ದಿನ ಭವಿಷ್ಯ : ಡಿಸೆಂಬರ್ 9, 2017

0
934

ಮೇಷ:-
ಉದ್ಯೋಗದಲ್ಲಿ ಪ್ರಗತಿ, ಆರ್ಥಿಕ ವಿಷಯದಲ್ಲಿ ಹೆಚ್ಚಳ ಕಂಡುಬರುವುದು. ಅಲ್ಪಪ್ರವಾಸ ಯೋಗ. ಮಂಗಳ ಕಾರ್ಯದಲ್ಲಿ ಭಾಗವಹಿಸುವಿರಿ. ಕೌಟುಂಬಿಕ ಜೀವನದಲ್ಲಿ ಭಾಗ್ಯೋದಯ. ಸಮಾಜದಲ್ಲಿ ಕೀರ್ತಿ ಪ್ರತಿಷ್ಟೆ ಹೆಚ್ಚಾಗುವುದು.

ವೃಷಭ:-
ಸಣ್ಣ-ಸಣ್ಣ ವಿಷಯಗಳನ್ನು ಅತಿಯಾಗಿ ಚಿಂತಿಸುವುದನ್ನು ಬಿಡಿ. ಯಾವುದಾದರೂ ಸಂಘ-ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿರಿ. ಮನಸ್ಸಿನಲ್ಲಿದ್ದ ತಪ್ಪು ಕಲ್ಪನೆಗಳು ಮಾಯವಾಗುವುದು. ಜೀವನದಲ್ಲಿ ನವೋಲ್ಲಾಸ ತುಂಬುವುದು.

ಮಿಥುನ:-
ಬಂಧು-ಬಾಂಧವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವಿರಿ. ಪರ ಊರಿನಿಂದ ಬರುವ ವಾರ್ತೆಯು ನಿಮಗೆ ಹರ್ಷವನ್ನುಂಟು ಮಾಡುವುದು. ವ್ಯವಹಾರದಲ್ಲಿ ಕೌಶಲ್ಯ ತೋರುವಿರಿ. ಬರವಣಿಗೆಯ ಮೂಲಕ ಹಣವನ್ನು ಸಂಪಾದಿಸುವಿರಿ.

ಕಟಕ:-
ಧನಕಾರಕ ಗುರುವಿನ ಸಂಚಾರದಿಂದ ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ ಮಾನಸಿಕ ನೆಮ್ಮದಿ ಇರುವುದಿಲ್ಲ. ಕುಟುಂಬದ ಸದಸ್ಯರ ನಡವಳಿಕೆಯು ನಿಮ್ಮನ್ನು ಚಿಂತಾಕ್ರಾಂತರನ್ನಾಗಿ ಮಾಡುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ.

ಸಿಂಹ:-
ವಿದ್ವಾಂಸರ ಹಾಗೂ ಗುಣಶಾಲಿಗಳ ಪರಿಚಯವಾಗುವುದು. ಇದರಿಂದ ನಿಮ್ಮ ಸಾಮಾಜಿಕ ಗೌರವವು ಹೆಚ್ಚಾಗುವುದು. ಮಾತುಗಾರಿಕೆಯ ಪ್ರಭಾವದಿಂದ ಸುತ್ತಲಿನ ಜನರನ್ನು ಆಕರ್ಷಿಸುವಿರಿ. ಸಂತತಿ ಹಾಗೂ ಕೌಟುಂಬಿಕ ಸೌಖ್ಯ ದೊರೆಯುವುದು.

ಕನ್ಯಾ:-
ಧನಧಾನ್ಯ ವೃದ್ಧಿಯು. ಈ ಹಿಂದೆ ಮಾಡಿದ ಯೋಜನೆಗಳು ಕಾರ್ಯರೂಪಕ್ಕೆ ಬರುವುದು. ವಾಹನ ಸೌಖ್ಯ, ಉದ್ಯೋಗದಲ್ಲಿ ಉತ್ಕರ್ಷ. ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ಆರೋಗ್ಯ ಉತ್ತಮ. ಗುರುಹಿರಿಯರ ಮಾರ್ಗದರ್ಶನ ಪಡೆಯಿರಿ.

ತುಲಾ:-
ಬಂಧು-ಭಗಿನಿಯರ ಸೌಖ್ಯ ಭಾಗ್ಯವೃದ್ಧಿ. ಸಂಗಡಿಗರ ಸಹಕಾರ. ಪ್ರತಿಷ್ಟೆ ಹೆಚ್ಚಾಗುವುದು. ಯಾವುದೇ ಕೆಲಸದಲ್ಲಿ ಯಶಸ್ಸು ದ್ರವ್ಯಲಾಭ. ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಬರುವುದು. ಸಂಗಾತಿಯು ಪ್ರಸನ್ನವದನಳಾಗುವಳು.

ವೃಶ್ಚಿಕ:-
ಈದಿನ ಮಿಶ್ರಫಲವನ್ನು ಕಾಣುವಿರಿ. ಕೆಲವರಿಗೆ ಸ್ಥಾನಪಲ್ಲಟಯೋಗ. ಕೆಲವರಿಗೆ ಅನಾರೋಗ್ಯ ನಿಮಿತ್ತ ಆಸ್ಪತ್ರೆ ಖರ್ಚು ಬರುವುದು. ಪ್ರಯಾಣದಲ್ಲಿ ಎಚ್ಚರ. ಹಣಕಾಸಿನ ವಿಷಯದಲ್ಲಿ ಜಾಗೃತರಾಗಿರಬೇಕು.

ಧನಸ್ಸು:-
ಗ್ರಹಗಳು ಉತ್ತಮ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನೀವು ಕೈಹಿಡಿದ ಕಾರ್ಯಗಳನ್ನು ಈ ದಿನ ಬೇಗನೆ ಮುಗಿಸುವಿರಿ. ಆಸ್ತಿ ನೋಂದಾವಣೆ ಅಥವಾ ನೂತನ ವಾಹನ ಖರೀದಿಗೆ ಸಕಾಲವಾಗಿದ್ದು, ಮಹತ್ತರ ಕಾರ್ಯಗಳನ್ನು ಪೂರೈಸಿಕೊಳ್ಳುವಿರಿ.

ಮಕರ:-
ಕೋರ್ಟು ಕಚೇರಿಯ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ತೋರುವುದು. ಮಾನಸಿಕ ಚಿಂತನೆ. ವ್ಯಾಪಾರ-ಉದ್ಯೋಗದಲ್ಲಿ ಹಿನ್ನಡೆ. ಆಂಜನೇಯ ಸ್ತೋತ್ರ ಪಠಿಸಿರಿ. ದೀನದಲಿತರಿಗೆ ಈ ದಿನ ಊಟಕ್ಕೆ ಧನ ಸಹಾಯ ಮಾಡಿರಿ.

ಕುಂಭ:-
ಅನೇಕ ಮೂಲಗಳಿಂದ ದ್ರವ್ಯಸಂಚಯ. ವಾದಸ್ಪರ್ಧೆಯಲ್ಲಿ ಯಶಸ್ಸು. ವ್ಯವಸಾಯದಲ್ಲಿ ಅನುಕೂಲ. ಮಾತುಗಾರಿಕೆ ಪ್ರಭಾವದಿಂದ ಸಮಾಜದಲ್ಲಿ ಶ್ರೇಷ್ಠತೆ. ಮಿತ್ರಲಾಭ. ವಾಹನಸೌಖ್ಯ. ಗುರುಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರುವುದು

ಮೀನ:-
ಮಂಗಳಕಾರ್ಯದಲ್ಲಿ ಭಾಗವಹಿಸುವಿರಿ. ನಿಮ್ಮ ಹಿತಚಿಂತಕರು ನಿಮ್ಮನ್ನು ಆದರಿಸಿ ಗೌರವಿಸುವರು. ಆದಾಗ್ಯೂ ಮನಸ್ಸಿನ ದುಃಖವನ್ನು ಅವರು ಹಂಚಿಕೊಳ್ಳುವುದು ಕಷ್ಟ. ನಿಮಗೆ ನೀವೇ ಸಾಂತ್ವನ ಮಾಡಿಕೊಳ್ಳುವುದು ಒಳ್ಳೆಯದು. ಕಾಲವು ಎಲ್ಲವನ್ನು ಮರೆಸುವುದು.