ನಿತ್ಯ ಭವಿಷ್ಯ: ಡಿಸೆಂಬರ್‌ 17, 2017

0
12878

ಮೇಷ:


ಆಶಾವಾದವು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತದೆ. ಮಿತ್ರರು ಬೆಂಬಲ ನೀಡುವರು. ಈ ದಿನ ಶುಭವಾರ್ತೆಯನ್ನು ಕೇಳುವಿರಿ. ಬಂಧು ಭಗಿನಿಯರ ಸೌಖ್ಯ, ಭಾಗ್ಯವೃದ್ಧಿ. ಆಂಜನೇಯ ಸ್ತೋತ್ರ ಪಠಿಸಿರಿ.

ವೃಷಭ:


ನಿವೇಶನ ಖರೀದಿಯ ಪ್ರಸ್ತಾಪ ಒಂದು ಹಂತಕ್ಕೆ ಬರುವುದು. ಜಾಗ್ರತೆಯಿಂದ ವ್ಯವಹರಿಸಿರಿ. ಹಣಕಾಸು ವಿವಿಧ ರೀತಿಯಲ್ಲಿ ಒದಗಿ ಬರುವುದು. ಉದ್ಯೋಗದಲ್ಲಿ ಉತ್ಕರ್ಷ, ವೈಭವ ಕಾಲ. ಕೌಟುಂಬಿಕವಾಗಿ ನೆಮ್ಮದಿಯ ದಿನ.

ಮಿಥುನ:


ಬೌದ್ಧಿಕ ವ್ಯವಹಾರದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಪುತ್ರ ಸೌಖ್ಯ, ಹರ್ಷದಾಯಕ ವಾರ್ತೆ ಕೇಳುವಿರಿ. ದೂರ ಪ್ರವಾಸ ಹೋಗುವಿರಿ. ವ್ಯವಹಾರ ಕೌಶಲ್ಯದಿಂದ ದ್ರವ್ಯ ಸಂಚಯ. ಕೌಟುಂಬಿಕ ಜೀವನ ಮಧುರವಾಗಿರುತ್ತದೆ.

ಕಟಕ:


ಕೋರ್ಟು ಕಚೇರಿಯ ಕಾರ್ಯಗಳು ಮುಂದೂಡಲ್ಪಡುವುದು. ಮಾನಸಿಕ ಶಾಂತಿಗಾಗಿ ಶಿವಪಂಚಾಕ್ಷ ರಿ ಮಂತ್ರವನ್ನು ಪಠಿಸಿರಿ. ವ್ಯಾಪಾರ-ಉದ್ಯೋಗದಲ್ಲಿ ತುಸು ಹಿನ್ನಡೆ ಸಂಭವ. ವಾದ-ವಿವಾದಗಳಿಂದ ದೂರವಿರಿ.

ಸಿಂಹ:


ಉದ್ಯೋಗದಲ್ಲಿ ಸ್ಥಿರತೆ, ಕುಟುಂಬದ ವಾತಾವರಣವು ಚೇತೋಹಾರಿಯಾಗಿರುತ್ತದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಶುಭ ಸುದ್ದಿಯನ್ನು ಕೇಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಮನ್ನಣೆ ಆಗುವುದು.

ಕನ್ಯಾ:


ಧನಾತ್ಮಕ ಚಿಂತನೆಯಿಂದ ಕಾರ್ಯಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ವಿರೋಧಿಗಳಿಗೆ ಮುಖಭಂಗವಾಗುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ತೊಂದರೆಯನ್ನು ಎದುರಿಸಬೇಕಾಗುವುದು. ಮನೆ ವೈದ್ಯರ ಸಲಹೆ ಪಡೆಯಿರಿ.

ತುಲಾ:


ಸೌಂದರ್ಯವರ್ಧಕ ವಸ್ತುಗಳ ಖರೀದಿ. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮನ್ನಣೆ ಸಿಗುವುದು. ಬರಹಗಾರರಿಗೆ ಉತ್ತಮ ಸಂಭಾವನೆ, ಗೌರವ ದೊರೆಯುವುದು. ಸಜ್ಜನ ಬಂಧುಪ್ರೇಮ, ಯೋಜಿತ ಕಾರ್ಯಗಳು ತೃಪ್ತಿ ನೀಡುವುದು.

ವೃಶ್ಚಿಕ:


ವಿದ್ವಾನ್‌ ಮತ್ತು ಗುಣೀ ಜನರ ಪರಿಚಯವಾಗುವುದು. ಉದ್ಯೋಗ ದಂಧೆ ನೌಕರಿಯಲ್ಲಿ ಲಾಭ. ಲೇಖನಿ ವ್ಯವಸಾಯದಲ್ಲಿ ಯಶಸ್ಸು. ಮಾತುಗಾರಿಕೆಯ ಪ್ರಭಾವದಿಂದ ಸಮಾಜದಲ್ಲಿ ಮಾನಸನ್ಮಾನಗಳು ಅಧಿಕಾರ ಪ್ರಾಪ್ತಿಯು ಉಂಟಾಗುವುದು.

ಧನಸ್ಸು:


ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು. ಮಿತ್ರರ ಸಹಕಾರವು ದೊರೆಯಲಿದೆ. ವ್ಯವಹಾರವು ಸುಲಲಿತವಾಗಿ ನಡೆಯುವುದು. ಪರಾವಲಂಬನ ಜೀವನ ಒಳ್ಳೆಯದಲ್ಲ. ಗುರುವಿನ ಅನುಗ್ರಹ ಪಡೆಯಿರಿ.

ಮಕರ:


ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬರ ಸಹಕಾರ ದೊರೆಯಲಿದೆ. ಮಡದಿಯೊಂದಿಗಿನ ಬಾಂಧವ್ಯ ಮಧುರವಾಗಿರುವಂತೆ ನೋಡಿಕೊಳ್ಳಿರಿ. ಹಿತೈಷಿಗಳ ಶ್ರೇಯಸ್ಸಿಗೆ ಶಕ್ತಿ ಮೀರಿ ಪ್ರಯತ್ನಿಸುವಿರಿ.

ಕುಂಭ:


ನಿಮ್ಮ ವೃತ್ತಿ ಹಾಗೂ ವ್ಯಾಪಾರದಲ್ಲಿ ತೊಡಕು ಸಹಜವಾಗಿದ್ದರೂ ಅದರಿಂದ ಹೆಚ್ಚಿನ ಹಾನಿ ಇಲ್ಲ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಹಕಾರವಿರುತ್ತದೆ. ಅವಸರವು ಕೆಲಸವನ್ನು ಕೆಡಿಸಿದರೆ ಸಂಯಮವು ಕಾರ್ಯದಲ್ಲಿ ಯಶಸ್ಸು ನೀಡುತ್ತದೆ.

ಮೀನ:


ಆಗಿ ಹೋದ ಕಹಿ ಘಟನೆಗಳನ್ನು ಮೆಲುಕು ಹಾಕುವುದರಲ್ಲಿ ಅರ್ಥವಿಲ್ಲ. ಗುರುವಿನ ಬೆಂಬಲವಿರುವುದರಿಂದ ಸಕಾರಾತ್ಮಕವಾಗಿ ಚಿಂತಿಸಿ ಯಶಸ್ಸನ್ನು ಹೊಂದಿರಿ. ಕೌಟುಂಬಿಕ ವಿಷಯಗಳನ್ನು ಅತಿರೇಕಕ್ಕೆ ಒಯ್ಯುವುದು ಒಳ್ಳೆಯದಲ್ಲ.