ಈ ತರಕಾರಿಗಳನ್ನ ಜಾಸ್ತಿ ತಿಂದ್ರೆ ಹೈಪೋ ಥೈರೊಯ್ಡ್ ಖಾಯಿಲೆ ಬರೋದಂತು ಗ್ಯಾರಂಟಿ…

0
4621

ಇತ್ತೀಚಿಗೆ ಮಧುಮೇಹ, ಸ್ತೂಲಕಾಯದ ಜೊತೆ ಜೊತೆಗೆ ಹೈಪೋ ಥೈರಾಯಿಡ್ ಇಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಅಯೋಡೀನ್ ಕೊರತೆಯಿಂದ ಥೈರಾಯಿಡ್ ಗ್ರಂಥಿಗಳ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ಸಡನ್ ಆಗಿ ದಪ್ಪ ಆಗೋದು, ವಿಪರೀತ ಸುಸ್ತು, ಕೂದಲು ಉದರುವಿಕೆ, ಮಲಬದ್ಧತೆ, ಮರೆಗುಳಿತನ, ವಿಪರೀತ ನಿದ್ದೆ, ವಾಯ್ಸ್ ಬದಲಾಗುವಿಕೆ, ಚರ್ಮ ಒಡೆಯುವಿಕೆ ಇತರೆ ಲಕ್ಷಣಗಳು ಕಂಡು ಬರುತ್ತದೆ.

Source: HuffPost

ಹಾಗಿದ್ರೆ ಊಟದಲ್ಲಿ ಅಗತ್ಯವಾಗಿ ಅಯೋಡೀನ್ ಪ್ರಮಾಣ ತೆಗೊಳ್ತಾ ಇದ್ರೂ ಯಾಕಪ್ಪ ಈ ಖಾಯಿಲೆ ಬಂತು ಅನ್ನೋವರಿಗೆ ಇಲ್ಲಿದೆ ಉತ್ತರ. ಅಯೋಡೀನ್ ನ ಊಟದಲ್ಲಿ ತೇಗೋಳೋದು ಎಷ್ಟು ಮುಖ್ಯನೋ ಅದು ಹೊಟ್ಟೆಯಿಂದ ರಕ್ತಗತವಾಗೋದು ಸಹ ಅಷ್ಟೇ ಮುಖ್ಯ. ಆದ್ರೆ ಕೆಲವೊಂದು ಸಲ ನಾವು ತೊಗೊಳೋ ಎಷ್ಟೋ ಆಹಾರ ಪದಾರ್ಥಗಳು ಈ ಅಯೋಡೀನ್ ಅನ್ನು ಹೀರಿಕೊಳ್ಳಲು ಬಿಡುವುದಿಲ್ಲ. ಇದರ ಪರಿಣಾಮವಾಗಿ ಅಯೋಡೀನ್ ಅಂಶಗಳು ಥೈರಾಯಿಡ್ ಗ್ರಂಥಿಗಳಿಗೆ ಸರಿಯಾಗಿ ಲಭಿಸದೆ ಅವುಗಳ ಚಟುವಟಿಕೆ ಕಡಿಮೆ ಮಾಡಿ T3 ಮತ್ತು T4 ಹಾರ್ಮೋನ್ ಗಳ ಉತ್ಪಾದನೆಯು ಕಡಿಮೆಯಾಗುತ್ತದೆ.

Source: advanceuc

ಹಾಗಿದ್ರೆ ಅವು ಯಾವ ಫುಡ್ ಅಂತ ಕೇಳ್ತಿದೀರಾ ?? ಮುಂದೆ ಓದಿ .

ಥಯೋಸಯನೈಟ್ಸ್ ಅಂಶಗಳುಳ್ಳ ಹಣ್ಣು ತರಕಾರಿಗಳು ಥೈರಾಯಿಡ್ ಗ್ರಂಥಿಗಳಿಗೆ ಅಯೋಡೀನ್ ಲಭಿಸದಂತೇ ಮಾಡುತ್ತವೆ. ಎಲೆಕೋಸು, ಹೂಕೋಸು,ಮೂಲಂಗಿ, ಗೆಣಸು,ಕೋಸಿನ ಎಲೆಗಳು,ಸಾಸುವೆ ಎಲೆ,ಬ್ರೊಕೋಲಿ ,ಕನೋಲಾ, ಅಗಸೆ ಗಳಲ್ಲಿ ಥಯೋಸಯನೈಟ್ಸ್ ಅಂಶಗಳು ಹೇರಳವಾಗಿದ್ದು ಅಯೋಡೀನ್ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ. ಬೇಯಿಸಿದಾಗ ಈ ಅಂಶವು ಗಣನೀಯವಾಗಿ ಇಳಿಯುವುದರಿಂದ ಬೇಯಿಸಿದ ತರಕಾರಿಗಳ ಸೇವನೆ ಅಷ್ಟು ಹಾನಿಕಾರಕವಲ್ಲ.
ಸೋಯಾ ಬೀನ್ಸ್, ಸೋಯಾ ಮಿಲ್ಕ್ , ಟೋಫು ಗಳು ಥೈರಾಯಿಡ್ ಗ್ರಂಥಿಯ ಕೆಲಸವನ್ನು ಕಡಿಮೆ ಮಾಡುವುದರಿಂದ ಈ ಖಾಯಿಲೆಯನ್ನು ತಂದೊತ್ತುವೆ.

Source: Indiamarks

ಗೋಧಿ, ಮೆಕ್ಕೆಜೋಳ,ಬಾರ್ಲಿ ಅಕ್ಕಿಯಲ್ಲಿರುವ ಗ್ಲುಟೆನ್ ಅಂಶಗಳು ದೇಹದಲ್ಲಿ ಆಟೋ ಇಮ್ಮ್ಯೂನಿಟಿಯನ್ನು ಹೆಚ್ಚಿಸಿ ಥೈರಾಯಿಡ್ ಗ್ರಂಥಿಗಳ ಕಾರ್ಯದಕ್ಷತೆಯನ್ನು ಕುಗ್ಗಿಸಿ ಕ್ರಮೇಣ ಹೈಪೋ ಥೈರಾಯಿಡ್ ಸಮಸ್ಯೆಗೆ ನಾಂದಿ ಹಾಡುತ್ತದೆ.

 

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840