ಹೃದಯ ಚಿಕಿತ್ಸೆಗಾಗಿ ಬಂದು ಆಟೋದಲ್ಲೇ 10 ಲಕ್ಷ ಹಣ ಮರೆತು ಹೋದ ವಿದೇಶಿ ಪ್ರಜೆ; ಹಣವನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.!

0
1580

ಜೇಬಲ್ಲಿರುವ ಹಣ, ಮೈಮೇಲೆರಿವ ಒಡವೆಗಳನ್ನೇ ಎಗರಿಸುವ ಕಾಲದಲ್ಲಿ ಹತ್ತು ಲಕ್ಷ- ಲಕ್ಷ ಹಣ ಸಿಕ್ಕರೆ ಯಾರಾದರು ಬಿಡುತ್ತಾರ? ಒಂದು ವೇಳೆ ನಿಮಗೂ ಸಿಕ್ಕರೂ ಒಳ್ಳೆಯ ಯೋಚನೆಗಿಂತ ದೂರಾಲೋಚನೆಯಗಳೇ ಹೆಚ್ಚು ಬರುತ್ತೇವೆ. ಏಕೆಂದರೆ ಅದೆಲ್ಲ ಹಣದ ಮಹಿಯೇ ಹಾಗೇ ಎಂದು ಹಲವರು ಮಾತನಾಡುತ್ತಾರೆ. ಇಂತಹ ಕಾಲದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದ್ದು, ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 10 ಲಕ್ಷ ರು. ಹಣವನ್ನು ಹಿಂತಿರುಗಿಸುವ ಮೂಲಕ ಬೆಂಗಳೂರು ಆಟೋ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದು, ಭಾರಿ ಸುದ್ದಿಯಲ್ಲಿದ್ದಾನೆ.

ಹೌದು ಅವಕಾಶ ಸಿಕ್ಕರೆ ದೇವರ ಹುಂಡಿಗೆ ಕೈ ಹಾಕುವ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ತೋರಿದ ಮಾನವಿತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವೆಂದರೆ ಸಿಲಿಕಾನ್ ಸಿಟಿಯಲ್ಲಿ ಹೃದಯ ಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ ದೂರದ ಮಾಲ್ದೀವ್ಸ್ ದೇಶದಿಂದ ಬಂದಿದ್ದ ಪ್ರಜೆಯೊಬ್ಬನ ಹಣ ಇದಾಗಿತ್ತು. ಮಾಲ್ದೀವ್ಸ್ ನಲ್ಲಿ ನೆಲೆಸಿರುವ ಡಾ. ಎಂ. ಆರ್ ಭಾಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದು ಹೊರಟಾಗ ಹಣವನ್ನು ಆಟೋದಲ್ಲೇ ಬಿಟ್ಟು ಹೋಗೊದ್ದರು. ಇದನ್ನು ಗಮನಿಸಿದ ಆಟೋ ಚಾಲಕ ರಮೇಶ್​ ಬಾಬು ನಾಯಕ್ಆ ಭಾರೀ ಮೊತ್ತದ ಹಣವನ್ನು ಶೇಷಾದ್ರಿಪುರಂ ಇನ್ಸ್​ಪೆಕ್ಟರ್​​​ ಸಂಜೀವ್​ಗೌಡರಿಗೆ ತಂದುಕೊಟ್ಟಿದ್ದಾರೆ.

ಭಾಸ್ಕರ್ ತಾವು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯಲು ಮಾಲ್ದೀವ್ಸ್ ನಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಂದಿದ್ದಾರೆ. ಶೇಷಾದ್ರಿಪುರಂ ಠಾಣಾ ವ್ಯಾಪ್ತಿಯ ಹೊಟೆಲ್​​ ಒಂದರಲ್ಲಿಉ ಉಳಿದುಕೊಂಡಿದ್ದ ಅವರು ಅಲ್ಲಿಂದ ಆಸ್ಪತ್ರೆಗೆ ತೆರಳಿ ಚೆಕ ಪ್ ಮಾಡಿಸಿಕೊಂಡಿದ್ದಾರೆ. ಬಳಿಕ ಆಟೋ ಹತ್ತಿ ಹೋಟೆಲ್ ಗೆ ಹಿಂತಿರುಗಿದ್ದಾರೆ. ಆ ಸಮಯ ಚಿಕಿತ್ಸೆಗಾಗಿ ಇರಿಸಿಕೊಂಡಿದ್ದ 12 ಸಾವಿರ ಅಮೇರಿಕ ಡಾಲರ್​ ಮತ್ತು 1.5 ಲಕ್ಷ ದಷ್ಟು ಭಾರತೀಯ ರೂಪಾಯಿಗಳನ್ನು ಆಟೋದಲ್ಲೇ ಮರೆತು ಹೋಗಿದ್ದಾರೆ.

ಆಟೋದಲ್ಲಿ ಭಾರೀ ಮೊತ್ತದ ಹಣವಿರುವುದನ್ನು ಕಂಡ ಆಟೋ ಚಾಲಕ ರಮೇಶ್​ ಬಾಬು ಅದನ್ನು ಶೇಷಾದ್ರಿಪುರ ಪೋಲೀಸರಿಗೆ ತಂದೊಪ್ಪಿಸಿದ್ದಾನೆ. ಪೋಲೀಸರು ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿದ್ದಲ್ಲದೆ ಆತನಿಗೆ 2ಸಾವಿರ ನಗದು ನೀಡಿ ಗೌರವಿಸಿದ್ದಾರೆ. ಇದಲ್ಲದೆ ಭಾರೀ ಮೊತ್ತದ ಹಣ ಹಿಂತಿರುಗಿಸಿದ್ದಕ್ಕಾಗಿ ಭಾಸ್ಕರ್ ಸಹ ಆಟೋ ಚಾಲಕನಿಗೆ 5 ಸಾವಿರ ರು. ನಿಡಿ ಧನ್ಯವಾದ ಹೇಳಿದ್ದಾರೆ. ಇನ್ನು ನಗರ ಪೊಲೀಸ್ ಆಯುಕ್ತರು ಕೂಡ ಆಟೋ ಚಾಲಕನ ಪ್ರಾಮಾಣಿಕತೆಗೆ ಪ್ರಶಂಸೆ ಸೂಚಿಸಿದ್ದಾರೆ. ಇದೆಲ್ಲವೂ ಪ್ರತಿಯೊಬ್ಬ ಪ್ರಜೆಯಲ್ಲಿ ಮನವರಿಕೆಯಾದರೆ ದೇಶದಲ್ಲಿ ಮೋಸ, ವಂಚನೆಗಳು ಮರೆಯಗುವುದರಲ್ಲಿ ಅನುಮಾನವಿಲ್ಲ.

Also read: ನೊಬೆಲ್​ ಪ್ರಶಸ್ತಿ ಸ್ವೀಕರಿಸಿದ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಮತ್ತು ಅವರ ಪತ್ನಿ ಉಟ್ಟ ಉಡುಗೆಯಲ್ಲಿತ್ತು ನಿಜವಾದ ಭಾರತೀಯ ಸಂಪ್ರದಾಯ.!