ಮಂಗಳವಾರ)
ಪಂಚಾಂಗ: ಹೇವಿಳಂಬಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ,
ವರ್ಷಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಅನೂರಾಧ ನಕ್ಷತ್ರ,

ಮೇಷ

01-Mesha

ನಿಮ್ಮ ಗ್ರಹಗತಿಗಳ ಬಗ್ಗೆ ಯೋಚಿಸದೇ ನಿಮ್ಮ ಮನೆತನದ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿರಿ. ಜೀವನಾಧಾರಕ್ಕೆ ತೊಂದರೆ ಇರುವುದಿಲ್ಲ. ಹಣಕಾಸಿನ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿರುವುದಿಲ್ಲ.

ವೃಷಭ

02-Vrishabha

ಮಕ್ಕಳ ವಿಷಯದಲ್ಲಿ ದೊಡ್ಡವರ ಮಧ್ಯೆ ಜಗಳ ಮನಸ್ತಾಪಗಳು ಬರುವ ಸಾಧ್ಯತೆ ಇದೆ. ಮಧ್ಯವರ್ತಿಗಳ ಸಹಾಯದಿಂದ ಮನಸ್ತಾಪಗಳು ಶಮನಗೊಳ್ಳುವುದು. ಈ ಒಂದು ಸನ್ನಿವೇಶ ಉಭಯರಿಗೂ ಪಾಠ ಕಲಿಸುವುದು.

ಮಿಥುನ

03-Mithuna

ಪೂಜೆ ಪುನಸ್ಕಾರಗಳಿಂದ ಮನೆಯ ಹಿರಿಯರನ್ನು ಗೌರವಿಸುವುದನ್ನು ಕಲಿಯಿರಿ. ನಿಮ್ಮ ಬಹುತೇಕ ಸಮಸ್ಯೆಗಳು ಇದರಿಂದ ಪರಿಹಾರವಾಗುವುದು. ಮತ್ತು ಕೆಲಸ ಕಾರ್ಯಗಳಲ್ಲಿ ಹೊಸ ಹುಮ್ಮಸ್ಸು ಮೂಡುವುದು.

ಕಟಕ

04-Kataka

ಗೃಹಿಣಿಯರಿಗೆ ತವರಿನಿಂದ ಬರುವ ಸುದ್ದಿಯು ಖುಷಿ ತರಲಿದೆ. ಕೆಲವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಚ್ಚಿನ ಭಾಗ ಬರುವ ಸಾಧ್ಯತೆ ಇರುವುದು. ಮನೆ ದೇವರನ್ನು ಮನಸಾ ಸ್ಮರಿಸಿರಿ. ಆತನ ಕರುಣೆ ನಿರಂತರವಾಗಿ ನಿಮ್ಮ ಮೇಲಿರುವುದು.

ಸಿಂಹ

05-Simha

ನಿಮ್ಮ ನೇರವಾದ ನುಡಿಗಳು ಪರರಿಗೆ ಹಿಂಸೆಯನ್ನು ಉಂಟು ಮಾಡುವುದು. ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಮಾತಿನ ವರಸೆಯಲ್ಲಿ ಬದಲಾವಣೆ ಮಾಡಿಕೊಳ್ಳಿರಿ. ಇದರಿಂದ ಸಮಾಜದಲ್ಲಿ ಗೌರವ ಮೂಡುವುದು.

ಕನ್ಯಾ

06-Kanya

ನಿಮ್ಮ ಊರಿನ ವಿಶ್ವಾಸಿಗಳು ನಿಮ್ಮನ್ನು ಕಾಣುವ ಆತುರ ತೋರುವರು. ಅದಕ್ಕೆ ಕಾರಣ ನಿಮಗೆ ಇತ್ತೀಚೆಗೆ ಲಭಿಸಿದ ಪ್ರಶಸ್ತಿಯು ಕಾರಣವಾಗಿರುವುದು. ಬಂದವರೊಂದಿಗೆ ಕೆಲಕಾಲ ಉಭಯ ಕುಶಲೋಪರಿ ಮಾತುಕತೆ ನಡೆಸಿರಿ.

ತುಲಾ

07-Tula

ನಿಮ್ಮ ಸುಖವಾದ ನಿದ್ದೆಗೆ ಸಂಚಕಾರ ಬರಲಿದೆ. ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಚಿಂತಾಕ್ರಾಂತರನ್ನಾಗಿ ಮಾಡುವದು ಮೇಲಾಗಿ ಹಣದ ಮುಗ್ಗಟ್ಟು ನಿಮ್ಮನ್ನು ಹೈರಾಣ ಮಾಡುವುದು. ಆರೋಗ್ಯದ ಕಡೆ ಗಮನ ಕೊಡಿ.

ವೃಶ್ಚಿಕ

08-Vrishika

ಇಂದಿನ ನಿಮ್ಮ ಪ್ರಯಾಣ ಸುಖಕರವಾಗಲಿದೆ. ಮಹತ್ತರ ತೀರ್ಮಾನವೊಂದು ಈ ದಿನ ಆಗುವುದರಿಂದ ನಿಮ್ಮ ವ್ಯಾಪಾರ-ವ್ಯವಹಾರಕ್ಕೆ ಪೂರಕವಾಗುವುದು. ಸ್ನೇಹಿತರು ಬಂಧುಗಳು ಹಣಕಾಸಿನ ನೆರವು ನೀಡುವರು.

ಧನು

09-Dhanussu

ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಎಂದಿಗಿಂತ ತುಸು ಮುತುವರ್ಜಿ ವಹಿಸಿದಲ್ಲಿ ಹೇರಳ ಧನ ಸಂಪಾದನೆ ಮಾಡುವಿರಿ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಗಳು ಸಕಾಲದಲ್ಲಿ ಪಾವತಿಸಿ ದಂಡ ಹಾಕುವುದರಿಂದ ತಪ್ಪಿಸಿಕೊಳ್ಳುವಿರಿ.

ಮಕರ

10-Makara

ನಾಡು-ನುಡಿಗಾಗಿ ಹೋರಾಟ ಮಾಡುವ ಮನೋಭೂಮಿಕೆಯಲ್ಲಿರುವ ನಿಮಗೆ ಗುರುಗ್ರಹವು ಬೆಂಗಾವಲಿಗೆ ನಿಲ್ಲುವುದು. ಇದರಿಂದ ಸಾಮಾಜಿಕ ಮತ್ತು ರಾಜಕೀಯವಾಗಿ ಗುರುತಿಸಿಕೊಳ್ಳುವಿರಿ.

ಕುಂಭ

11-Kumbha

ಮನೆಯಲ್ಲಿನ ಹಿರಿಯರು ಮಕ್ಕಳ ವಿಷಯದಲ್ಲಿ ಸ್ವಲ್ಪ ಗೊಂದಲದಲ್ಲಿ ಬೀಳುವರು. ಮಕ್ಕಳನ್ನು ದಂಡಿಸುವಂತಿಲ್ಲ. ದಂಡಿಸದೆ ಅವರು ಸರಿದಾರಿಗೆ ಬರುವುದಿಲ್ಲ. ಇಂತಹ ಸೂಕ್ಷ ್ಮ ವಿಷಯಗಳನ್ನು ಬಗೆಹರಿಸುವಲ್ಲಿ ಬಹಳ ತಾಳ್ಮೆ ಬೇಕಾಗುವುದು.

ಮೀನ

12-Meena

ಗುರುವಿನ ಬಲವಿದೆ. ಆದರೆ ಮನೆಯ ಹಿರಿಯರ ಆರೈಕೆಯಲ್ಲಿಯೇ ಸಮಯ ಹೋಗುವುದರಿಂದ ಈ ದಿನ ನಿಮ್ಮ ಬಗ್ಗೆ ಗಮನಹರಿಸಲು ಆಗುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು. ಹಿರಿಯರ ಸೇವೆಯಿಂದ ಲಾಭವಾಗುವುದು.