ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಕೆಜಿಎಫ್ ಸಿನಿಮಾದ ಭಾಗ 2 ರಲ್ಲಿ ಸಾಮಾನ್ಯರಿಗೂ ನಟಿಸುವ ಅವಕಾಶ, ಆಡಿಶನ್ ವಿವರ ಇಲ್ಲಿದೆ ನೋಡಿ!!

0
527

ಕೆಜಿಎಫ್ ಚಿತ್ರದಲ್ಲಿ ನೀವೂ ನಟಿಸಬಹುದು:
ಕನ್ನಡ ಚಿತ್ರರಂಗವನ್ನೇ ಎತ್ತರಕ್ಕೆರಿಸಿ ಇತಿಹಾಸ ಬರೆದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಕೆಜಿಎಫ್ ಸಿನಿಮಾ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿವೂ ಜನ ಮನ್ನಣೆ ಪಡೆದುಕೊಂಡಿದೆ. ಚಾಪ್ಟರ್ ಒಂದರಲ್ಲಿ ಸುಮಾರು 200 ಕೋಟಿಗೂ ಹೆಚ್ಚು ಹಣ ಗಳಿಸಿರುವ ಕೆಜಿಎಪ್ ಚಾಪ್ಟರ್ 2 ಗೆ ರೆಡಿಯಾಗುತ್ತಿದೆ. ಈ ಬೆನ್ನೆಲೆಯಲ್ಲಿ ಜನಸಾಮಾನ್ಯರಿಗೂ ನಟಿಸುವ ಅವಕಾಶವನ್ನು ಚಿತ್ರತಂಡ ವದಗಿಸಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಆಡಿಷನ್​ ನಡೆಯಲಿದ್ದು ಇದರಲ್ಲಿ ಯಾರು ಬೇಕಾದರೂ ಬಾಗವಹಿಸಿ ಚಿತ್ರದಲ್ಲಿ ನಟಿಸಬಹುದು.

ಹೌದು ಕೆ.ಜಿ.ಎಫ್ ಚಾಪ್ಟರ್ 1’ರ ಪ್ರದರ್ಶನ ಯಶಸ್ವಿಯಾಗಿದ್ದು ಇದರ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಚಿತ್ರದ ಮುಹೂರ್ತ ನಡೆದಾಗ ಚಿತ್ರೀಕರಣ ಯಾವಾಗ ಆರಂಭವಾಗುತ್ತೋ ಅಂತ ಕಾಯುತ್ತಿದ್ದರು. ಅವರಿಗಾಗಿ ಈಗ ಹೊಂಬಾಳೆ ಫಿಲ್ಮ್ಸ್​ ಒಂದು ಸಿಹಿ ಸುದ್ದಿ ನೀಡಿದೆ. ಸಿನಿಮಾ ನೋಡಲು ಕಾಯುತ್ತಿದ್ದರು ಈಗ ಚಿತ್ರದಲ್ಲೇ ತೆರೆ ಮೇಲೆ ಕಾಣಿಸಿಕೊಳ್ಳವ ಅವಕಾಶವನ್ನು ನೀಡಿದೆ.
ಪ್ರಶಾಂತ್ ನೀಲ್​ ನಿರ್ದೇಶಿಸಿ, ಯಶ್​ ನಾಯಕನಾಗಿ ಅಭಿನಯಿಸಿರುವ ಕೆಜಿಎಫ್​ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ತೆರೆ ಕಾಣುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ನಿರ್ಮಿಸಿರುವ ಕೆಜಿಎಫ್​ ಸಿನಿಮಾ ಬಗ್ಗೆ ರಾಷ್ಟ್ರಮಟ್ಟದಲ್ಲೂ ಮೆಚ್ಚುಗೆಗಳು ಪಡೆದಿದೆ. ಶಾರುಖ್​ ಖಾನ್​ ನಟನೆಯ ಝೀರೋ ಸಿನಿಮಾ ಜೊತೆಗೇ ತೆರೆಗೆ ಬಂದ ಕೆಜಿಎಫ್​ ಬಾಲಿವುಡ್​ ಸ್ಟಾರ್​ ಸಿನಿಮಾವನ್ನು ಹಿಂದಿಕ್ಕಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಈಗಾಗಲೇ ಈ ಸಿನಿಮಾದ ತಯಾರಿ ನಡೆಯುತ್ತಿದ್ದು. ಇದೇ ಶುಕ್ರವಾರ ಅಂದರೆ ಏ.26ರಂದು ಆಡಿಷನ್ ನಡೆಯುತ್ತಿದೆ.

ಇದರಲ್ಲಿ 8ರಿಂದ 16 ವರ್ಷದ ಬಾಲಕರು ಮತ್ತು 25 ದಾಟಿದ ಪುರುಷರು ಈ ಆಡಿಷನ್‍ನಲ್ಲಿ ಭಾಗವಹಿಸಬಹುದು. ಮಲ್ಲೇಶ್ವರಂನ ಜಿ.ಎಂ. ರಿಜಾಯ್ಸ್​ ಡಿಜಿಟಲ್​ ಆಡಿಟೋರಿಯಂನಲ್ಲಿ ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿರುವ ಆಡಿಷನ್​ನಲ್ಲಿ ಒಂದು ನಿಮಿಷ ಹೇಳಬಹುದಾದಷ್ಟು ಸಂಭಾಷಣೆಯೊಂದಿಗೆ ಆಸಕ್ತರು ಹೋಗಬೇಕು. ನಂತರ ಅದನ್ನು ಕೆ.ಜಿ.ಎಫ್​’ ತಂಡದ ಮುಂದೆ ಅಭಿನಯಿಸಿ ತೋರಿಸಬೇಕು. ಈ ಸಿನಿಮಾದ ವಿಶೇಷತೆ ಅಂದರೆ ವಿಜಯ್​ ಚಾಪ್ಟರ್ 1 ರಲ್ಲಿ ಕಾಣಿಸಿಕೊಂಡ ಯಶ್​ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದರು. ಉಳಿದಂತೆ, ಅಚ್ಯುತ್​ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್, ವಸಿಷ್ಠ ಸಿಂಹ, ಅರ್ಚನಾ ಜೋಯಿಸ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

‘ಚಾಪ್ಟರ್​ 2’ನಲ್ಲಿ ರಾಕಿಂಗ್​ ಸ್ಟಾರ್ ಯಶ್​ ಜತೆಗೆ ಬಾಲಿವುಡ್​ ತಾರೆಯರಾದ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ಸಹ ನಟಿಸಲಿದ್ದಾರೆ ಅನ್ನೋ ಸುದ್ದಿ ಇದೆ. ಇಂತಹ ದೊಡ್ಡ ನಟರ ಜೊತೆಗೆ ನೀವೂ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶವನ್ನು ನಿಮಗೂ ಸಿಗಬಹುದು. ಅದಕ್ಕಾಗಿ ಈ ಚಿತ್ರತಂಡ ‘ಕೆ.ಜಿ.ಎಫ್. ಚಾಪ್ಟರ್-2’ ಯಾವಾಗ ಅಂತ ಕಾಯುತ್ತಿದ್ದವರಿಗೂ ಸಿಹಿ ಸುದ್ದಿ ಇದೆ ಎಂದು ಹೇಳಿದ್ದು ಇದೆ ಕಾರಣಕ್ಕೆ ಅನಿಸುತ್ತೆ. ಈ ಚಿತ್ರದ ಚಿತ್ರೀಕರಣದ ಮೇ ತಿಂಗಳಿನಲ್ಲಿ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನಿಮಗೂ ಈ ಸಿನಿಮಾದಲ್ಲಿ ನಟಿಸುವ ಹಂಬಲವಿದ್ದರೆ ಅಡಿಶನ್-ನಲ್ಲಿ ಭಾಗವಹಿಸಿ. ಸ್ಥಳ: ಜಿಎಂ ರೆಜಾಯ್ಸ್ 8 ನೇ ಅಡ್ಡರಸ್ತೆ, 8 ನೇ ಮೇನ್, ಮಲ್ಲೇಶ್ವರಂ, ಬೆಂಗಳೂರು.