ನಿಮ್ಮ ವಿದೇಶ ಪ್ರವಾಸ ವಿಳಂಬವಾಗುತ್ತಿದೆ ಹಾಗಾದರೆ ಅದಕ್ಕೆ ಕಾರಣ ಇಲ್ಲಿದೆ ನೋಡಿ…!

0
1286

ಪ್ರತಿಯೊಬ್ಬರಿಗೂ ವಿದೇಶ ಪ್ರವಾಸ ಹೋಗಬೇಕು ಎನ್ನುವ ಹಾಸೆ ಇದ್ದೆ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿದೇಶಕ್ಕೆ ಓದಲು ಮತ್ತು ಉದ್ಯೋಗಕ್ಕೆ ಹೋಗುವರ ಅಥವಾ ಕೇವಲ ಪ್ರವಾಸಕ್ಕೆ ಹೋಗುತ್ತಾರ ಎಂದು ತಿಳಿಯ ಬಹುದು.

astrology-foreign-tour
source: varanasiastro.com

1. ಜನ್ಮ ಜಾತಕದಲ್ಲಿ ವಿದೇಶಯಾನಕ್ಕೆ 9 ಮತ್ತು 12 ನೇ (ನವಮ,ದ್ವಾದಶ ಭಾವ) ಮನೆಯನ್ನು ನೋಡಬೇಕು.
2. ಜಾತಕದಲ್ಲಿ ಲಗ್ನಾಧಿಪತಿ, ಭಾಗ್ಯಾಧಿಪತಿ
ಪರಿವರ್ತನೆಯಾಗಿದ್ದರೆ ವಿದೇಶಯಾನ.
3. ಮುಖ್ಯವಾಗಿ ಜಾತಕದಲ್ಲಿ ಗುರು ಗ್ರಹವು ಒಳ್ಳೆಯ ಸ್ಥಾನದಲ್ಲಿ ಅಂದರೆ ಉಚ್ಚಕ್ಷೇತ್ರ, ಸ್ವಕ್ಷೇತ್ರದಲ್ಲಿ ಇದ್ದರೆ ವಿದೇಶಯಾನ.
4. ಗುರುವಿನ ಜೊತೆ ಚಂದ್ರನಿದ್ದರೆ ಅಥವಾ ಚಂದ್ರನಿಗೆ ಗುರುವಿನ ದೃಷ್ಟಿಬಿದ್ದರೆ ವಿದೇಶಯಾನ.
5. ಚರಾಧಿಪತಿ ಗುರುವಿ ಜೊತೆ ಕೂಡಿಗರೆ ಅಥವಾ ಚರ ಲಗ್ನಕ್ಕೆ ಗುರುವಿನ ದೃಷ್ಟಿ ಇದ್ದರೆ ವಿದೇಶಯಾನ.
6. ವ್ಯಯ ರಾಶಿಯು ಅಂದರೆ 12ನೇ ಮನೆಯು  ಚರರಾಶಿಯಗಿದ್ದು ಗುರುವು ಇದ್ದರೆ ವಿದೇಶಯಾನ.
7. ಚರರಾಶಿಯಲ್ಲಿ ಗುರುವಿದ್ದು ಗುರು ದೆಶೆ ಬಂದ ನಂತರ ವಿದೇಶಯಾನ.
8. ಗುರುವಿನ ರಾಶಿಯಲ್ಲಿ ಚಂದ್ರನಿದ್ದು ಚಂದ್ರನ ರಾಶಿಯಲ್ಲಿ ಗುರುವಿದ್ದು ಪರಿವರ್ತನೆಯಾಗಿದ್ದರೆ ವಿದೇಶಯಾನ.
9.ಲಗ್ನ ಅಥವಾ ಲಗ್ನಾಧಿಪತಿಯು ಜಲ ತತ್ವದಲ್ಲಿ ಇದ್ದರೆ ವಿದೇಶಯಾನ.       10. ವ್ಯಯಾಧಿಪತಿ, ಲಗ್ನಾಧಿಪತಿ, ಭಾಗ್ಯಾಧಿಪತಿಗಳು ಚರ ರಾಶಿಯಲಿದ್ದು ಗುರುವಿನ ದೃಷ್ಟಿ ಇದ್ದರೆ ವಿದೇಶಯಾನ.
11. ವ್ಯಯಾಧಿಪತಿ ಮತ್ತು ಚತುರ್ಥಧಿಪತಿ ಅಂದರೆ 4ನೇ ಮನೆ ಅಧಿಪತಿಯು ಚತುರ್ಥದಲ್ಲಿ ಇದ್ದು ಗುರುವಿನ ದೃಷ್ಟಿ ಇದ್ದರೆ ವ್ಯಕ್ತಿಯು ಉನ್ನತ ವ್ಯಾಸಂಗಕ್ಕೆ ವಿದೇಶಯಾನ ಹೋಗುವರು.
12. ವ್ಯಯಾಧಿಪತಿ ಮತ್ತು ದಶಮಾಧಿಪತಿಯು ಜೊತೆ ಇದ್ದು ಗುರುವಿನ ದೃಷ್ಟಿ ಇದ್ದರೆ ಉದ್ಯೋಗಕ್ಕೆ
ವಿದೇಶಯಾನ ಹೋಗುವರ.
13. ಸಪ್ತಮಕ್ಕೆ ವ್ಯಯಾಧಿಪತಿ ಅಥವಾ ಗುರುವಿ ದೃಷ್ಟಿ ಇದ್ದರೆ ಮದುವೆಯಾದ ಮೇಲೆ ವಿದೇಶಯಾನ ಹೋಗುವರ.
14. ಶುಕ್ರನಿಗೆ ಗುರುವಿನ ದೃಷ್ಟಿ ಇದ್ದು ಶುಕ್ರನ ದೆಶೆಯಲ್ಲಿ ವಿದೇಶಕ್ಕೆ ಹೋಗಿಬರುವರು.