ನಿತ್ಯ ಭವಿಷ್ಯ: ಜನವರಿ 14, 2018

0
956

ಮೇಷ:

ಹಣಕಾಸಿನ ವಿಷಯ, ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆಗಳಲ್ಲಿ ಸುಗಮತೆ, ಇತರ ಕಾರ್ಯಗಳಲ್ಲಿ ಸಕಾರಾತ್ಮಕ ಬದಲಾವಣೆ.

ವೃಷಭ:

ಉದ್ಯೋಗದಲ್ಲಿ ಕನಸು ನನಸಾಗುವ ದಿನ. ಪ್ರೀತಿ ಪಾತ್ರರಿಂದ ಪ್ರಶಂಸೆ. ಹಿರಿಯರ ತಪಾಸಣೆಗೆ ಖರ್ಚು.

ಮಿಥುನ:

ಮನಸ್ಸಿನ ಇಚ್ಛೆಯಂತೆ ಜಾಗರೂಕತೆಯಿಂದ ನಿರ್ದಿಷ್ಟ ನಿರ್ಣಯ ಕೈಗೊಳ್ಳುವಿಕೆಯಿಂದ ಯಶಸ್ಸು. ಮನೆಯಲ್ಲಿ ಹರ್ಷ.

ಕಟಕ:

ಸ್ವಉದ್ಯೋಗಿಗಳಿಗೆ ನಿಧಾನ ಉತ್ತಮ ಪ್ರಗತಿ. ವ್ಯಾಪಾರಿಗಳಿಗೆ ಅಧಿಕ ಲಾಭ. ಮನೆ ಕುಲದೇವತಾ ಆರಾಧನೆಯಿಂದ ಕಾರ‌್ಯ ಸಿದ್ಧಿ.

ಸಿಂಹ:

ನಿವೇಶನ, ಮನೆ ಖರೀದಿಯಂತಹ ಮಹತ್ವ ಕಾರ್ಯಗಳಿಗೆ ಅಡಚಣೆ. ದೂರದ ಮಿತ್ರರ ಭೇಟಿ. ಸುಖ ಭೋಜನ ಲಾಭ.

ಕನ್ಯಾ:

ಖಾಸಗಿ ವೃತ್ತಿದಾರರಿಗೆ ಯೋಜನಾ ಬದ್ಧ ಕಾರ್ಯಗಳಿಂದ ಸಾಧಾರಣ ಲಾಭ. ಬಟ್ಟೆ ವ್ಯಾಪಾರಿಗಳಿಗೆ ಕೊಂಚ ಕಿರಿಕಿರಿ.

ತುಲಾ:

ವೈದ್ಯವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಲಾಭ. ವಿನೂತನ ಕಾರ್ಯ ವೈಖರಿಯಿಂದ ಮೇಲಿನವರಿಂದ ಪ್ರಶಂಸೆ.

ವೃಶ್ಚಿಕ:

ಆಕಸ್ಮಿಕವಾಗಿ ಹಣವಂತರಿಂದ ಧನ ಸಹಾಯ. ಹಿಂದಿನ ವ್ಯಾಜ್ಯಗಳಿಗೆ ಪರಿಹಾರ. ಮನೆಯವರಲ್ಲಿ ವಿಶ್ವಾಸ ವೃದ್ಧಿ .

ಧನಸ್ಸು:

ಪ್ರಭಾವಶಾಲಿ ವ್ಯಕ್ತಿಯ ಭೇಟಿಯಿಂದ ಕೊಂಚ ನೆಮ್ಮದಿ. ಮಗಳಿಂದ ಉಡುಗೊರೆ ಲಾಭ. ಆರೋಗ್ಯದಲ್ಲಿ ಪ್ರಗತಿ.

ಮಕರ:

ದೊರೆತ ಅವಕಾಶ ಸದುಪಯೋಗಪಡಿಸಿ ಕೊಳ್ಳಲು ಹರಸಾಹಸ. ವಿದೇಶ ಪ್ರಯಾಣಕ್ಕೆ ವಿಳಂಬ, ಸಮಾಧಾನ.

ಕುಂಭ:

ನಿರ್ಧಾರ ತೆಗೆದುಕೊಳ್ಳುವ ಮೊದಲೇ ವಾಸ್ತವದ ಅರಿಕೆ. ತಪ್ಪಿದ ಅವಘಡ. ಮನೆ ಮಂದಿಗೆಲ್ಲ ಸಮಾಧಾನ.

ಮೀನ:


ಕಸಿವಿಸಿಗೊಂಡ ಮನಸ್ಥಿತಿ ತಿಳಿಗೊಳ್ಳುವಿಕೆಯಿಂದ ಉಲ್ಲಾಸ. ಹೊಸ ಯೋಜನೆ ಯಶಸ್ವಿಗೊಳಿಸಲು ಮಿತ್ರರ ಸಹಾಯ.