ಅವಲಕ್ಕಿ ಹಾಲ್ಬಾಯ್

0
2601

ಬೇಕಾಗುವ ಸಾಮಗ್ರಿ:

ಅವಲಕ್ಕಿ-1 ಕಪ್,

ಬೆಲ್ಲ-1 ಕಪ್,

ಹಾಲು-1 1/4 ಕಪ್,

ಏಲಕ್ಕಿಪುಡಿ-1/4 ಚಮಚ

ಅವಲಕ್ಕಿ ಹಾಲ್ಬಾಯ್1
ಅವಲಕ್ಕಿ ಹಾಲ್ಬಾಯ್  ವಿಧಾನ:

ತೊಳೆದು ಸೋಸಿದ ಅವಲಕ್ಕಿಯನ್ನು ಹಾಲಿನಲ್ಲಿ ಮುಕ್ಕಾಲು ಗಂಟೆ ನೆನೆಸಿ. ಬೆಲ್ಲವನ್ನು ಕರಗಿಸಿ ಸೋಸಿಕೊಳ್ಳಿ. ನೆಂದ ಅವಲಕ್ಕಿಯನ್ನು ಬೆಲ್ಲದೊಂದಿಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ದಪ್ಪತಳದ ಇಲ್ಲವೇ ನಾನ್‍ಸ್ಟಿಕ್ ಪಾತ್ರೆಯಲ್ಲಿ ಬಿಸಿ ಮಾಡಿ. ಗಂಟು ಕಟ್ಟದಂತೆ ಸತತ ಕೈಯಾಡಿಸುತ್ತಲೇ ಇರಬೇಕು. ಇದಕ್ಕೆ ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿ. ಅಂಚು-ತಳ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಮಿಶ್ರಣವನ್ನು ಸುರಿದು ಮತ್ತೊಂದು ತಟ್ಟೆಯಿಂದ ಮೇಲ್ಭಾಗವನ್ನು ಸಮತಟ್ಟಾಗಿಸಿ, ಸ್ವಲ್ಪ ಆರಿದ ನಂತರ ಚೌಕಾಕಾರಕ್ಕೆ ಇಲ್ಲವೇ ಡೈಮಂಡ್ ಆಕಾರಕ್ಕೆ ಕತ್ತರಿಸಿ.

ಅವಲಕ್ಕಿ ಹಾಲ್ಬಾಯ್