ನಿತ್ಯ ಭವಿಷ್ಯ: ಜನವರಿ 7, 2018

0
894

ಮೇಷ:

ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಲಾಭದಾಯಕವಾದರೂ ವಂಚನೆಗಳು ತೋರಿ ಬರಲಿವೆ. ಅಧಿಕಾರಿ ವರ್ಗದವರಿಗೆ ಕಿರುಕುಳದ ಜಾಗೃತೆ ಇರಲಿ.

ವೃಷಭ:

ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬರಲಿದೆ. ದೇಹಾರೋಗ್ಯದಲ್ಲಿ ಏರುಪೇರು ಸಂಭವವಿದ್ದು, ವೈದ್ಯರಿಗಾಗಿ ಅಧಿಕ ಖರ್ಚು ತೋರಿಬರಲಿದೆ.

ಮಿಥುನ:

ಮಾನಸಿಕ ಉದ್ವೇಗ-ಅಸ್ಥಿರತೆ ಆಗಾಗ ಕಾಡಬಹುದಾದರೂ ಹೆಚ್ಚಿನ ಆರ್ಥಿಕ ಅಭಿವೃದ್ಧಿ ತಕ್ಕಮಟ್ಟಿಗೆ ಮನಸ್ಸಿಗೆ ನೆಮ್ಮದಿ ನೀಡಲಿದೆ.

ಕಟಕ:

ನ್ಯಾಯಾಲಯದ ಕೆಲಸಗಳು ಯಶಸ್ವಿಯೆನಿಸಿ ಮನೆಯಲ್ಲಿ ಹರ್ಷ ತರಲಿದೆ. ಆದರೆ ದೇವತಾ ಕಾರ್ಯಗಳಿಗೆ ಖರ್ಚು, ಶ್ರಮವಿದೆ.

ಸಿಂಹ:

ಅಧಿಕಾರಿಗಳ ಕಿರುಕುಳ ಸ್ವಲ್ಪ ಮಟ್ಟಿಗೆ ಬೇಸರ ತರಲಿದ್ದು, ದೂರ ಪ್ರಯಾಣ ಹೋಗುವಿರಿ. ಆರ್ಥಿಕ ಮುಗ್ಗಟ್ಟಿನಿಂದ ಮನೆಯಲ್ಲಿ ಕಿರಿಕಿರಿಯಿದೆ.

ಕನ್ಯಾ:

ದಾಯಾದಿಗಳ ಕಿರಿಕಿರಿಯಿಂದ ಕೊಂಚ ಮನಸ್ಸಿಗೆ ಬೇಸರವೆನಿಸಬಹುದು, ಸಂಚಾರದಲ್ಲಿ ಅಡಚಣೆಯಿದ್ದು, ಜಾಗೃತೆ ವಹಿಸುವುದು ಉತ್ತಮ.

ತುಲಾ:

ನಿರುದ್ಯೋಗಿಗಳಿಗೆ ಉದ್ಯೋಗಲಾಭ. ವೃತ್ತಿರಂಗದರಿಗೆ ಕೆಲಸ ಕಾರ್ಯಗಳಲ್ಲಿ ಸುಧಾರಣೆಯಿದೆ. ಆದರೆ ಸಂಚಾರಿಗಳಿಗೆ ಆಯಾಸವೆನಿಸಲಿದೆ.

ವೃಶ್ಚಿಕ:

ಅನಿರೀಕ್ಷಿತ ಕಾರ್ಯ ಸಾಧನೆಯಿಂದ ಅಚ್ಚರಿ ತರಲಿದೆ. ಹಳೆಯ ಮಿತ್ರರ ಭೇಟಿಯಿಂದ ಸಂತಸದ ಸುದ್ದಿ ಲಭಿಸಿ ಉಲ್ಲಾಸ ನೀಡಲಿದೆ.

ಧನಸ್ಸು:

ದಾಂಪತ್ಯ ಬದುಕು ಸುಧಾರಣೆಗೊಂಡು ಆರೋಗ್ಯ ಭಾಗ್ಯದಲ್ಲಿ ವೃದ್ಧಿ. ಹೊಸದಾಗಿ ಸೇರಿಕೊಂಡ ಉದ್ಯೋಗಿಗಳಿಗೆ ನೆಮ್ಮದಿಯಿದೆ.

ಮಕರ:

ವ್ಯಾಪಾರಿಗಳಿಗೆ ಕ್ರಮ-ವಿಕ್ರಯದಿಂದ ತಕ್ಕಮಟ್ಟಿಗೆ ಲಾಭ ತರಲಿದೆ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಮನಸ್ಸಿಗೆ ತುಷ್ಟಿ.

ಕುಂಭ:

ವೃತ್ತಿರಂಗದಲ್ಲಿನ ಹಳೆಯ ವಿವಾದಗಳು ಪರಿಹಾರವಾಗಿ ನೆಮ್ಮದಿ. ಹೊಸ ವ್ಯಕ್ತಿ ಪರಿಚಯದಿಂದ ಹೊಸ ಕಾರ್ಯದಲ್ಲಿ ಜಯ.

ಮೀನ:


ಅವಿವಾಹಿತರ ಸಂಬಂಧಗಳಲ್ಲಿ ಅಡೆತಡೆ ತೋರಿಬಂದರೂ ಅಚ್ಚರಿ ರೀತಿಯಲ್ಲಿ ಕಂಕಣಭಾಗ್ಯ ಒದಗಲಿದೆ. ನೆಮ್ಮದಿಯಿದೆ.