ನಿತ್ಯ ಭವಿಷ್ಯ: ಜನವರಿ 13, 2018

0
1071
ದಿನ ಭವಿಷ್ಯ

ಮೇಷ:

ಆರ್ಥಿಕವಾಗಿ ನಾನಾ ರೀತಿಯ ಲಾಭಗಳಿಕೆ ಯಿಂದ ಮನಸ್ಸಿಗೆ ಉಲ್ಲಾಸ ಹೆಚ್ಚಳ. ದೇವತಾ ಕಾರ್ಯ ಗಳಿಗಾಗಿ ಬಂಧುಗಳ ಆಗಮನ.

ವೃಷಭ:

ಸೋದರರ ಮನೆಯಲ್ಲಿನ ಸತ್ಕಾರ್ಯಕ್ಕೆ ನಾನಾ ರೀತಿಯ ವ್ಯವಸ್ಥೆಗೆ ಹಣ ವ್ಯಯ. ಸತಿಯಿಂದ ಕಿರಿಕಿರಿ. ಸಮಾಜದವರಿಂದ ಕಿರಿಕಿರಿ.

ಮಿಥುನ:

ಅವಿವಾಹಿತರಿಗೆ ನಿಶ್ಚಯ ಭಾಗ್ಯ ಇಲ್ಲವೆ ಮಂಗಲ ಕಾರ್ಯಕ್ಕೆ ಚಾಲನೆ. ನೂತನ ದಂಪತಿಗೆ ಸಿಹಿ ಸುದ್ದಿ ಮಾನಸಿಕ ಸಂತಸ.

ಕಟಕ:

ಕೃಷಿಕರಿಗೆ ಕೃಷಿ ಕಾರ್ಯದಿಂದ ಅಭಿವೃದ್ಧಿ ನೆಮ್ಮದಿ. ವ್ಯರ್ಥ ಸಂಚಾರದಿಂದ ಅಧಿಕ ಧನವ್ಯಯ. ಸಹೋದ್ಯೋಗಿಯಿಂದ ಸಹಾಯ.

ಸಿಂಹ:

ಮಿತ್ರ ವರ್ಗದವರಿಂದ ಅಪವಾದ ಎದುರಿಸುವ ಸಂಭವ. ಕೋರ್ಟ್ ಕಚೇರಿ ಕಾರ್ಯಗಳಲ್ಲಿ ಮುನ್ನಡೆ. ನಿಧಾನಗತಿಯಲ್ಲಿ ಸುಧಾರಣೆ.

ಕನ್ಯಾ:

ವ್ಯಾಪಾರ ಹೆಚ್ಚಿನ ಹಣ ಹೂಡುವಿಕೆಯಿಂದ ಸಾಧಾರಣ ಚೇತರಿಕೆ. ದೂರದ ಸಂಚಾರದಿಂದ ಬಳಲಿಕೆ, ಹಿರಿಯರಿಂದ ಮಾನಸಿಕ ಕಿರಿಕಿರಿ.

ತುಲಾ:

ಗೃಹ ತಾಪತ್ರಯಗಳು ನಿಮ್ಮನ್ನು ಕಾಡಿದರೂ ಧೈರ್ಯದ ಹೆಜ್ಜೆ ಇದ್ದರೆ ಒಳಿತು. ನಿರುದ್ಯೋಗಿಗಳ ಮನೋಕಾಮನೆ ಈಡೇರಿಕೆಯಿಂದ ಸಂತಸ.

ವೃಶ್ಚಿಕ:

ಮನೆಯಲ್ಲಿ ಹರುಷವಿದ್ದರೂ ವ್ಯಯಾಧಿಕ್ಯದಿಂದ ಚಿಂತೆ. ಪುತ್ರರ ಹಿನ್ನಡೆಯಿಂದ ಬೇಸರ. ಆರೋಗ್ಯದ ಮೇಲೆ ಪರಿಣಾಮ.

ಧನಸ್ಸು:

ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ತೋರಿಬಂದರೂ ಉತ್ತಮ ಫಲಿತಾಂಶ. ದೈವಾನುಗ್ರಹದಿಂದ ಎಲ್ಲ ಸುಗಮ.

ಮಕರ:

ಸುಖ ದಾಂಪತ್ಯ ಮುಂದುವರಿಕೆ, ಮಕ್ಕಳ ಬಗ್ಗೆ ಹೆಚ್ಚಿನ ಗಮನ. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ನಿಲುವಿಗೆ ಹೆಚ್ಚಿನ ಗೌರವ, ಸಂತಸ.

ಕುಂಭ:

ಪ್ರತಿಷ್ಠಿತ ವ್ಯಕ್ತಿಗಳ ಸಹಕಾರದಿಂದ ಕಾರ್ಯಾನುಕೂಲ. ಅನಿರೀಕ್ಷಿತ ಕಂಕಣ ಭಾಗ್ಯದಿಂದ ಮನಸ್ಸಿಗೆ ಉಲ್ಲಾಸ, ಸಂತೃಪ್ತಿ.

ಮೀನ:


ವ್ಯಾಪಾರಿಗಳಿಗೆ ವ್ಯಾಪಾರ, ವ್ಯವಹಾರದಲ್ಲಿ ಲಾಭದಾಯಕ ಆದಾಯ. ರಾಜಕಾರಣಿಗಳಿಗೆ ಸೂಕ್ತ ಸ್ಥಾನಮಾನದಿಂದ ಸಂತಸ.