ವಿ.ವಿ.ಪುರದ ಸಜ್ಜನ್ ರಾವ್ ವೃತ್ತದ ಬಳಿ‌ ಅವರೆ ಮೇಳ ಆರಂಭ

0
652

ಬೆಂಗಳೂರು: ಕಾಂಡಿಮೆಂಟ್ಸ್‌ ಮಳಿಗೆಯವರು ಈ ಬಾರಿಯ ಮೇಳಕ್ಕೆ ಮಾಗಡಿ, ರಾಮನಗರ, ಮಂಡ್ಯದ ರೈತರಿಂದ  ಒಂಬತ್ತು ಟನ್‌ ಅವರೆಯನ್ನು ಖರೀದಿಸಿದ್ದಾರೆ. ಹಸಿ ಅವರೆಗೆ ಒಂದು ಸೇರಿಗೆ ₹140 ಹಾಗೂ ಕೆ.ಜಿ.ಗೆ ₹180 ಬೆಲೆ ನಿಗದಿಪಡಿಸಲಾಗಿದೆ. ಮೇಳದಲ್ಲಿ ಹಸಿಅವರೆ ಕಾಳಿನ ಮಾರಾಟವೂ ಜೋರಾಗಿತ್ತು.

‘ಹಸಿಅವರೆ ಕಾಳು ಹಾಗೂ ಬೇಳೆಯನ್ನು ರೈತರಿಂದ ನೇರವಾಗಿ ಖರೀದಿಸುತ್ತೇವೆ.  ಇದರಿಂದ ಅವರಿಗೂ ಲಾಭವಾಗುತ್ತಿದೆ. ಆರಂಭದಿಂದಲೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸೇವೆ ನೀಡುತ್ತಿದ್ದೇವೆ

ಹೆಬ್ಬವರೆ ಹಾಗೂ ಚಿನಗಲ್ ಅವರೆಯಿಂದ ತಯಾರಿಸಿದ 50ಕ್ಕೂ ಹೆಚ್ಚು ವಿಧವಾದ  ತಿನಿಸುಗಳು ಮೇಳದಲ್ಲಿ ಲಭ್ಯವಿವೆ. ಅದರಲ್ಲಿ ಅವರೆ ಸೋನು ಪಾಪಡಿ, ಜಾಮೂನು, ನಿಪ್ಪಟ್ಟು ವಿಶೇಷವಾಗಿವೆ. ಗ್ರಾಹಕರು ಇವನ್ನು  ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಅವರೆ ಬೇಳೆಯಿಂದ ಮಾಡಿದ ನಿಪ್ಪಟ್ಟು, ಚೌಚೌ, ಸಾರು, ಚಿತ್ರಾನ್ನ, ಉಪ್ಪಿಟ್ಟು, ಮಸಾಲೆವಡೆ, ಒತ್ತು ಶಾವಿಗೆ, ಚಿಕ್ಕಿ, ಹುಸ್ಲಿ, ಸೋನು ಪಾಟಡಿ, ಹೋಳಿಗೆ, ಜಾಮೂನು, ಪಾಯಸ…

ಈ ತಿನಿಸುಗಳ ರುಚಿಯನ್ನು ನಿಮ್ಮ ನಾಲಿಗೆ ಸವಿಯಬೇಕಾದರೆ ನಗರದಲ್ಲಿನ ವಿ.ವಿ.ಪುರದ ಸಜ್ಜನ್‌ರಾವ್‌ ವೃತ್ತದ ಬಳಿಯ ಶ್ರೀ ವಾಸವಿ ಕಾಂಡಿಮೆಂಟ್ಸ್‌ ಏರ್ಪಡಿಸಿರುವ ‘17ನೇ ವರ್ಷದ ಅವರೆ ಬೇಳೆ ಮೇಳ’ಕ್ಕೆ ಹೋಗಬಹುದು. ಜನವರಿ 7ರಿಂದ 24ರವರೆಗೆ ಬೆಳಗ್ಗೆ 11ರಿಂದ ರಾತ್ರಿ 10 ಗಂಟೆಯ ತನಕ ಮೇಳ ನಡೆಯಲಿದೆ.

ಮೆಜೆಸ್ಟಿಕ್ ನಿಂದ ಹೊರಟು ಕಾರ್ಪೋರೇಶನ್ ಮಾರ್ಗವಾಗಿ ಕೆಆರ್ ಮಾರುಕಟ್ಟೆ ತಲುಪಿ ಮುಂದೆ ನೇರವಾಗಿ ಬಂದರೆ ಸಜ್ಜನ್ ರಾವ್ ವೃತ್ತ ತಲುಪಬಹುದು.