ಗ್ರಾಹಕರೇ ಎಚ್ಚರ: ಈಗ ಎ.ಟಿ.ಎಂ.ನಿಂದಲೇ ಬರುತ್ತಿದೆ ಕಳ್ಳ ನೋಟು!!!

0
1145

ಭಷ್ಟಾಚಾರ ಹಾಗೂ ಕಪ್ಪು ಹಣವನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಕಳೆದ ವರ್ಷ ೫೦೦ ಹಾಗೂ ೧೦೦೦ ಮುಖಬೆಲೆಯನೋಟುಗಳನ್ನು ರದ್ದು ಮಾಡಿತ್ತು. ಅಲ್ಲದೆ ಹೊಸ ೫೦೦ ಮತ್ತು ೨೦೦೦ ರೂ. ನೋಟುಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಆದರೆಹೊಸ ೨೦೦೦ ರೂ. ನಕಲಿ ನೋಟುಗಳು ದೆಹಲಿಯ ಎಸ್‌ಬಿಐ ಎಟಿಎಂನಲ್ಲಿ ಪತ್ತೆಯಾಗಿವೆ.

Fake Note: Clearly says for Entertainment purposes only

ಈ ನೋಟಿನ ಮೇಲೆ ಚಿಲ್ಡ್ರನ್ ಬ್ಯಾಂಕ್ (Children’s bank of india) ಎಂದು ಬರೆಯಲಾಗಿದೆ. ಈ ಬಗ್ಗೆ ದೂರು ಬಂದ ಬಳಿಕಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ನಮ್ಮ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೆ ಹಣ ತೆಗೆದಾಗಲೂ ನಕಲಿ ನೋಟುಗಳುಪತ್ತೆಯಾಗಿವೆ.

ಘಟನೆ ಹಿನ್ನಲೆ: ಎಟಿಎಂನಿಂದ ನಕಲಿ ೨೦೦೦ ಮುಖಬೆಲೆಯ ನಾಲ್ಕು ನೋಟುಗಳು ಬಂದ ಕೂಡಲೇ ಗ್ರಾಹಕ, ಪೊಲೀಸ್ ಠಾಣೆಗೆದೂರು ನೀಡಿದ್ದಾನೆ. ಪೊಲೀಸರು ದೂರು ಪಡೆದು ಕೊಂಡ ಪೊಲೀಸರೊಂದಿಗೆ ದೂರದಾತ ಬಂದು ಮತ್ತೊಮ್ಮೆ ಹಣ ತೆಗೆದಾಗನಕಲಿ ನೋಟು ಬಂದಿದೆ.

Original Note

ನಕಲಿ ನೋಟು ಕಾಣಲು ಅಸಲಿ ಎಂತೆ ಕಂಡರೂ ಕೂಡ ಇದರಲ್ಲಿ ಕೆಲವು ಬದಲಾವಣೆಗಳನ್ನು ನೋಡಬಹುದಾಗಿದೆ.

೧- ಭಾರತೀಯ ರಿಸರ್ವ್ ಬ್ಯಾಂಕ್ ಬದಲು ಭಾರತೀಯ ಮನೋರಾಜನ್ ಬ್ಯಾಂಕ್

೨- ಅಸಲಿ ನೋಟ್‌ನಲ್ಲಿ ರೂ. ಚಿಹ್ನೆ, ಗವರ್ನರ್ ಹಸ್ತಾಕ್ಷರ ಇರುತ್ತದೆ. ನಕಲಿಯಲ್ಲಿ ಇಲ್ಲ.

೩- ಆರ್‌ಬಿಐ ಲಾಂಛನದ ಬಲದು, ನಕಲಿಯಲ್ಲಿ ಪಿ.ಕೆ ಲೋಗೋ ಹಾಕಲಾಗಿದೆ.

ಈ ಪ್ರಕರಣ ಫೆ.೬ರಂದು ಬೆಳಕಿಗೆ ಬಂದಿದೆ. ಆದರೆ ಈ ವರೆಗೂ ಮತ್ತೆ ಇಂತಹ ಪ್ರಕರಣಗಳು ದಾಖಲಾಗಿಲ್ಲ. ಚಿಲ್ಡ್ರನ್ ಬ್ಯಾಂಕ್ಎಂಬ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ನೋಟುಗಳು ಬಂದಿವೆ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳುಮಾಧ್ಯಮಕ್ಕೆ ಮಾಹೀತಿ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಎಸ್‌ಬಿಐ ಸಹ ತಂಡವನ್ನು ರಚಿಸಿದೆ.