ನಿತ್ಯ ಭವಿಷ್ಯ: ಜನವರಿ 27, 2018

0
922
ದಿನ ಭವಿಷ್ಯ

ಮೇಷ:

ಕುಟುಂಬದಲ್ಲಿ ಆಂತರಿಕ ಕಲಹಗಳಿಗೆ ಸರಳ ಮುಕ್ತಿಯಾಗಿ ನೆಮ್ಮದಿ. ಅಗತ್ಯ ವಸ್ತುಗಳ ಖರೀದಿಗೆ ಸಾಕಷ್ಟು ದ್ರವ್ಯಾನುಕೂಲ.

ವೃಷಭ:

ತುರ್ತು ಕಾರ್ಯಗಳ ನಿರ್ವಹಣೆಗೆ ಒಡಹುಟ್ಟಿದವರೊಡನೆ ಚಕಮಕಿ. ಧಾರ್ಮಿಕ ಕಾರ್ಯಗಳಿಗೆ ಪ್ರತಿಷ್ಠಿತರೊಡನೆ ಚರ್ಚೆ.

ಮಿಥುನ:

ಹಣದ ಕೊರತೆ ನಿಧಾನ ನೀಗುವುದರಿಂದ ಕುಟುಂಬದಲ್ಲಿ ಶಾಂತಿ. ಅಧ್ಯಾತ್ಮಿಕ ಚಿಂತನೆಗಳಿಗಾಗಿ ಸಜ್ಜನರ ಭೇಟಿ ಸಂತಸ.

ಕಟಕ:

ಸೋದರಮಾವನ ಆಶ್ವಾಸನೆಗಳಿಂದ ಹುಮ್ಮಸ್ಸು ಹೆಚ್ಚಳ. ಪ್ರತಿಭಾವಂತರ ಪರಿಚಯದಿಂದ ಸಮಾಜ ಸೇವೆಯಲ್ಲಿ ಸದವಕಾಶ.

ಸಿಂಹ:

ವಂಚಕರ ಆಮಿಷಗಳಿಗೆ ಬೆರಗಾಗುವುದರಿಂದ ನಷ್ಟ ಸಂಭವ. ಅಧಿಕ ಸಂಚಾರದಿಂದ ನಿರರ್ಥಕ ಕಸರತ್ತು ಬೇಸರ.

ಕನ್ಯಾ:

ಸಜ್ಜನರ ಬೆಂಬಲದಿಂದ ವಾಹನ ವಹಿವಾಟುಗಳಲ್ಲಿ ಲಾಭ. ಸ್ವತ್ತು ವಿವಾದಗಳಲ್ಲಿ ಸೋದರರಿಗೆ ಮೇಲುಗೈ ಕೊಂಚ ಬೇಸರ.

ತುಲಾ:

ಹಿತ ಶತ್ರುಗಳ ಕಿತಾಪತಿಯಿಂದ ನ್ಯಾಯ ವಿಚಾರದಲ್ಲಿ ಹಿನ್ನಡೆ. ದೈವ ಕಾರ್ಯಗಳ ಮುಂದೂಡಿಕೆ. ನಿರುದ್ಯೋಗಿಗಳಿಗೆ ಹತಾಶೆ.

ವೃಶ್ಚಿಕ:

ಕೌಟುಂಬಿಕ ಸಮಸ್ಯೆಗಳಿಗೆ ಮಿತಿಮೀರಿದ ವೆಚ್ಚ ಪುತ್ರರಿಂದ ಸಿಡಿಮಿಡಿ. ಸತ್ಕಾರ್ಯ ನೆರವೇರಿಸಲು ಸಾಲದ ಮೊರೆ.

ಧನಸ್ಸು:

ಕೈಗೊಂಡ ಕಾರ್ಯಗಳಿಗೆ ಶೀಘ್ರ ಪರಿಹಾರ ಸಿಗದೇ ಪರಿತಾಪ. ವೈವಾಹಿಕ ಮಾತುಗಳಿಗೆ ಹಿನ್ನಡೆ. ಸೋದರಿಯರಿಗೆ ಅಸಂತಸ.

ಮಕರ:

ಅದ್ಧೂರಿ ಸಮಾರಂಭಗಳಿಗೆ ಅಧಿಕ ವೆಚ್ಚ. ಮನೆ ವಿಂಗಡಣೆಗೆ ಹಿರಿಯರಲ್ಲಿ ಭಿನ್ನಾಭಿಪ್ರಾಯ. ಹಿತಶತ್ರುಗಳಿಂದ ಕಿರಿಕಿರಿ.

ಕುಂಭ:

ಬರಹಗಾರರಿಗೆ ಹೆಚ್ಚು ವರಿ ವರಮಾನ. ತುರ್ತು ಕಾರ್ಯಕ್ರಮಗಳಿಗೆ ಸ್ವಲ್ಪ ವಿರಾಮ. ಮಾನಸಿಕ ಶಾಂತಿ. ನೆಂಟರ ಆಗಮನ.

ಮೀನ:

Meena1

ಆರ್ಥಿಕ ಸಂಸ್ಥೆಗಳಿಂದ ಸಾಲದ ಮರುಪಾವತಿಗೆ ಒತ್ತಡ. ವಾಹನ ವಹಿವಾಟುಗಳಲ್ಲಿ ಮಂದಗತಿ. ವೈವಾಹಿಕ ಮಾತುಕತೆ ಮುಂದೂಡಿಕೆ.