ಎಟಿಎಂನಲ್ಲಿ ದುಡ್ಡು ತೆಗೆಯುತ್ತಿದ್ದ ವನಿತೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ವರ್ಷದಿಂದ ಪೊಲೀಸರಿಂದ ಬಚಾವಾಗಿ ತಿರುಗಾಡುತ್ತಿದ್ದ ಮಧೂಕರ್ ರೆಡ್ಡಿ ಆಂಧ್ರ ಪೊಲೀಸರಗೆ ಸೆರೆಯಾಗಿದ್ದ. ಈತ ಶೀಘ್ರದಲ್ಲೇ ಬೆಂಗಳೂರು ಪೊಲೀಸರ ಅತಿಥಿಯಾಗಲಿದ್ದಾನೆ.
ಮಧುಕರ್ ರೆಡ್ಡಿ ಅವರನ್ನು ವಾರೆಂಟ್ ಮೇಲೆ ಪಡೆಯಲು ಮೂರು ರಾಜ್ಯಗಳು ತಯಾರಿ ನಡೆಸಿದ್ದವು. ಈ ಬಗ್ಗೆ ಕರ್ನಾಟಕ ರಾಜ್ಯ ಪೊಲೀಸರು ಸಹ ವಿಚಾರಣೆಗೆ ಕೇಳಿಕೊಂಡಿದ್ದರು. ರಾಜ್ಯದ ಪೊಲೀಸರ ಮನವಿಗೆ ಮದನಪಲ್ಲಿ ಕೋರ್ಟ್ ಸಮ್ಮತಿ ಸೂಚಿಸಿದೆ.
ಇದರಿಂದ ಪೊಲೀಸರು ವಿಚಾರಣೆಗೆ ಬೇಕಾದ ತಯಾರಿಯನ್ನು ನಡೆಸಿದ್ದಾರೆ. ಫೆ. 28 ರಿಂದ 15 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲು ಮದನಪಲ್ಲಿ ಕೋರ್ಟ್ ಆದೇಶಿಸಿದೆ.
ಮಧುಕರ್ ವಶಕ್ಕೆ ಪಡೆಯಲು ಮೂರು ರಾಜ್ಯಗಳು ಪ್ರಯತ್ನ ನಡೆಸಿದ್ದವು. ಆದರೆ 2 ಕೊಲೆ, ಕೊಲೆಯತ್ನ ಪ್ರಕರಣಗಳ ಸಂಬಂಧ ಮಧುಕರ್ ರೆಡ್ಡಿ ಆಂಧ್ರ ಪೊಲೀಸರ ವಶವಾಗಿದ್ದ. ಆಂಧ್ರದಲ್ಲಿ ಮಧುಕರ ವಿಚಾರಣೆ ಮುಂದುವರೆದಿದ್ದು, ಈ ವೇಳೆ ಮಧುಕರ್ ತನೆಗ ಮಹಿಳೆಯರನ್ನು ಕಂಡ್ರೆ ಆಗದು. ನಾನು ಕೊಲೆ ಮಾಡಿರುವುದು ಮಹಿಳೆಯರನ್ನೆ ಎಂದು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.
ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣದ ಆರೋಪಿ ವಿಚಾರಣೆಯ ವೇಳೆ ಮತ್ತೇ ನು ಬಾಯಿ ಬಿಡುತ್ತಾನೋ ಎಂಬುದರ ಮೇಲೆ ಈಗ ರಾಜ್ಯದ ಜನರ ಚಿತ್ತ ನೆಟ್ಟಿದೆ. ನ್ಯಾಯಕ್ಕಾಗಿ ಅಂಗಲಾಚುತ್ತಿದ್ದ ನೊಂದ ಮಹಿಳೆಗೆ ಇನ್ನಾದರೂ ನ್ಯಾಯ ಸಿಗುತ್ತಾ ಎಂಬುದನ್ನು ಕಾಲವೇ ಉತ್ತರಿಸಲಿದೆ