ನಿತ್ಯ ಭವಿಷ್ಯ: ಜನವರಿ 19, 2018

0
1018
ದಿನ ಭವಿಷ್ಯ

ಮೇಷ:

ಶ್ರೀಮತಿಯೊಂದಿಗೆ ಶ್ರೀಮಂತ ಕುಟುಂಬದೊಂದಿಗೆ ಪ್ರವಾಸ ಯೋಗ. ಶೈಕ್ಷಣಿಕ ವ್ಯವಸ್ಥೆ ಯಿಂದ ಸಂತಸ.

ವೃಷಭ:

ನಿರೀಕ್ಷಿತ ರೀತಿಯಲ್ಲಿ ಕಾರ್ಯ ಸಾಧನೆಯಾಗುವಿಕೆಯಿಂದ ಆಪತ್ತು ನಿವಾರಣೆ. ಬಂಧುಗಳ ಸಹಾಯದಿಂದ ಮನಸ್ಸಿಗೆ ತೃಪ್ತಿ.

ಮಿಥುನ:

ಸಾಮಾಜಿಕ ಒಡನಾಟ ಹೆಚ್ಚಳದಿಂದ ಮನೆಯಲ್ಲಿ ಧಾರ್ಮಿಕ ಸಮಾರಂಭ. ಆಗಂತುಕರಿಂದ ಪ್ರಶಂಸೆ. ವೈದ್ಯರ ಭೇಟಿಯಿಂದ ಸಮಾಧಾನ.

ಕಟಕ:

ಆತ್ಮೀಯ ಬಂಧು-ಮಿತ್ರರ ಆಗಮನದಿಂದ ಸಿಹಿಸುದ್ದಿ. ರೈತರುಗಳಿಗೆ ಜಾನುವಾರು ಖರೀದಿಯೋಗ. ಕ್ರೀಡಾಪಟುಗಳಿಗೆ ಜಯ.

ಸಿಂಹ:

ವಿನೂತನ ಸಾಹಿತ್ಯ ಚಟುವಟಿಕೆಗಳಿಂದ ಮನಸ್ಸಿ ತೃಪ್ತಿ. ನೌಕರರಿಗೆ ನೌಕರಿಯಲ್ಲಿ ಮಹತ್ವದ ಸಾಧನೆ. ಆಪ್ತ ಬಂಧುಗಳಿಂದ ಪ್ರಶಂಸೆ.ಹೊಸ ವಾಣಿಜ್ಯ ವ್ಯವಹಾರಗಳಿಂದ ಆರ್ಥಿಕ ಮಟ್ಟದಲ್ಲಿ ಸುಧಾರಣೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಾಂಸಾರಿಕದಲ್ಲಿ ನೆಮ್ಮದಿ.

ಕನ್ಯಾ:

ಹೊಸ ವಾಣಿಜ್ಯ ವ್ಯವಹಾರಗಳಿಂದ ಆರ್ಥಿಕ ಮಟ್ಟದಲ್ಲಿ ಸುಧಾರಣೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಸಾಂಸಾರಿಕದಲ್ಲಿ ನೆಮ್ಮದಿ.

ತುಲಾ:

ಮನೆಯ ಮಂಗಳ ಕಾರ್ಯಗಳಿಗೆ ಅತಿಥಿಗಳ ಕೊರತೆಯಿಂದ ಸ್ವಲ್ಪ ಬೇಸರ. ಕಲಾರಾಧಕರಿಗೆ ಕೃಷಿಕರಿಗೆ ಹಿನ್ನಡೆ. ಬಂಧುಗಳಿಂದ ಸಾಂತ್ವನ.

ವೃಶ್ಚಿಕ:

ಹೊಸ ಉದ್ಯೋಗಕ್ಕಾಗಿ ತಡಕಾಟ. ನಿಧಾನ ಜಯ. ಪ್ರಯಾಣ ಕೊಂಚ ಆಯಾಸ. ವ್ಯಾಪಾರಿಗಳು ವೈದ್ಯರುಗಳಿಗೆ ನೆಮ್ಮದಿ.

ಧನಸ್ಸು:

ಬಹುದಿನದ ವಿವಾದವೊಂದು ಬಗೆಹರಿಯುವಿಕೆ ಮನೆಮಂದಿಗೆ ಸಮಾಧಾನ. ಸಾಹಿತ್ಯಕಾರರು, ಕ್ರೀಡಾಪಟುಗಳಿಗೆ ಪ್ರಗತಿ.

ಮಕರ:

ಮಹಿಳೆಯರಿಗೆ ನೌಕರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ. ಹವ್ಯಾಸಿ ಕಲಾವಿದರಿಗೆ ಸ್ವಕಾರ್ಯದಲ್ಲಿ ಜಯ. ವ್ಯಾಪಾರಿಗಳಿಗೆ ಸಂಪದ್ಭರಿತ ಬದುಕು.

ಕುಂಭ:

ಶ್ರೀಮತಿಯ ಉದರ ಬೇನೆಗೆ ಅಧಿಕ ಖರ್ಚು. ಮಕ್ಕಳಿಂದ ಸಾಂತ್ವನ. ಉದ್ಯೋಗದಲ್ಲಿ ಕಿರಿಕಿರಿ. ಮನಸ್ಸಿಗೆ ಕೊಂಚ ಬೇಸರ.

ಮೀನ:

ಕಸಿವಿಸಿಗೊಂಡ ಮನಸ್ಥಿತಿ ತಿಳಿಗೊಳ್ಳುವಿಕೆಯಿಂದ ಉಲ್ಲಾಸ. ಹೊಸ ಯೋಜನೆ ಯಶಸ್ವಿಗೊಳಿಸಲು ಮಿತ್ರರ ಸಹಾಯ.