ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ; ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿ ಸಾಹಸ ತೋರಿದ ಬಾಲಕರಿಗೆ ವಿಶೇಷ ಗೌರವ..

0
317

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಾನೆ ಇವೆ. ಹಾಗೆಯೇ ದಿನನಿತ್ಯವೂ ಅಪ್ರಾಪ್ತ ಬಾಲಕಿಯರಿಂದ ಹಿಡಿದು ವೃದ್ದರ ಮೇಲಿವೂ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಾನೆ ಇವೆ. ಆದರೆ ಇಲ್ಲಿವರಿಗೂ ಅತ್ಯಾಚಾರ ಮಾಡಿದ ಯಾರಿಗೂ ಸರಿಯಾದ ಶಿಕ್ಷೆ ಆಗುತ್ತಿಲ್ಲ ಎನ್ನುವುದು ಒಂದು ದೊಡ್ಡ ದುರಂತವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಕೆಲವೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರು ಮುಂದೆ ಬಂದು ಆರೋಪಿಗಳನ್ನು ಹಿಡಿಯಲು ಸಹಾಯ ಮಾಡುತ್ತಿಲ್ಲ ಎನ್ನುವುದು ಇನ್ನೊಂದು ದುರಂತವಾಗಿದೆ. ಕೆಲವರಂತೂ ಕಣ್ಣ ಮುಂದೆ ನಡೆದರೂ ನೋಡಿ ಮಜ್ಜಾ ತೆಗೆದುಕೊಳ್ಳುವ ಜನರು ಹೆಚ್ಚಾಗಿದ್ದಾರೆ ಆದರೆ ಇಂತಹ ಘಟನೆಗಳಿಗೆ ಸಣ್ಣ ವಯಸ್ಸಿನ ಬಾಲಕರು ಮುಂದೆ ಬಂದು ಸಾಕ್ಷಿ ಹೇಳುವಲ್ಲಿ ಸಹಾಯ ಮಾಡುತ್ತಿದ್ದಾರೆ ಎನ್ನುವುದು ಕೇಳಿ ಬರುತ್ತಿದೆ.

ಅಂತಹದೇ ಒಂದು ಘಟನೆ ನಡೆದಿದ್ದು, ಕ್ರಿಕೆಟ್​ ಆಡುತ್ತಿದ್ದ ನಾಲ್ವರು ಬಾಲಕರು ಅತ್ಯಾಚಾರ ನಡೆಯುವುದನ್ನು ತಡೆದು ಪೊಲೀಸರ ಗೌರವಕ್ಕೆ ಪಾತ್ರರಾಗಿದ್ದಾರೆ. ಹೌದು ರಾಜಸ್ಥಾನದ ಜೈಪುರದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರುವುದನ್ನು ಖಂಡಿಸಿ ಹಿಂಸಾಚಾರ ನಡೆದಿದ್ದು, ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಇಂಟರ್​ನೆಟ್​ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಈ ಅತ್ಯಾಚಾರ ಘಟನೆ ಮಾಸುವ ಮುನ್ನವೇ ಅಂತಹದೇ ಒಂದು ಅತ್ಯಾಚಾರ ನಡೆಯುವುದನ್ನು ಬಾಲಕರು ತಡೆದಿದ್ದಾರೆ.

ಏನಿದು ಘಟನೆ?

ಜೈಪುರದ ಜವಾಹರ್​ ನಗರ ಕಚ್ಚಿ ಬಸ್ತಿಯ ನಿವಾಸಿಗಳಾದ ಮನೀಷ್​ (15), ಅಮಿತ್​ (18), ರೋಹಿತ್​ (18) ಮತ್ತು ಬಾದಲ್​ (14) ಎಂಬುವವರು ಗುರುವಾರ ಕ್ರಿಕೆಟ್​ ಆಡುತ್ತಿದ್ದರು. ಈ ವೇಳೆ ಮೈದಾನದ ಸಮೀಪದಲ್ಲಿರುವ ಸಣ್ಣ ಗುಡ್ಡದ ಹಿಂಭಾಗದಿಂದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಮೊರೆಯಿಡುತ್ತಿರುವುದು ಕೇಳಿದೆ. ತಕ್ಷಣ ಬಾಲಕರು ಬಾಲಕಿಯ ಕೂಗಾಟ ಕೇಳಿ ಬಂದ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ತಕ್ಷಣ ಜಾಗೃತರಾದ ಬಾಲಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಬಾಲಕಿಯನ್ನು ರಕ್ಷಿಸಿದ್ದಾರೆ.

ರಾಜಸ್ಥಾನ ಪೊಲೀಸರು ಬಾಲಕರ ಧೈರ್ಯ, ಸಾಹಸವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಾಲಕರಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಎಡಿಜಿಪಿ ಬಿ.ಕೆ ಸೋನಿ ಯುವಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಯುವಕರ ಈ ಕೆಲಸವನ್ನು ಎಲ್ಲರೂ ಮಾಡಬೇಕು. ದೇಶದ ಪ್ರಜೆಯಾಗಿ ಯುವಕರು ತಮ್ಮ ಕೆಲಸವನ್ನು ಮಾಡಿದ್ದಾರೆ. ಆ ಯುವಕರ ಭವಿಷ್ಯಕ್ಕೆ ನಾನು ಶುಭ ಕೋರುತ್ತೇನೆ” ಎಂದು ತಿಳಿಸಿದ್ದಾರೆ. ಇದೆ ರೀತಿಯ ಮನೋಭಾವನೆ ಎಲ್ಲರಲ್ಲೂ ಇದ್ದರೆ ಸಮಾಜಕ್ಕೆ ಪಿಡುಗಾದ ಅತ್ಯಾಚಾರವನ್ನು ತಡೆಗಟ್ಟಬಹುದು. ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.