ATM ಕಾರ್ಡ್​ ಸುರಕ್ಷಿತಕ್ಕಾಗಿ ಬಂದಿದೆ ಹೊಸ ಮೊಬೈಲ್ app; ಬೇಕಾದ ಸಮಯದಲ್ಲಿ ಕಾರ್ಡ್ Block ಅಥವಾ Unblock ಮಾಡಿಕೊಳ್ಳಬಹುದು..

0
418

ಬ್ಯಾಂಕಿಂಗ್ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳೆವಣಿಗೆಗಳು ಮತ್ತು ತಂತ್ರಜ್ಞಾನಗಳು ಬರುತ್ತಿದು ಜನರಿಗೆ ಅನುಕೂಲವಾಗಲು ಎಲ್ಲ ತರಹದ ಸೇವೆಗಳು ಮೊಬೈಲ್-ನಲ್ಲೆ ಇರುವುದರಿಂದ ಜನರಿಗೆ ಎಷ್ಟೊಂದು ಸಮಯ ಉಳಿತಾಯವಾಗುತ್ತಿದೆ ಹಾಗೆಯೇ ಬ್ಯಾಂಕಿಂಗ್ ಸೇವೆಯಲ್ಲಿ ಬದ್ರತೆ ಕೂಡ ಕಂಡು ಬರುತ್ತಿದೆ. ಮೊದಲು ಏಟಿಎಂ ಅಥವಾ ಕ್ರೆಡಿಟ್ ಕಾರ್ಡ್-ಗಳು ಕಳೆದು ಹೋದರೆ ಎಲ್ಲಿ ಹಣ ಮಿಸ್ ಆಗುತ್ತೋ ಅಂತ ಬಳಕೆದಾರರು ಬ್ಯಾಂಕ್- ಗೆ ಓಡಿಹೋಗಿ ಕಾರ್ಡ್ block ಮಾಡಲು ಅರ್ಜಿ ಸಲ್ಲಿಸಿದ ಬಳಿಕವೇ ನೀವು ಕಳೆದುಕೊಂಡ ಏಟಿಎಂ ಕಾರ್ಡ್ ಬ್ಲಾಕ್ ಆಗುತ್ತಿತ್ತು, ಈಗಿನ ಮೊಬೈಲ್ ಯುಗದಲ್ಲಿ ಬ್ಯಾಂಕಿಂಗ್ ಕೇತ್ರವೆ ಮೊಬೈಲ್ ಮೇಲೆ ನಿಂತ್ತಿರುವುದರಿಂದ ನೀವು ಕಳೆದು ಕೊಂಡ ಏಟಿಎಂ ಬ್ಲಾಕ್ ಕೂಡ ನೀವೇ ನಿಮ್ಮ ಮೊಬೈಲ್ -ನಲ್ಲಿ ಮಾಡಿಕೊಳ್ಳಬಹುದು ಅದು ಹೇಗೆ ಅಂತಿರ ಈ ಮಾಹಿತಿ ನೋಡಿ.


Also read: ಪದವಿ ಮಾಡಿದವರಿಗೆ ಕೆನರಾ ಬ್ಯಾಂಕ್’ ನಲ್ಲಿ 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಈ app ಬಳಕೆ ಮಾಡುವುದು ಹೇಗೆ?

ಹೌದು ಇಂತಹ ಸೇವೆಯನ್ನು ಸದ್ಯ icici ಬ್ಯಾಂಕ್-ನವರು ಕಂಡು ಹಿಡಿದಿದ್ದು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ app ಬಳಕೆ ಮಾಡುವ ಮೂಲಕ ಈ ತಂತ್ರಜ್ಞಾನದ ಉಪಯೋಗವನ್ನು ಪಡೆಯಬಹುದು. ಹಾಗೆಯೇ ನಿಮ್ಮಲ್ಲಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್​ ​ ಇದ್ದರೆ ನಿಮ್ಮ ಕಾರ್ಡ್​ನ್ನು ಮತ್ತಷ್ಟು ಸುರಕ್ಷಿತಗೊಳಿಸಬಹುದು. ಐಸಿಐಸಿಐ ಸ್ಮಾರ್ಟ್​ಫೋನ್ ಆ್ಯಪ್ mobile ನಲ್ಲಿ ಮ್ಯಾನೇಜ್ ಕಾರ್ಡ್ ಎಂಬ ಹೊಸ ಫೀಚರ್ಸ್​ ನೀಡಲಾಗಿದೆ.
ಈ ಫೀಚರ್ ಮೂಲಕ ಖಾತೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ನ್ನು ತಾತ್ಕಾಲಿಕವಾಗಿ ಬ್ಲಾಕ್ ಅಥವಾ ಅನ್​ಬ್ಲಾಕ್ ಮಾಡಿಕೊಳ್ಳಬಹುದು. ಇದರಲ್ಲಿ ನೀವು ಆನ್​ಲೈನ್ ವ್ಯವಹಾರ, ಅಂತರಾಷ್ಟ್ರೀಯ ವಹಿವಾಟು ಸೇರಿದಂತೆ ಎಟಿಎಂ ವಿತ್​ಡ್ರಾ ಮಾಡುವುದನ್ನು ಬ್ಲಾಕ್ ಅಥವಾ ಅನ್​ಬ್ಲಾಕ್ ಮಾಡಬಹುದು.
ನಿಮ್ಮ ಕ್ರೆಡಿಟ್ ಕಾರ್ಡ್​ ಕಳೆದು ಹೋದರೆ ಬ್ಲಾಕ್ ಮಾಡುವುದು ಅವಶ್ಯಕವಾಗಿರುತ್ತದೆ. ಆದರೆ ಕೆಲವೊಮ್ಮೆ ಕಾರ್ಡ್​ ಮರಳಿ ಸಿಗುವ ಸಂಭವ ಕೂಡ ಇರುತ್ತದೆ. ಇಂತಹ ಸಮಯದಲ್ಲಿ ನೀವು ಅನ್​ಬ್ಲಾಕ್ ಮಾಡಲು ಬ್ಯಾಂಕ್​​ಗೆ ಹೋಗಬೇಕಾಗುತ್ತದೆ. ಆದರೆ ಇನ್ನು ಮುಂದೆ ಈ ರೀತಿಯ ತೊಂದರೆ ಇರುವುದಿಲ್ಲ. ಏಕೆಂದರೆ ಸ್ಮಾರ್ಟ್​​ಫೋನ್ ಮೂಲಕವೇ ನಿಮ್ಮ ಕ್ರೆಡಿಟ್ ಕಾರ್ಡ್​ನ್ನು ಬ್ಲಾಕ್ ಅಥವಾ ಅನ್​ಬ್ಲಾಕ್ ಮಾಡಿಕೊಳ್ಳಬಹುದು.


Also read: ನೀವು ಕ್ರೆಡಿಟ್​ ಕಾರ್ಡ್​ ಬಳಕೆದಾರರೆ? ಹಾಗಾದ್ರೆ ತಪ್ಪದೆ ಈ ಮಾಹಿತಿ ನೋಡಿ; ಹಣ ವಂಚನೆಯಾದರೆ ಸಿಗಲಿದೆ ಪರಿಹಾರ..

ಈ ತಂತ್ರಜ್ಞಾನದ ಇತರೆ ಉಪಯೋಗಗಳು:

ಎಟಿಎಂ ಬಳಕೆ ಮತ್ತು ಇಂಟರ್ನೆಟ್ ಬ್ಯಾಂಕಿಂಗ್​ನ್ನು ಕೂಡ ಈ ಆ್ಯಪ್ ಮೂಲಕ ಕೆಲ ಸಮಯದವರಗೆ ನಿರ್ಬಂಧಿಸಬಹುದು. mobile ಆ್ಯಪ್​ನಲ್ಲಿ ಮ್ಯಾನೇಜ್ ಕಾರ್ಡ್ ಎಂಬ ಆಯ್ಕೆಯನ್ನು ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಆನ್​ಲೈನ್ ಟ್ರಾನ್ಸಕ್ಷನ್, ಇಂಟರ್​ನ್ಯಾಷನಲ್ ಟ್ರಾನ್ಸಾಕ್ಷನ್ ಮತ್ತು ಎಟಿಎಂ ವಿತ್​ಡ್ರಾ ಮಾಡಿಕೊಳ್ಳುವ ಆಯ್ಕೆಯನ್ನು ಬ್ಲಾಕ್ ಮತ್ತು ಅನ್​ಬ್ಲಾಕ್ ಮಾಡಿಕೊಳ್ಳುವ ಆಯ್ಕೆಯನ್ನು ಕೂಡ ಮಾಡಬಹುದು.

ಕಳೆದುಕೊಂಡ ಕಾರ್ಡ್ ಸಂಪೂರ್ಣ ಬ್ಲಾಕ್ ಮಾಡಬಹುದೇ?


Also read: LIC ಪಾಲಸಿದಾರರ ಗಮನಕ್ಕೆ ಇನ್ನುಮುಂದೆ ಈ 111 ಪಾಲಸಿಗಳು ಇಲ್ಲ..

ಹೌದು ನೀವು ಕಾರ್ಡ್​ನ್ನು ಸಂಪೂರ್ಣ ಬ್ಲಾಕ್ ಮಾಡಲು ಬಯಸಿದ್ದರೆ ಅಲ್ಲಿಯೇ ಕೆಳಗೆ ‘Temp Block’ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಕಾರ್ಡ್​ನ ಬಳಕೆಯನ್ನು ಸ್ವಲ್ಪ ದಿನಗಳ ಮಟ್ಟಿಗೆ ಬ್ಲಾಕ್ ಮಾಡಿಕೊಳ್ಳಬಹುದು. ಇದರಿಂದ ಬ್ಯಾಂಕ್ ಕಾರ್ಡ್​ಗಳು ಕಾಣೆಯಾದರೆ ಶೀಘ್ರದಲ್ಲೇ ಅದನ್ನು ಬ್ಲಾಕ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ಸೇವೆಯು ಕೆಡ್ರಿಟ್ ಕಾರ್ಡ್​ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇದೇ ಮೊದಲನೆ ಬಾರಿಗಿ ಬ್ಯಾಂಕಿನ ಕ್ಷೇತ್ರದಲ್ಲಿ ಹೆಸರು ಮಾದುತ್ತಿದು ಸದ್ಯ ಇತರೆ ಬ್ಯಾಂಕ್-ಗಳು ಈ app ಬಳಕೆ ಮಾಡುವ ಸಾದ್ಯತೆ ಇದೆ.