ಸೆಲ್ಫಿ ತಗೊಳ್ಳೋ ಮುನ್ನ ಸುರಕ್ಷತೆಯ ಬಗ್ಗೆ ಗಮನ ಹರಿಸಿ; ಅದರಲ್ಲೂ ಈ ಜಾಗಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಪ್ರಾಣಕ್ಕೇ ಕುತ್ತು ತರಬಹುದು

0
1280

ಕರ್ನಾಟಕದ ಈ ಸುಂದರ ತಾಣ ಯುವಕರಿಗೆ ಹೇಳಿ ಮಾಡಿಸಿದ ಜಾಗ, ಇಲ್ಲಿಯ ವಿಶೇಷತೆಗೆಂದೇ, ವಾರಾಂತ್ಯದಲ್ಲಿ ಯುವಕ-ಯುವತಿಯರು ಇಲ್ಲಿಗೆ ಬರುವುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಆದರೆ ಈ ಸ್ಪಾಟ್ ಎಷ್ಟು ಸುಂದರವೋ, ಸ್ವಲ್ಪ ಮೈಮರೆತರೆ ಅಷ್ಟೇ ಅಪಾಯಕಾರಿ. ಯಾವುದು ಈ ತಾಣ, ಎಲ್ಲಿದೆ ಏನು ಇಲ್ಲಿಯ ವಿಶೇಷವೆಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಕರ್ನಾಟಕದ ಕಾಫಿನಾಡು ಎಂದೇ ತುಂಬಾನೆ ಪ್ರಸಿದ್ಧವಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮಂಡಿಕಲ್ ಗ್ರಾಮದಲ್ಲಿದೆ, ಈ ಪ್ರಕೃತಿ ನಿರ್ಮಿತ ಸುಂದರ ತಾಣವಾದ ಅವಲಬೆಟ್ಟ. ಇಲ್ಲಿ ಯುವ ಜನರು ಬರಲು ಒಂದು ವಿಶೇಷ ಕಾರಣವಿದೆ, ಆ ಕಾರಣವೇ ಸೆಲ್ಫಿ ಬಂಡೆ. ಇಲ್ಲಿ ಒಂದು ಕಲ್ಲು ಬಂಡೆ ಇದೆ ಅದು ಬೆಟ್ಟದಿಂದ ಸ್ವಲ್ಪ ಮುಂದೆ ಹೋಗಿ ಒಂದು ಸೆಲ್ಫಿ ಸ್ಪಾಟ್ ಆಗಿಬಿಟ್ಟಿದೆ.

ಈ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿಯೇ ರಾಜ್ಯದ ಮೂಲೆ-ಮೂಲೆಗಳಿಂದ ಜನ ಇಲ್ಲಿಗೆ ಬರುತ್ತಾರೆ. ಆದರೆ, ಈ ಕಲ್ಲು ಬಂಡೆ ಸೆಲ್ಫಿ ತೆಗೆದುಕೊಳ್ಳಲು ಅಷ್ಟು ಸುರಕ್ಷಿತ ಸ್ಥಳವಲ್ಲ, ಏಕೆಂದರೆ ಈ ಬಂಡೆ ಸುಮಾರು ಸಾವಿರ ಮೀಟರ್ ಎತ್ತರದಲ್ಲಿದೆ. ಇಷ್ಟು ಅಪಾಯಕಾರಿಯಾಗಿದ್ದರು ಇಲ್ಲಿಗೆ ಬರುವ ಪ್ರವಾಸಿಗರು ಅದರ ತುದಿಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಾರೆ.

ಆವಲಬೆಟ್ಟದಲ್ಲಿ ಪುರಾಣ ಪ್ರಸಿದ್ಧ ಮೂರ್ನಾಲ್ಕು ಪ್ರಸಿದ್ಧ ದೇವಸ್ಥಾನಗಳಿವೆ, ಅದರಲ್ಲಿ ವಿಶೇಷವಾಗಿ ಆವುಲಕೊಂಡರಾಯ ನರಸಿಂಹಸ್ವಾಮಿ ದೇವಸ್ಥಾನ ತುಂಬ ಇತಿಹಾಸ ಪ್ರಸಿದ್ಧ ದೇವಸ್ಥಾನ, ನಮ್ಮ ರಾಜ್ಯದ ಜನರಿಗೆ ಮಾತ್ರವಲ್ಲದೆ ನೆರೆಯ ರಾಜ್ಯದ ಜನರಿಗು ಸಹ ಈ ಆವುಲಕೊಂಡರಾಯ ನರಸಿಂಹಸ್ವಾಮಿ ಮನೆ ದೇವರು.

ಇಷ್ಟು ದೊಡ್ಡ ಇತಿಹಾಸ ಪ್ರಸಿದ್ಧ ದೇವಸ್ಥಾನಗಳು ಪ್ರವಾಸಿಗರ ಮೋಜಿನಿಂದ ಕಲುಷಿತವಾಗುತ್ತಿರುವುದು ವಿಪರ್ಯಾಸವೇ ಸರಿ. ಟ್ರೆಕ್ಕಿಂಗ್, ಸೆಲ್ಫಿ ತೆಗೆದುಕೊಳ್ಳಲು ಮತ್ತು ಜಾಲಿಗೆಂದು ಬರುವ ಪ್ರವಾಸಿಗರು ಇಲ್ಲಿಯ ಇನ್ನಿತರ ಜಾಗಗಳಿಗೆ ಹೋಗಲು ಈ ದೇವಸ್ಥಾನದ ಮೂಲಕವೇ ಹಾದು ಹೋಗಬೇಕು.

ಇಲ್ಲಿಗೆ ಬರುವ ಸಾಕಷ್ಟು ಜನ ಮಧ್ಯಪಾನ, ಧೂಮಪಾನ, ಡ್ರಗ್ಸ್ ಮತ್ತು ಇನ್ನಿತರ ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಿ ದೇವಸ್ಥಾನದ ಆವರಣವನ್ನು ಅಪವಿತ್ರ ಮಾಡುತ್ತಿದ್ದಾರೆ. ಇನ್ನು ಕುಡಿದು ಸೆಲ್ಫಿ ತೆಗೆದುಕೊಳ್ಳಲು ಬೆಟ್ಟದ ಬಳಿ ಹೋಗುವುದು ತುಂಬಾನೆ ಆಪಾಯ ಎಂದು ತಡೆಯುವ ಪೋಲೀಸರ ಜೊತೆಗೆ ಕಿರಿ-ಕಿರಿ ಮಾಡಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಸೆಲ್ಫಿ ಹುಚ್ಚಿನಲ್ಲಿ ಅಮೂಲ್ಯವಾದ ಜೀವ ಕಳೆದುಕೊಳ್ಳುವುದು ಎಷ್ಟರ ಮಟ್ಟಿಗೆ ಬುದ್ದಿವಂತಿಗೆ ಒಮ್ಮೆ ಯೋಚಿಸಿ…!