ಆಟೋ ಡ್ರೈವರ್ ಪುತ್ರ ಯುಪಿಎಸ್’ಸಿ ಟಾಪರ್ ಆದ ಕಥೆ ಕೇಳಿ, ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಜ ಅಂತ ನಿಮಗೇ ಅನ್ಸುತ್ತೆ!!

0
897

ಓದಬೇಕು ಅನ್ನೋ ಮನಸ್ಸಿದ್ದರೆ ಯಾರು ಏನು ಬೇಕಿದ್ರೂ ಸಾಧಿಸಬಹುದು ಅನ್ನೋದಕ್ಕೆ 21ರ ಹರೆಯದ ಈ ಯುವಕನೇ ಪ್ರತ್ಯಕ್ಷ ನಿದರ್ಶನ. ಆರ್ಥಿಕ ತಾರತಮ್ಯವನ್ನು ಧಿಕ್ಕರಿಸಿ ಈ ಯುವಕ ಮೊದಲ ಯುಪಿಎಸ್‌ಸಿ ಪರೀಕ್ಷೆಯಲ್ಲಿಯೇ 361ನೇ ರ‍್ಯಾಂಕ್‌ ಪಡೆದು ಆಡಿಕೊಳ್ಳುವವರು ಮೂಗಿನ ಮೇಲೆ ಕೈ ಇಡುವಂತೆ ಮಾಡಿದ್ದಾನೆ.

Also read: ಸತ್ಯವಿರಲಿ ಸುಳ್ಳಿರಲಿ ನಿಮ್ಮ ಸಂದೇಶಗಳನ್ನು ವೈರಲ್ ಮಾಡಿ: ಅಮಿತ್ ಶಾ…

ಜೀವನದ ಪಾಠವನ್ನು ಹಸಿವು ಅತಿ ಬೇಗನೆ ಕಲಿಸಿ ಕೊಡುತ್ತದೆ. ಬಡತನದಲ್ಲಿ ಬೆಂದು ನೊಂದು, ಹಲವರ ಬಾಯಲ್ಲಿ ಬೋಯಿಸಿಕೊಂಡು ಬದುಕಿನ ಬಂಡಿಯನ್ನು ಸಾಗಿಸುತ್ತ, ಇವುಗಳ ಮಧ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.
ನನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಿಸುತ್ತೇನೆ ಎಂದು ಕೆಲ ಮಂದಿಯ ಮುಂದೆ ಹೇಳಿದಾಗ, ಅವರೆಲ್ಲಾ ಅಪಹಾಸ್ಯ ಮಾಡಿದ್ದರು. ನೀನು ಒಬ್ಬ ಆಟೋ ಚಾಲಕ ಅನ್ನೋದನ್ನ ಮರೀಬೇಡ ನಿನ್ನ ಮಗ ಐಎಎಸ್ ಅಧಿಕಾರಿಯಾಗೋದು ಅಂದರೇನು ಅನ್ನೋ ಕೊಂಕು ಮಾತುಗಳನ್ನಾಡಿದ್ದರಂತೆ. ಆದ್ರೆ ಈಗ ಅವರೆಲ್ಲ ಕಣ್ ಕಣ್ ಬಿಡುತ್ತಿದ್ದಾರೆ.

Also read: ನಮಾಜ್‌ ಮಾಡಲು ಮಸೀದಿ ಬೇಕಾಗಿಲ್ಲ; ತೀರ್ಪಿನ ಮರು ಪರಿಶೀಲನೆಯ ಪ್ರಶ್ನೆಯೇ ಇಲ್ಲ -ಸುಪ್ರೀಂ…

ಮಹಾರಾಷ್ಟ್ರದ ಮಾರಥವಾಡ ಪ್ರದೇಶದ ಜಲ್ನಾ ಶೆಲಗಾಂವ್ ಹಳ್ಳಿಯ ಅನ್ಸರ್ ಅಹಮ್ಮದ್ ಈ ಸಾಧನೆ ಮಾಡಿರುವ ಯುವಕ. ತಂದೆ ಆಟೋ ರಿಕ್ಷಾ ಚಾಲಕ ಯೂನಸ್ ಶೇಕ್ ಅನ್ಸರ್, ಅಣ್ಣ ಅನೀಸ್ ನದ್ದು ಗ್ಯಾರೇಜ್‌ನಲ್ಲಿ ಕೆಲಸ. ಹೀಗಿದ್ದರೂ ಛಲ ಬಿಡದೆ ಓದಿ ಐಎಎಸ್ ಪಾಸ್ ಆಗಿದ್ದಾನೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ. ಜಲ್ನಾ ಜಿಲ್ಲೆಯಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿರುವ ಅನ್ಸರ್, 2015ರಲ್ಲಿ ಪುಣೆಯ ಫಾರ್ಗುಸನ್ ಕಾಲೇಜಿನಲ್ಲಿ ಬಿ.ಎ ಪೊಲಿಟಿಕಲ್ ಸೈನ್ಸ್‌ನಲ್ಲಿ ಶೇ. 73 ಅಂಕ ಪಡೆದಿದ್ದಾರೆ. ಸದ್ಯ ಯುಪಿಎಸ್‌ಸಿಯಲ್ಲಿ 361ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಪಾಸ್ ಆಗಿದ್ದಾರೆ. ಈ ಮೂಲಕ ದೇಶದ ಅತ ಕಿರಿಯ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

Also read: 800 ವರ್ಷಗಳ ಪದ್ಧತಿಗೆ ತೆರೆ; ಶಬರಿಮಲೆ ದೇಗುಲಕ್ಕೆ ಮಹಿಳೆಯರೂ ಪ್ರವೇಶಿಸಬಹುದು..!!

ಆರ್ಥಿಕವಾಗಿ ಹಿಂದುಳಿದ ತೀರ ಬಡ ಕುಟುಂಬದಲ್ಲಿ ಜನಿಸಿದೆ. ಆಟೋ ರಿಕ್ಷಾ ಓಡಿಸುವ ನನ್ನ ತಂದೆಗೆ ಮೂವರು ಹೆಂಡತಿಯರು. ಯಾವಾಗಲೂ ನನ್ನ ತಾಯಿಯ ಮೇಲೆ ಹಲ್ಲೆ ಮಾಡುತ್ತಲೇ ಇದ್ದರು. ಈ ಕಾರಣಕ್ಕಾಗಿ ತನ್ನ ಇಬ್ಬರು ಸಹೋದರಿಯರಿಗೆ 14, 15ನೇ ವಯಸ್ಸಿನಲ್ಲಿ ಮದುವೆ ಮಾಡಲಾಯಿತು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ನನಗೆ ಓದಲು ಮತ್ತು ನನ್ನ ಭವಿಷ್ಯ ರೂಪಿಸಿಕೊಳ್ಳಲು ಜೊತೆಗೆ ತನ್ನ ಸಾಧನೆಗೆ ಅಣ್ಣ ಹಾಗೂ ಅಮ್ಮನ ಸಹಕಾರವೇ ಕಾರಣ ಎಂದು ಅನ್ಸರ್ ಭಾವುಕರಾದರು.

ಯುಪಿಎಸ್‌‌‌ಸಿ ಪ್ರಕಟಿಸಿರುವ 2015ರ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶದಲ್ಲಿ ಒಟ್ಟು 1078 ಮಂದಿಯ ಪೈಕಿ 34 ಮುಸ್ಲಿಂ ಯುವಕರು ಪಾಸಾಗಿರುವುದು ವಿಶೇಷ.