ಮಂಡ್ಯದ ಚುನಾವಣೆಯಲ್ಲಿ ಹಣದ ಸದ್ದು; ಜೆಡಿಎಸ್ ನಿಂದ ಚುನಾವಣೆಗೆ 150 ಕೋಟಿ ಹಂಚಿಕೆ? ಜೆಡಿಎಸ್ ಕಾರ್ಯಕರ್ತರ ಆಡಿಯೋ ಲೀಕ್..

0
130

ಮಂಡ್ಯದ ರಾಜಕೀಯದಲ್ಲಿ ಮತ್ತೊಂದು ಸ್ಪೋಟಕ ಸುದ್ದಿ ಕೇಳಿಬರುತ್ತಿದೆ. ಮುಖ್ಯಮಂತ್ರಿಯವರ ಮಗ ನಿಖಿಲ್ ಅವರನ್ನು ಗೆಲ್ಲಿಸಲು ಮಂಡ್ಯಕ್ಕೆ ಹಣ ಹೊಳೆ ಹರಿಯುತ್ತಿದೆ. ಎನ್ನುವ ಆಡಿಯೋ ಹೊರಬಿದಿದ್ದು ಬಾರಿ ಚರ್ಚೆ ನಡೆಯುತ್ತಿದೆ. ಸಂಸದ ಎಲ್ ಆರ್ ಶಿವರಾಮೇಗೌಡ ಮಗ ಚೇತನ್ ಗೌಡ ಅವರು, ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ರಾಜಕೀಯದಲ್ಲಿ ಬಾರಿ ಸುದ್ದಿ ಎಬ್ಬಿಸಿದೆ.

Also read: ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಬೇಸತ್ತು ಮಂಡ್ಯ ಕಾಂಗ್ರೆಸ್ ನಾಯಕರು ಸುಮಲತಾಗೆ ಬಹಿರಂಗ ಬೆಂಬಲ?? ನಿಖಿಲ್ ಗತಿ??

ಹೌದು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ದ ಗೆಲುವ ಸಾಧಿಸಲು ಹಲವು ಮಸಲತ್ತು ನಡೆಯುತ್ತಿದೆ. ಅದರಲ್ಲಿ ಹಣ ಹಂಚಿಕೆಯು ಕೂಡ ನಡೆಯುತ್ತಿದೆ. ಎನ್ನುವ ಮಾತುಗಳು ವಿರೋಧ ಪಕ್ಷಗಳಲ್ಲಿ ಕೇಳಿ ಬರುತ್ತಿದವು. ಅದೇ ಸಂದೇಹದಲ್ಲಿ ಕಳೆದ 15 ದಿನಗಳಿಂದ ಕೈ ನಾಯಕರ ಮತ್ತು ಜೆಡಿಎಸ್ ನಾಯಕರ ಮನೆ ಮತ್ತು ಕಛೇರಿಯ ಮೇಲೆ ಐಟಿ ದಾಳಿ ನಡೆದಿತ್ತು. ಇದರಲ್ಲಿ ರೇವಣ್ಣನವರ ಆಪ್ತರ ಮನೆಯ ಮೇಲೆ ಕೂಡ ದಾಳಿಯಾಗಿತ್ತು ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು ರಸ್ತೆಗಿಳಿದು ಐಟಿ ವಿರುದ್ದ ಹೋರಾಟ ನಡೆಸಿದರು.
ಆದರೆ ಅದೇ ಸುದ್ದಿ ನಿಜವೆನ್ನುವ ರೀತಿಯಲ್ಲಿ ಮಂಡ್ಯದಲ್ಲಿ ಮತ್ತೊಂದು ಬೆಳೆವಣಿಗೆ ಎದ್ದು ಕಾಣುತ್ತಿದ್ದು. ಸಂಸದ ಎಲ್ ಆರ್ ಶಿವರಾಮೇಗೌಡ ಮಗ ಚೇತನ್ ಗೌಡ ಅವರು, ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು.

ಏನಿದು ಆಡಿಯೋ?

Also read: ಮೈತ್ರಿಯಲ್ಲಿ ಮತ್ತೊಂದು ಆಘಾತ; ಜೆಡಿಎಸ್ ಸಭೆಯಲ್ಲಿ ಪ್ರಧಾನಿ ಮೋದಿಗೆ ಜೈಕಾರ ಕೂಗಿದ ದಳ ಕಾರ್ಯಕರ್ತರು..

ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇ ಬೇಕು ಎಂದು ತೀರ್ಮಾನಿಸಿರುವ ಜೆಡಿಎಸ್ ವರಿಷ್ಠರು, ಮಗನ ಗೆಲುವಿಗಾಗಿ 150 ಕೋಟಿ ಖರ್ಚು ಮಾಡಲು ಹೊರಟಿದ್ದಾರೆ. ಪ್ರತಿ ಬೂತ್ ಗೂ 5 ಲಕ್ಷ ಖರ್ಚು ಮಾಡಲಾಗುತ್ತದೆ. ಜೊತೆಗೆ ಮತದಾನದಂದು ಮಟನ್ ಊಟ ಹಾಕಿಸಲಾಗುತ್ತದೆ ಎಂದು ಆಡಿಯೋದಲ್ಲಿ ಮಾತನಾಡಿರುವುದು ವೈರಲ್ ಆಗಿದೆ. ಇದನ್ನು ವಿಷಯವನ್ನು ಸಂಸದ ಎಲ್ ಆರ್ ಶಿವರಾಮೇಗೌಡ ಮಗ ಚೇತನ್ ಗೌಡ ಅವರು, ಜೆಡಿಎಸ್ ಕಾರ್ಯಕರ್ತ ಪಿ ರಮೇಶ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎನ್ನುವುದು ತಿಳಿದು ಬಂದಿದೆ.

ಆಡಿಯೋದಲ್ಲಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ 5 ಲಕ್ಷ ರೂ.ವರೆಗೆ ಖರ್ಚು ಮಾಡಲು ಈ ಆಡಿಯೋದಲ್ಲಿ ಸಂಭಾಷಣೆ ನಡೆದಿದೆ. ಆದರೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವರಾಮೇಗೌಡರು, ಇದರಲ್ಲಿರುವುದು ನನ್ನ ಮಗನ ಧ್ವನಿಯಲ್ಲ, ಇದು ವಿರೋಧಿಗಳ ಕುತಂತ್ರ, ಹಣ ಕರ್ಚು ಮಾಡಿ ಗೆಲ್ಲುವುದು ಸಾಧ್ಯವಿದ್ದರೆ ಎಲ್ಲರು ಗೆಲ್ಲುತ್ತಿದ್ದರು. ಇದು ವಿರೋಧ ಪಕ್ಷಗಳು ಮಾಡಿರುವ ಸುಳ್ಳು ಆರೋಪ. ಸ್ವತಂತ್ರ ಅಭ್ಯರ್ಥಿ ಸಿನಿಮಾ ಕ್ಷೇತ್ರದಿಂದ ಬಂದವರು .ಅವರಿಗೆ ಮಿಮಿಕ್ರಿ, ನಕಲಿ ದ್ವನಿ ಮಾಡುವುದು ಕಷ್ಟದ ಕೆಲಸವಲ್ಲ ಆದರೆ ನಾನು ನೇರವಾಗಿ ಯಾರ ಮೇಲೂ ಆರೋಪ ಮಾಡಲ್ಲ. ಚುನಾವಣೆಯೊಳಗೆ ಇನ್ನೂ ಎಷ್ಟು ಆಡಿಯೋ ಹೊರಬರಬೇಕೋ ಬರಲಿ. ನನ್ನ ಮಗನಿಗೆ ನೇರವಾಗಿ ಆರೋಪ ಹೊರಸಿ, ಆತನಿಗೂ ಅವಮಾನ ಮಾಡಲಾಗುತ್ತಿದೆ, ಅಂದು ಹೇಳಿದ್ದಾರೆ.