ನಿತ್ಯ ಭವಿಷ್ಯ: ಫೆಬ್ರವರಿ 3, 2018

0
996
ದಿನ ಭವಿಷ್ಯ

ಮೇಷ:

ಆರ್ಥಿಕ ವಿಷಯದಲ್ಲಿ ಹೆಚ್ಚಿನ ಲಾಭ. ಕುಟುಂಬದಲ್ಲಿ ನೆಮ್ಮದಿ. ಶುಭ ಕಾರ್ಯಗಳು ನಡೆಯಲಿದ್ದು, ಸಂತಸ ಮೂಡಲಿದೆ.

ವೃಷಭ:

ಯೋಚಿಸಿ ನಿರ್ಧಾರ ಕೈಗೊಳ್ಳಿ. ನಿಮ್ಮ ಪ್ರಯತ್ನಕ್ಕೆ ಎಲ್ಲಾ ಕಡೆಯಿಂದ ಬೆಂಬಲ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಉತ್ತಮ.

ಮಿಥುನ:

ಬದುಕಿನಲ್ಲಿ ಗೆಲುವು ನಿಮ್ಮದಾಗುವುದು. ಪೂಜೆ- ಪುನಸ್ಕಾರಗಳಲ್ಲಿ ಭಾಗವಹಿಸುವಿರಿ. ಮಾನಸಿಕ ನೆಮ್ಮದಿ ದೊರೆಯುವುದು.

ಕಟಕ:

ಕುಟುಂಬದಲ್ಲಿ ಪ್ರೇಮ, ಅನುರಾಗಗಳು ಹೆಚ್ಚಾಗುವವು. ಕೆಲವು ವಿಷಯಗಳನ್ನು ಬಹಿರಂಗಗೊಳಿಸದಿರುವುದು ಒಳಿತು.

ಸಿಂಹ:

ಸೃಜನಾತ್ಮಕತೆ, ಸಮಯಸ್ಫೂರ್ತಿ ತೋರುವುದರಿಂದ ಗೌರವಗಳು ಹೆಚ್ಚಾಗಲಿವೆ. ಸಮಾಜದಲ್ಲಿ ಗೌರವ ಹೆಚ್ಚುವುದು.

ಕನ್ಯಾ:

ಕೆಲಸ, ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಹೋದ್ಯೋಗಿಗಳ ಬೆಂಬಲ ಪಡೆದು ಕಾರ್ಯ ಪೂರೈಸುವಿರಿ.

ತುಲಾ:

ನಿಮ್ಮ ವ್ಯವಹಾರ ವೃದ್ಧಿಗೆ ಇದು ಸಕಾಲ. ಹೊಸ ಅವಕಾಶಗಳು ನಿಮ್ಮನ್ನು ಕೈಬೀಸಿ ಕರೆಯಲಿವೆ. ಆರ್ಥಿಕ ಸ್ಥಿತಿ ಉತ್ತಮ.

ವೃಶ್ಚಿಕ:

ಸರ್ಕಾರಿ, ಖಾಸಗಿ ನೌಕರರಿಗೆ ಹೆಚ್ಚಿನ ಜವಾಬ್ದಾರಿ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಆಂಜನೇಯ ಸ್ತೋತ್ರ ಪಠಿಸಿರಿ.

ಧನಸ್ಸು:

ಆರೋಗ್ಯ, ಹಣಕಾಸಿನ ತೊಂದರೆ ಸಾಧ್ಯತೆಗಳಿದ್ದು, ಜಾಗ್ರತೆಯಿಂದ ವ್ಯವಹರಿಸಿ. ವೃಥಾ ತಿರುಗಾಟದಿಂದ ದೇಹಕ್ಕೆ ಶ್ರಮ.

ಮಕರ:

ಮನೆಯವರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಮನರಂಜನೆಗಾಗಿ ಕಾರ್ಯ ನಿರೂಪಿಸುವಿರಿ. ನೆಮ್ಮದಿಯ ದಿನ.

ಕುಂಭ:

ಮನೋಭಿಲಾಷೆಗಳು ಈಡೇರಲಿವೆ. ಪ್ರೀತಿಸಿದವರೊಂದಿಗೆ ಮದುವೆ ಪ್ರಸ್ತಾಪ. ಇದಕ್ಕೂ ಮುನ್ನ ಹಿರಿಯರ ಒಪ್ಪಿಗೆ ಪಡೆಯಿರಿ.

ಮೀನ:

Meena1

ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳುವುದು ಉತ್ತಮ. ಇನ್ನು ಪ್ರಮುಖ ಕಾರ‌್ಯಭಾರವನ್ನು ಹೊರಬೇಕಾಗುವುದು.