ನಿತ್ಯ ಭವಿಷ್ಯ: 22 ಡಿಸೆಂಬರ್‌ 2017

0
1288
ದಿನ ಭವಿಷ್ಯ

ಮೇಷ:


ವೈಯಕ್ತಿಕ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಂಭವವಿದ್ದು, ಜಾಗೃತೆ ಇರಲಿ, ದೇವತಾ ಕಾರ್ಯಗಳಿಗಾಗಿ ದೂರ ಸಂಚಾರ ಸಂಭವ.

ವೃಷಭ:


ಹಲವು ರೀತಿಯಿಂದ ಧನಾಗಮವಾಗುವುದರಿಂದ ಗೃಹದಲ್ಲಿ ಶಾಂತಿಗೆ ತೊಂದರೆಯಾಗುವ ಸಂಭವ, ದಾಯಾದಿಗಳ ಕಾಟದಿಂದ ಸ್ವಲ್ಪ ಕಿರಿಕಿರಿ.

ಮಿಥುನ :


ವಿದ್ಯಾರ್ಥಿಗಳಿಗೆ ಸಂತಸದ ಯೋಗ, ಹಿರಿಯರ ಆರೋಗ್ಯ ಸುಧಾರಣೆಯಿಂದ ಸಮಾಧಾನ, ಕುಲದೇವತಾದರ್ಶನ ಭಾಗ್ಯ.

ಕರ್ಕ:


ವೃತ್ತಿ ರಂಗದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕಾರ್ಯ ಸಾಧನೆ, ಬಂಧುಗಳಲ್ಲಿ ಅನಾರೋಗ್ಯದಿಂದ ಓಡಾಟ ಹೆಚ್ಚಳ, ಆಯಾಸ.

ಸಿಂಹ:


ಸಣ್ಣಪುಟ್ಟ ಸಾಲ ತೀರಿಸುವಿಕೆಯಿಂದ ಮನಸ್ಥಿತಿ ಸ್ವಲ್ಪ ನೆಮ್ಮದಿ, ಪ್ರೀತಿ ಪಾತ್ರರ ಭೇಟಿ, ಶತ್ರುಗಳಿಗೆ ಹಿನ್ನಡೆ, ಕುಟುಂಬ ಸೌಖ್ಯ.

ಕನ್ಯಾ:


ಹೊಸ ರೀತಿಯ ಖರ್ಚು ವೆಚ್ಚಗಳು, ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡುವುದು, ಮನೆಯಲ್ಲಿನ ಮಂಗಲ ಕಾರ್ಯಗಳಿಗೆ ಪ್ರಶಂಸೆ,

ತುಲಾ:


ಸ್ವಾಭಿಮಾನಕ್ಕೆ ಅಡ್ಡಿಯಾಗುವ ಪ್ರಸಂಗವಿದ್ದು,ದೇವತಾರಾಧನೆಯಿಂದ ಉಪಶಮನ, ಮಿತ್ರ ವರ್ಗದವರ ಸಹಕಾರದಿಂದ ಕಾರ್ಯಸಿದ್ಧಿ.

ವೃಶ್ಚಿಕ :


ಅನಿರೀಕ್ಷಿತ ರೀತಿಯಲ್ಲಿ ಅವಿವಾಹಿತರಿಗೆ ವಿವಾಹ ಯೋಗ, ಸಾಂಸಾರಿಕವಾಗಿ ಆಸ್ಪತ್ರೆ ದರ್ಶನ. ಆರ್ಥಿಕ ಕ್ಷೇತ್ರದಲ್ಲಿ ಉತ್ತಮ.

ಧನು:


ಗೃಹ ಬಳಕೆಗಾಗಿ ಖರೀದಿಸುವ ವಸ್ತುಗಳಿಗಾಗಿ ಅಧಿಕ ಖರ್ಚು, ಆಕಸ್ಮಿಕ ಮಿತ್ರರ ಸಮಾಗಮ, ಆರೋಗ್ಯದಲ್ಲಿ ನಿಧಾನ ಸುಧಾರಣೆ.

ಮಕರ:


ವೃತ್ತಿ ರಂಗದಲ್ಲಿ ದಿನಗಳು ಸರಾಗವಾಗಿ ನಡೆದು ಹೋದರೂ ತಪ್ಪದ ಕಿರಿಕಿರಿ, ಆರ್ಥಿಕ ವ್ಯವಹಾರದಲ್ಲಿ ಅಡಚಣೆ, ಜಾಗೃತಿಯಿಂದ ನೆಮ್ಮದಿ.

ಕುಂಭ:


ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿದ್ದರೂ ಅವಕಾಶಗಳಿಗಾಗಿ ಒದ್ದಾಟ, ಹಿರಿಯರೊಂದಿಗಿನ ಹೊಂದಾಣಿಕೆಯಿಂದ ಮಾರ್ಗದರ್ಶನ ಲಾಭ.

ಮೀನ:


ಮಕ್ಕಳಿಂದ ಪ್ರವಾಸಯೋಗ, ಸಾಮಾಜಿಕ ಕಾರ್ಯಗಳಲ್ಲಿ ಪ್ರಶಂಸೆ ದೊರೆತು ಸಂತಸ. ಶುಭ ಕಾರ್ಯಗಳಿಗಾಗಿ ಹಿರಿಯರಿಂದ ಚಿಂತನೆ.