ದಿನಭವಿಷ್ಯ: 30 ನವೆಂಬರ್ 2017

0
595

ಮೇಷ:-

ವ್ಯಾಪಾರವನ್ನು ದ್ರೋಹಚಿಂತನಂ ಎನ್ನುವಂತೆ ಈ ದಿನ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ದ್ರೋಹವನ್ನು ಮಾಡದಿರಿ. ಕಬ್ಬಿಣಕ್ಕೆ ಸಂಬಂಧಪಟ್ಟ ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ. ಕೆಲಸ ಕಳೆದಕೊಳ್ಳುವ ಭೀತಿ. ಭಿಕ್ಷ ುಕರಿಗೆ ಚಿತ್ರಾನ್ನ ದಾನ ಕೊಡಿರಿ.

ವೃಷಭ:-

ದೂರದ ಬಂಧುಗಳಿಂದ ನಿಮಗೆ ಅಸಮಾಧಾನವುಂಟಾಗುವುದು. ಆದರೆ ಬೇರೆ ಸಹೋದ್ಯೋಗಿಗಳಿಂದ ಮತ್ತು ಬಂಧುಗಳಿಂದ ದೊರೆತ ಸಲಹೆ-ಸಹಕಾರಗಳಿಂದ ಅನುಕೂಲವಾಗುವುದು. ಯಾವುದೇ ವಿಷಯವನ್ನು ಬಹಿರಂಗವಾಗಿ ಚರ್ಚೆ ಮಾಡದಿರಿ.

ಮಿಥುನ:-

ಮಕ್ಕಳ ಆರೋಗ್ಯ ಭಾಗ್ಯದ ಕಡೆ ಗಮನ ಹರಿಸಿರಿ. ಉನ್ನತ ಶಿಕ್ಷ ಣದ ವಿಚಾರದಲ್ಲಿ ಶಿಕ್ಷ ಣ ತಜ್ಞರನ್ನು ಭೇಟಿ ಮಾಡಿರಿ. ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿರಿ.

ಕಟಕ:-

ಕೃಷಿ ವಿಚಾರದಲ್ಲಿ ಹರುಷ, ಗೆಳೆಯರಿಂದ ಸಹಾಯ ಸಿಗಲಿದೆ. ಅನುಕೂಲ ಪರಿಸ್ಥಿತಿಯಿಂದಾಗಿ ಈ ದಿನ ಸಂತಸದ ಕ್ಷ ಣಗಳನ್ನು ಕಳೆಯುವಿರಿ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆ ಇದ್ದರೂ ಮಾನಸಿಕ ನೆಮ್ಮದಿಗೆ ತೊಂದರೆ ಇಲ್ಲ.


ಸಿಂಹ:-

ನಿಮ್ಮ ಕಾರ್ಯಕ್ಷೇತ್ರದಲ್ಲಿ ಗೆಲುವು ಕಾಣುವಿರಿ. ಬಹುತೇಕ ಇಂದಿನ ಎಲ್ಲಾ ಕಾರ್ಯಗಳು ಸಫಲತೆಯನ್ನು ತಂದು ಕೊಡುವುದು. ಈದಿನ ಅನೇಕ ತಿರುವುಗಳಿಗೆ ಸಾಕ್ಷಿಯಾಗಿ ನಿಲ್ಲುವುದು. ಹಣಕಾಸಿನ ತೊಂದರೆ ಇರುವುದಿಲ್ಲ.

ಕನ್ಯಾ:-

ಸಂಗಾತಿಯೊಂದಿಗೆ ತಾಳ್ಮೆಯಿಂದ ಇರಿ. ನಿಮ್ಮ ವ್ಯವಹಾರದಲ್ಲಿನ ಒತ್ತಡ, ಸಿಟ್ಟು, ಸೆಡವುಗಳನ್ನು ನಿಮ್ಮ ಸಂಗಾತಿಯ ಮೇಲೆ ಹೇರುವುದು ತರವಲ್ಲ. ಮಧ್ಯಸ್ಥಿಕೆ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ವಿನಾಕಾರಣ ಅಪವಾದಗಳನ್ನು ಎದುರಿಸಬೇಕಾಗುವುದು.

ತುಲಾ:-

ಕೆಲಸದ ಸ್ಥಳದಲ್ಲಿ ಕಿರಿಕಿರಿಗಳಿದ್ದರೂ ಮುಂದಿನ ಪದೋನ್ನತಿಗೆ ವೇದಿಕೆ ಇಂದು ಸಿದ್ಧವಾಗಲಿದೆ. ದುರ್ಗಾದೇವಿಯ ಆರಾಧನೆ ಮಾಡಿರಿ. ಸಂಗಾತಿಯೊಡನೆ ಮಹತ್ತರ ವಿಷಯಗಳನ್ನು ಚರ್ಚಿಸಿ ಪತಿ-ಪತ್ನಿಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಿರಿ.

ವೃಶ್ಚಿಕ:-

ಆರೋಗ್ಯದ ವಿಚಾರದಲ್ಲಿ ಆಸ್ಪತ್ರೆ ಖರ್ಚು ಬರುವ ಸಂಭವವಿರುತ್ತದೆ. ಜನ್ಮಸ್ಥ ಚಂದ್ರ ಮತ್ತು ಶನಿಯ ಸಂಚಾರದಿಂದ ಮನಸ್ಸಿಗೆ ಕಿರಿಕಿರಿಯಿದೆ. ಮನೋನಿಯಾಮಕ ರುದ್ರದೇವರ ಸ್ಮರಣೆ ಮಾಡಿಕೊಳ್ಳಿರಿ. ತಂದೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೆ ಏರುವ ಸಂಭವ ಇರುತ್ತದೆ. ತಾಳ್ಮೆಯಿಂದ ಇರಿ.

ಧನಸ್ಸು:-

ಚಂಚಲ ಮನಸ್ಸಿನಿಂದ ಹಮ್ಮಿಕೊಂಡ ಕಾರ್ಯವನ್ನು ಸಕಾಲಕ್ಕೆ ಮುಗಿಸಲು ಆಗುವುದಿಲ್ಲ. ಮೇಲಧಿಕಾರಿಗಳು ನಿಮ್ಮ ಕಾರ್ಯಕ್ಷ ಮತೆಯನ್ನು ಗಮನಿಸುತ್ತಿರುವರು. ಆದಷ್ಟು ಜಾಗರೂಕರಾಗಿ ಕಾರ್ಯ ನಿರ್ವಹಿಸಿರಿ. ಹಿರಿಯ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಿರಿ.

ಮಕರ:-

ನಿಮ್ಮ ಕಾರ್ಯಕ್ರಮಗಳು ಇಂದು ಸುಲಭದಲ್ಲಿ ಯಶಸ್ಸು ಕಾಣುವುದು. ಬರಬೇಕಾಗಿದ್ದ ಹಣಕಾಸು ಒದಗಿ ಬರುವುದು. ಅಷ್ಟಮದ ರಾಹು ಅಲ್ಪ ಅನಾರೋಗ್ಯವುಂಟು ಮಾಡುವ ಸಾಧ್ಯತೆಯಿದೆ. ದುರ್ಗಾದೇವಿಯನ್ನು ಪ್ರಾರ್ಥಿಸಿರಿ.

ಕುಂಭ:-

ವ್ಯಾಪಾರ-ವ್ಯವಹಾರದಲ್ಲಿ ಮೋಸ ಹೋಗುವ ಸಂದರ್ಭವಿದೆ. ಧನಲಾಭಕ್ಕೆ ಅಡೆ-ತಡೆಗಳು ಉಂಟಾಗುವ ಸಾಧ್ಯತೆಯಿದೆ. ಮನಸ್ಸಿನ ತಳಮಳವನ್ನು ನಿಗ್ರಹಿಸಲು ಆಂಜನೇಯ ಸ್ತೋತ್ರ ಪಠಿಸಿರಿ. ಸಹೋದರ, ಸಹೋದರಿಯರ ಕಷ್ಟಕ್ಕೆ ನೆರವಾಗುವಿರಿ.

ಮೀನ:-

ನೀರಿನಲ್ಲಿ ಮೀನು ಸ್ವಚ್ಛಂದವಾಗಿ ವಿಹರಿಸುವಂತೆ ಈ ದಿನ ನಿಮ್ಮ ಕಾರ್ಯಗಳೆಲ್ಲವೂ ದೈವಕೃಪೆಯಿಂದ ಸರಾಗವಾಗಿ ಆಗುವುದು. ಬ್ಯಾಂಕಿನಲ್ಲಿ ಹಣವಿದ್ದರೂ ಈ ದಿನ ಹಣ ಬಿಡಿಸಿಕೊಳ್ಳಲು ಕಷ್ಟಪಡುವಿರಿ. ಗುರುವಿನ ಪ್ರಾರ್ಥನೆಯಿಂದ ಒಳಿತಾಗುವುದು.