ಇನ್ಮೇಲೆ ATM ಮುಂದೆ ನಿಲ್ಲುವ ಬದಲು ಪೆಟ್ರೋಲ್ ಬಂಕ್ ಮುಂದೆ ನಿಲ್ಲಬಹುದು !! ಯಾಕ್ ಅಂದ್ರೆ…?

0
1290

ಬ್ಯಾಂಕ್, ಎ.ಟಿ.ಎಂ., ಪೋಸ್ಟ್ ಆಫೀಸ್ ಗಳಲ್ಲಿ ಹಣ ಪಡೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಕಳೆದ 8 ದಿನಗಳಿಂದ ಜನ ತೊಂದರೆಗೆ ಒಳಗಾಗಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ, ಪೆಟ್ರೋಲ್ ಬಂಕ್ ಗಳಲ್ಲಿಯೂ ಹಣ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಗಳೊಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.

ನೋಟು ರದ್ದಿನ ಪರಿಣಾಮ ಬ್ಯಾಂಕ್,ಎಟಿಎಂ ಹಾಗೂ ಅಂಚೆ ಕಚೇರಿಗಳಲ್ಲಿ ಸರದಿ ಸಾಲುಗಳನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಮತ್ತೊಂದು ವಿನೂತನ ಸೌಲಭ್ಯ ಒದಗಿಸಿದೆ. ಗ್ರಾಹಕರು ಪೆಟ್ರೊಲ್ ಬಂಕ್’ಗಳಲ್ಲಿ ಕ್ರೆಡಿಟ್ ಕಾರ್ಡ್. ಡೆಬಿಟ್ ಕಾರ್ಡ್’ಗಳ ಸ್ವೈಪ್ ಮಾಡುವ ಮೂಲಕ ಹೊಸ ನೋಟುಗಳು ಅಥವಾ ನೂರರ ನೋಟುಗಳನ್ನು ಪಡೆಯಬಹುದು.

ಕಾರ್ಡ್ ಸ್ವೈಪ್ ಮಾಡಿ 100 ರೂ. ನೋಟು ಇಲ್ಲವೇ, ಹೊಸ ನೋಟು ಪಡೆದುಕೊಳ್ಳಲು ಅವಕಾಶವಿದ್ದು, ದಿನಕ್ಕೆ ಒಬ್ಬರಿಗೆ 2000 ರೂ. ಮಾತ್ರ ನೀಡಲಾಗುತ್ತದೆ. ಈ ಸೇವೆ ಒದಗಿಸಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ., ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಗಳೊಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.

ಸೌಲಭ್ಯವು ನ.24 ರಿಂದ ಆರಂಭವಾಗಲಿದ್ದು, ಮೊದಲಿಗೆ ಆಯ್ದ 2500 ಪೆಟ್ರೋಲ್ ಬಂಕ್ ಗಳಲ್ಲಿ ಈ ಸೌಲಭ್ಯ ಕಲ್ಪಿಸಲಿದ್ದು, ನಂತರದಲ್ಲಿ 20,000 ಪೆಟ್ರೋಲ್ ಬಂಕ್ ಗಳಿಗೆ ವಿಸ್ತರಿಸಲಾಗುವುದು. ಅಲ್ಲದೆ ರದ್ದಾದ ನೋಟುಗಳನ್ನು ಪೆಟ್ರೋಲ್ ಬಂಕ್’ಗಳಲ್ಲಿ ನ.24ರವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ.