ನೀವು ಊಟವಾದ ನಂತರ ಈ ತಪ್ಪುಗಳನ್ನು ಮಾಡುತ್ತಿದರೆ ಕೂಡಲೇ ಇವುಗಳನ್ನು ತಪ್ಪಿಸಿ; ಈ ಅಭ್ಯಾಸಗಳು ಆರೋಗ್ಯಕ್ಕೆ ಮಾರಕವಾಗಿವೆ..

0
787

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಊಟ ಬೇಕು. ಇದು ಒಂದ್ ಕಡೆ ನಿಜವಾದರೆ ಇನ್ನೊಂದ್ ಕಡೆ ಊಟ ನಂತರ ಮಾಡುವ ಕೆಲವೊಂದು ಅಭ್ಯಾಸಗಳು ಮತ್ತು ಕೆಲಸಗಳು ಇಡಿ ದೇಹದ ಆರೋಗ್ಯವನ್ನೇ ಕೆಡೆಸುತ್ತೇವೆ ಎಂದು ಸಂಶೋಧನೆ ಒಂದು ತಿಳಿಸಿದೆ. ಊಟಕ್ಕೂ ಮೊದಲು ಮತ್ತು ಊಟದ ನಂತರ ನಮ್ಮ ಚಟುವಟಿಕೆಗಳೂ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬಿರುತ್ತದೆ ಎಂಬುವುದನ್ನು ಈ ಅಧ್ಯಯನ ತಿಳಿಸಿದೆ. ನೀವೂ ಕೂಡ ಇಂತಹ ತಪ್ಪು ಅಭ್ಯಾಸಗಳನ್ನು ಮಾಡುತ್ತಿದರೆ ಆರೋಗ್ಯದ ದೃಷ್ಟಿಯಿಂದ ಬಿಡುವುದು ಒಳ್ಳೆಯದಾಗಿದೆ.

ಊಟದ ನಂತರ ಮಲಗುವುದು:

ಊಟವಾದ ತಕ್ಷಣ ಮಲಗುವುದರಿಂದ ದೇಹದ ಜೀರ್ಣರಸಗಳು ವಿರುದ್ದ ದಿಕ್ಕಿನಲ್ಲಿ ಚಲಿಸುವಂತಾಗುತ್ತದೆ ಹಾಗೂ ಇದರಿಂದ ಜೀರ್ಣಕ್ರಿಯೆ ಬಾಧೆಗೊಳಗಾಗುತ್ತದೆ. ಹಾಗೆಯೇ ಊಟದ ನಂತರ ಎಲ್ಲರಿಗೂ ನಿದ್ದೆ, ಆಯಾಸ ಆಗುವುದು ಸಾಮಾನ್ಯವಾಗಿದೆ. ಈ ಸಮಯದಲ್ಲಿ ಮಲಗದೆ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮಲಗುವ ಅಭ್ಯಾಸವನ್ನು ಬಿಡಬೇಕು. ಇತರೆ ಅಭ್ಯಾಸಗಳಾದ ಓದುವುದು, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡುವುದು, ಟಿವಿ ನೋಡುವುದು ಮಾಡುವುದು ಒಳ್ಳೆಯದು.

ಧೂಮಪಾನ ಮಾಡುವುದು:

ಊಟವಾದ ತಕ್ಷಣ ಧೂಮಪಾನ ಮಾಡುವ ಬಗ್ಗೆ ಯೋಚಿಸಲೂ ಬಾರದು! ನಿಜ ಹೇಳಬೇಕೆಂದರೆ ಯಾವುದೇ ಹೊತ್ತಿನಲ್ಲಿ ಧೂಮಪಾನ ಮಾಡುವುದು ಆರೋಗ್ಯಕ್ಕೆ ಕೆಟ್ಟದ್ದು. ಆದರೆ ಊಟದ ತಕ್ಷಣ, ಇದು ಪ್ರತ್ಯಕ್ಷ ಕೊಲೆಗಾರನೇ ಹೌದು. ಸಿಗರೇಟಿನ ಧೂಮದಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳಿವೆ. ಊಟದ ಸಮಯದಲ್ಲಿ ಇವು ಇತರ ಯಾವುದೇ ಹೊತ್ತಿನಲ್ಲಿ ಸೇದುವ ಹೊಗೆಗಿಂತ ಹೆಚ್ಚು ಕ್ಷಿಪ್ರವಾಗಿ ರಕ್ತವನ್ನು ಗರಿಷ್ಟ ಪ್ರಮಾಣದಲ್ಲಿ ಸೇರಿ ಈಗಾಗಲೇ ಎಸಗುತ್ತಿರುವ ಹಾನಿಯ ಜೊತೆಗೇ ಜೀರ್ಣಕ್ರಿಯೆಯ ಮುಖ್ಯ ಉದ್ದೇಶವನ್ನೇ ಹಾಳು ಮಾಡಬಹುದು.

ಕಾಫಿ ಟೀ ಕುಡಿಯುವುದು:

ಹಲವರಿಗೆ ಊಟವಾದ ತಕ್ಷಣವೇ ಕಾಫಿ ಅಥವಾ ಟೀ ಬೇಕೇಬೇಕು. ಆಹಾರತಜ್ಞರ ಪ್ರಕಾರ ಊಟದ ಒಂದು ಘಂಟೆಯ ಬಳಿಕವೇ ಟೀ ಅಥವಾ ಕಾಫಿ ಸೇವಿಸಿದರೆ ಸೂಕ್ತವಾಗಿದೆ. ಕಾಫಿ ಟೀ ಈ ಪಾನೀಯಗಳ ಕ್ಷಾರೀಯತೆ ಈಗತಾನೇ ಪ್ರಾರಂಭವಾಗಿರುವ ಜೀರ್ಣಕ್ರಿಯೆಗೆ ಅಗತ್ಯವಿರುವ ಜೀರ್ಣರಸಗಳ ಪ್ರಾಬಲ್ಯವನ್ನು ಕುಂದಿಸಬಹುದು ಹಾಗೂ ಇದರಿಂದ ಜೀರ್ಣಕ್ರಿಯೆ ತೊಂದರೆ ಕಾಣಿಸುತ್ತದೆ.

ಊಟದ ನಂತರ ನಡೆದಾಡುವುದು:

ಸಾಮಾನ್ಯವಾಗಿ ಊಟದ ಬಳಿಕ ವಿಶೇಷವಾಗಿ ರಾತ್ರಿಯ ಊಟದ ಬಳಿಕ ಹಲವರಿಗೆ ಕೊಂಚ ನಡೆದಾಡುವ ಅಭ್ಯಾಸವಿರುತ್ತದೆ. ಇದರಿಂದ ಆಹಾರದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದು ಅಪ್ಪಟ ಸುಳ್ಳು! ನೀವು ಊಟದ ಬಳಿಕ ನಡೆದಾಡಬಹುದು, ಆದರೆ ಊಟದ ಅರ್ಧ ಘಂಟೆಯ ಬಳಿಕ. ಈ ಅವಧಿಯಲ್ಲಿ ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ಬೇಕಾಗಿದ್ದು ಇತರ ಅಂಗಗಳಿಗೆ ಕಡಿಮೆ ರಕ್ತಪರಿಚಲನೆ ದೊರಕುವ ಕಾರಣ ಮಲಗದ ಹಾಗೆ ಕೂತುಕೊಂಡು ವಿಶ್ರಾಂತಿ ಪಡೆಯುವುದು ಒಳ್ಳೆಯದು.

ಸೊಂಟದ ಬೆಲ್ಟ್ ಸಡಿಲಿಸುವುದು:

ಊಟಕ್ಕೂ ಮುನ್ನ ಸೊಂಟದ ಪಟ್ಟಿ ಅಥವಾ ಬೆಲ್ಟ್ ಇದ್ದ ಬಿಗಿಯಾಗಿದ್ದು. ಊಟದ ನಂತರ ಸೊಂಟದ ಬೆಲ್ಟ್ ಬಿಗಿಯಾಗುತ್ತೆ. ಹಲವರು ಈ ಬಿಗಿಯನ್ನು ಊಟದ ಬಳಿಕ ಕೊಂಚ ಸಡಿಲಿಸಿ ಆರಾಮ ಪಡೆಯುತ್ತಾರೆ. ಸರಿಯಾದ ಕ್ರಮದಲ್ಲಿ ಊಟದ ಬಳಿಕ ಬೆಲ್ಟ್ ಬಿಗಿಯಾಯಿತು ಎಂದರೆ ನೀವು ಅಗತ್ಯಕ್ಕೂ ಹೆಚ್ಚು ಊಟ ಮಾಡಿದ್ದೀರಿ ಎಂದೇ ಅರ್ಥ ಬಿಗಿಗೆ ಅನುಗುಣವಾಗಿ ನಮ್ಮ ಜಠರ ಮತ್ತು ಕರುಳುಗಳು ಒಗ್ಗಿಕೊಂಡಿರುತ್ತವೆ. ಈ ಸಮಯದಲ್ಲಿ ಸಡಿಲಗೊಳಿಸಿದರೆ ಸೊಂಟದ ಸುತ್ತಳತೆ ಹೆಚ್ಚುತ್ತದೆ.

ಸ್ನಾನ ಮಾಡವುದು:

ದಿನದ ಯಾವುದೇ ಹೊತ್ತಿನ ಊಟವಿರಲಿ, ಉಪಾಹಾರವಿರಲಿ, ಆಹಾರ ಸೇವಿಸಿದ ಕನಿಷ್ಟ ಮೂವತ್ತು ನಿಮಿಷವಾದರೂ ಸ್ನಾನ ಮಾಡಬಾರದು. ಏಕೆಂದರೆ ಊಟದ ತಕ್ಷಣ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಅಪಾರ ಪ್ರಮಾಣದ ಶಕ್ತಿಯ ಅಗತ್ಯವಿರುತ್ತದೆ ಹಾಗೂ ಇದನ್ನು ಪೂರೈಸಲು ಗರಿಷ್ಟ ಪ್ರಮಾಣದ ರಕ್ತ ಇತ್ತ ಹರಿಯುತ್ತದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಜೀರ್ಣಕ್ರಿಯೆಗೆ ಅಗತ್ಯವಿದ್ದಷ್ಟು ರಕ್ತ ಸಿಗದೇ ಹೋಗುತ್ತದೆ. ಪರಿಣಾಮವಾಗಿ ಸರಾಗವಾಗಿ ಆಗಬೇಕಾಗಿದ್ದ ಜೀರ್ಣಕ್ರಿಯೆ ಅರ್ದಂಬರ್ಧ ನಡೆದು ಹಲವು ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಊಟದ ನಂತರ ಹಣ್ಣು ಅಥವಾ ತಿಂಡಿ ತಿನ್ನುವುದು:

ವಿಶೇಷವಾಗಿ ಊಟದ ನಂತರ ಬಾಳೆಹಣ್ಣನ್ನು ತಿನ್ನುವುದು ಆರೋಗ್ಯಕರ ಎಂದೇ ನಾವೆಲ್ಲಾ ತಿಳಿದಿದ್ದೆವು. ಆದರೆ ಆಹಾರತಜ್ಞರ ಪ್ರಕಾರ ಹೀಗೆ ಮಾಡುವುದರಿಂದ ಹಣ್ಣಿನ ತಿರುಳು ಈಗತಾನೇ ತಿಂದ ಆಹಾರದೊಡನೆ ಮಿಶ್ರಣಗೊಂಡು ಜಠರದಲ್ಲಿ ಜೀರ್ಣಗೊಳ್ಳದೇ ನೇರವಾಗಿ ಸಣ್ಣಕರುಳಿಗೆ ತಲುಪುತ್ತದೆ ಹಾಗೂ ಇಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಈ ಹಣ್ಣಿನ ತಿರುಳನ್ನು ಕೊಳೆಸುತ್ತವೆ. ಪರಿಣಾಮವಾಗಿ ತಿಂದ ಆಹಾರವು ಕೆಟ್ಟು ಹೊಟ್ಟೆಯಲ್ಲಿ ಚುಚ್ಚುವಂತೆ ಅನುಭವಾಗಿ ಆರೋಗ್ಯದ ತೊಂದರೆಗಳು ಕಂಡು ಬರುತ್ತದೆ.