ಮತ್ತೊಮ್ಮೆ ಕರ್ನಾಟಕದಲ್ಲಿ ಹಿಂದುತ್ವ ಕಾರ್ಯಕರ್ತನ ಮೇಲೆ ಹಲ್ಲೆ? ಏನಾಗುತ್ತಿದ್ದೆ ನಮ್ಮ ರಾಜ್ಯದಲ್ಲಿ??

0
481

ಈ ನಡುವೆ ಹತ್ಯೆ ಮಾಡುವುದೆಂದರು ಜನರಿಗೆ ನೀರು ಕುಡಿದಷ್ಟು ಸುಲಭವಾಗಿ ಬಿಟ್ಟಿದೆ, ಇದು ಸರ್ಕಾರದ ವೈಫಲ್ಯವೋ ಅಥವಾ ಪೊಲೀಸ್ ಇಲಾಖೆಯ ಅಸಾಮರ್ಥ್ಯವೋ ಗೊತ್ತಿಲ್ಲ, ಆದರೆ ಇದರಿಂದ ಕರ್ನಾಟಕದಲ್ಲಿ ಸಾಮಾನ್ಯ ಜನ ಮಾತ್ರ ಭಯದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ.

ಕೆಲ ದಿನಗಳ ಹಿಂದೆ ಕುಮುಟಾದಲ್ಲಿ ಹಿಂದೂ ಕಾರ್ಯಕರ್ತನ ಸಾವಿನ ವಿಷಯ ಕಾರವಾರ ಜಿಲ್ಲೆಯಾದ್ಯಂತ ಭಾರಿ ಕೋಲಾಹಲವನ್ನು ಸೃಷ್ಟಿಸಿತ್ತು, ಪ್ರತಿಭಟನಾಕಾರರು ಪೋಲೀಸರ ಮೇಲೆ ಹಲ್ಲೆ ಮಾಡಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದರು. ಇದಾದ ನಂತರ ಮೊನ್ನೆತಾನೆ, ಅಂತಹುದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿತ್ತು. ದೀಪಕ್ ರಾವ್ ಎಂಬ ಹುಡುಗನ ಮೇಲೆ ಹಲ್ಲೆ ಮಾಡಿ ದುಷ್ಕರ್ಮಿಗಳು ಅವರನ್ನು ಹತ್ಯೆಮಾಡಿದ್ದರು. ಈ ಸಾವಿನ ಸುದ್ದಿ ತಣ್ಣಗಾಗುವಷ್ಟರಲ್ಲಿಯೇ ಮತ್ತೊಂದು ಘಟನೆ ನಡೆದಿದೆ, ಅದು ಸಹ ಮಂಗಳೂರಿನಲ್ಲಿಯೇ.

ದೀಪಕ್ ರಾವ್ ಹತ್ಯೆಯ ಬಳಿಕ ನಿನ್ನೆ ರಾತ್ರಿ ಸುಮಾರು 8 ಗಂಟೆಗೆ ಹಿಂದೂ ಜಾಗರಣ ವೇದಿಕೆಯ ನಾಯಕರೊಬ್ಬರ ಮೇಲೆ ಹತ್ಯೆಗೆ ವಿಫಲ ಯತ್ನ ನಡೆದಿದೆ. ತಮ್ಮ ಬೈಕಿನಲ್ಲಿ ರಾತ್ರಿ ಮನೆಗೆ ಮರಳುತ್ತಿದ್ದ ಹಿಂದೂ ಜಾಗರಣ ವೇದಿಕೆಯ ನಾಯಕ ಭರತ್ ಅಗರಮೇಲು ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಹತ್ಯೆಗೆ ಯತ್ನಿಸಿದ್ದಾರೆ, ಹೇಗೂ ಅದೃಷ್ಟವಶಾತ್ ಭರತ್ ಅವರು ಅಲ್ಲಿಂದ ಪರಾರಿಯಾಗಲು ಯಶಸ್ವಿಯಾಗಿದ್ದಾರೆ.

ಭರತ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಮರಳುವಾಗ, ದೂರದಿಂದಲೇ ಗಾಡಿಯ ಹೆಡ್-ಲೈಟ್ ಬೆಳಕಿನಿಂದ ನಾಲ್ಕು ಜನ ದುಷ್ಕರ್ಮಿಗಳು ತಲ್ವಾರ್-ಗಳನ್ನು ಹಿಡಿದು ತಮ್ಮತ್ತ ನುಗ್ಗುತಿರುವುದನ್ನು ಗಮನಿಸಿದ ತಕ್ಷಣ, ಗಾಡಿಯನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿ ತಪ್ಪಿಸಿಕೊಡಿದ್ದಾರೆ, ನಂತರ ನಡೆದ ಘಟನೆಯನ್ನು ಸುರತ್ಕಲ್ ಪೊಲೀಸರಿಗೆ ವಿವರಿಸಿ ದೊರನ್ನು ದಾಖಲಿಸಿದ್ದಾರೆ.

ಭರತ್ ಅಗರಮೇಲು ದೂರನ್ನು ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು, ತಕ್ಷಣ ಕಾರ್ಯ ಪ್ರವೃತ್ತರಾಗಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿ, ಮಾಹಿತಿ ಮತ್ತು ದುಷ್ಕರ್ಮಿಗಳ ಸುಳಿವನ್ನು ಪತ್ತೆಹಚ್ಚಲು ಯತ್ನಿಸಿದ್ದಾರೆ. ಸುರತ್ಕಲ್ ಪೊಲೀಸರಿಗೆ ಇನ್ನು ಈ ಘಟನೆಯ ಬಗ್ಗೆ ಯಾವುದೇ ರೀತಿಯ ಲೀಡ್ ಸಿಕ್ಕಿಲ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ, ಅದು ನಡು ಬೀದಿಯಲ್ಲಿ ಇಷ್ಟು ಹತ್ಯೆಗಳು ಮತ್ತು ಹತ್ಯೆ ಯತ್ನಗಳು ನಡೆಯುತ್ತಿದ್ದರು ಸರಕಾರ ಮತ್ತು ಜನಪ್ರತಿನಿಧಿಗಳೇನು ಕಣ್ಣು ಮುಚ್ಚಿಕುಳಿತ್ತಿದ್ದಾರೆಯೇ ಎಂಬುದು ವಿಪಕ್ಷ ಹಾಗು ಇಲ್ಲಿನ ಜನರ ಪ್ರಶ್ನೆಯಾಗಿದೆ.