ಆರೋಗ್ಯಕ್ಕೆ ಮಾರಕವಾಗಿ ಬರುತ್ತಿದೆ ಚೀನೀ ಪ್ಲಾಸ್ಟಿಕ್ ಮೊಟ್ಟೆ!! ಆತಂಕದಲ್ಲಿ ಬೆಂಗಳೂರು

0
2063

ಹಲವು ತಿಂಗಳುಗಳ ಹಿಂದೆ ಕಣ್ಣೂರು ಜಿಲ್ಲೆಯಲ್ಲಿ `ನಕಲಿ ಅಕ್ಕಿ’ಯನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಬೇಯಿಸಿದಾಗ ಕರಗಿ ಪ್ಲಾಸ್ಟಿಕ್ ರೂಪ ಪಡೆದಾಗಲೇ ಇದು ನಕಲಿ ಅಕ್ಕಿಯೆಂದು ಪತ್ತೆ ಹಚ್ಚಲು ಸಾಧ್ಯವಾದದ್ದು! ಇದೀಗ ನಕಲಿ ಮೊಟ್ಟೆಗಳ ಹಾವಳಿಯು ಬೆಂಗಳೂರಿಗೆ ಬಂದಿದೆ.

ಜನರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ನಕಲಿ ಚೀನೀ ಪ್ಲಾಸ್ಟಿಕ್ ಮೊಟ್ಟೆಗಳ ಹಾವಳಿ ಬೆಂಗಳೂರು ನಗರದಲ್ಲಿ ಕಂಡುಬಂದಿದೆ. ನಗರದ ವೈಟ್ ಫೀಲ್ಡ್ ನಿವಾಸಿ ಒಬ್ಬ ಮಹಿಳೆ ಕೊಂಡ ಮೊಟ್ಟೆಗಳೆಲ್ಲಾ ಇದೇ ವರ್ಗಕ್ಕೆ ಸೇರಿದವುಗಳಾಗಿದ್ದವು. ಅವರಿಗೆ ಲಭಿಸಿದ ಪ್ಲಾಸ್ಟಿಕ್ ಮೊಟ್ಟೆಗಳನ್ನು TNM ಚಿತ್ರಗಳು ಸಾಮಾಜಿಕ ಅಂತರ್ಜಾಲಗಳಲ್ಲಿ ಹರಿದಾಡುತ್ತಿವೆ. ವ್ಯಾಪಾರಿಗಳು ಇದು ನಕಲಿಮೊಟ್ಟೆಯೆಂದು ತಿಳಿಯದೆಯೇ ಖರೀದಿಸಿ ಮೋಸ ಹೋಗುತ್ತಿರುವುದಾಗಿ ತಿಳಿದು ಬಂದಿದೆ.

ಚೈನೀಸ್ ಕೋಳಿಮೊಟ್ಟೆಯ ಕುರಿತಾಗಿ ಈ ಹಿಂದೆಯೇ ಸಾಮಾಜಿಕ ಅಂತರ್ಜಾಲಗಳಲ್ಲಿ ವಿವರಣೆ ಬಂದಿತ್ತು. ಮೊಟ್ಟೆಯೊಳಗಿನ ಬಿಳಿ ದ್ರವಗಳಿಗೆ ಸ್ಟಾರ್ಚ್, ರೆಸಿನ್, ಸೋಡಿಯಂ ಆಲ್ಗಿನೇಟ್ ಉಪಯೋಗಿಸಲಾಗುತ್ತದೆ. ಇದನ್ನು ದ್ರವರೂಪಕ್ಕೆ ತರಲು ಒಂದು ರೀತಿಯ ಆಲ್ಗಾದ ಸತುವನ್ನು ಉಪಯೋಗಿಸಲಾಗುತ್ತಿದೆ. ಇನ್ನು ಮೊಟ್ಟೆಯೊಳಗಿನ ಹಳದಿಗಾಗಿ ಅರ್ಗಿಕ್ ಆ್ಯಸಿಡ್, ಪೊಟಾಶಿಯಂ ಆಲಂ, ಜಲಾಟಿನ್, ಕ್ಯಾಲ್ಸಿಯಂಕ್ಲೋರೈಡ್, ಬೆನ್ಸಿಯೋಸಿಕ್ ಆ್ಯಸಿಡ್, ಕೃತಕ ಬಣ್ಣ ಮೊದಲಾದವುಗಳನ್ನು ಉಪಯೋಗಿಸಲಾಗುತ್ತಿದೆ.

ಮೊಟ್ಟೆಯ ಚಿಪ್ಪನ್ನು ತಯಾರಿಸಲು ಕ್ಯಾಲ್ಸಿಯಂ ಕಾರ್ಬೋನೇಟ್, ಜಿಪ್ಲಂ, ಪೆಟ್ರೋಲಿಯಂ ಮಯಣ ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಲಾಗುತ್ತಿದೆ. ಇದು ನಿಜವಾದ ಮೊಟ್ಟೆಯೆಂದು ನಂಬಿಸುವುದಕ್ಕಾಗಿ ಈ ರೀತಿಯಾಗಿ ಕೃತಕವಾಗಿ ನಿರ್ಮಿಸಿದ ಮೊಟ್ಟೆಗಳ ಮೇಲೆ ಕೊಳಿಯ ತ್ಯಾಜ್ಯಗಳನ್ನೂ ಸಿಂಪಡಿಸಲಾಗುತ್ತದೆ. ಮೊಟ್ಟೆಗಳ ಚಿಪ್ಪುಗಳನ್ನು ನಿರ್ಮಿಸುವುದಕ್ಕಾಗಿ ಪ್ರತ್ಯೇಕ ಅಚ್ಚುಗಳನ್ನು ಉಪಯೋಗಿಸಲಾಗುತ್ತಿದೆ. ಇದನ್ನು ಎಷ್ಟೇ ಪರಿಶೋಸಿದರೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಈ ಮೊಟ್ಟೆಗಳನ್ನು ನಿರ್ಮಿಸಲಾಗುತ್ತಿದೆ.

ಚೀನೀ ಪ್ಲಾಸ್ಟಿಕ್ ಮೊಟ್ಟೆಗಳನ್ನು ಕಂಡು ಹಿಡಿಯುವುದು ಹೇಗೆ?

  • ಚೀನೀ ಪ್ಲಾಸ್ಟಿಕ್ ಮೊಟ್ಟೆಗಳನ್ನು ಒಡೆದು ದಿವಸಗಳು ಕಳೆದರೂ ಯಾವುದೇ ವಾಸನೆ ಉಂಟಾಗುವುದಿಲ್ಲ.
  • ಇದಕ್ಕೆಇರುವೆಯಾಗಲೀ ನೊಣವಾಗಲೀ ಮುತ್ತಿಕೊಳ್ಳದು.
  • ಮೊಟ್ಟೆಯ ಚಿಪ್ಪನ್ನು ಒಡೆದರೂ ಮೊಟ್ಟೆಯೊಳಗಿನ ಭಾಗಗಳು ಒಡೆಯಲಾರವು.
  • ಚಿಪ್ಪಿನ ಬಳಿಕ ಸೂಕ್ಷ್ಮವಾದ ಪ್ಲಾಸ್ಟಿಕ್ ಪದರುಇರುವುದರಿಂದಲೇ ಮೊಟ್ಟೆಯ ಚಿಪ್ಪೊಡೆದರೂ ಒಳಗಿನ ಭಾಗಗಳು ಚದುರದೆ ನಿಲ್ಲುತ್ತವೆ.
  • ಇಂತಹ ಮೊಟ್ಟೆಗಳಿಗೆ ರುಚಿ, ಸುವಾಸನೆ ಇತರ ಮೊಟ್ಟೆಗಳಿಗಿಂತ ಕಡಿಮೆಯಾಗಿದೆ.
  • ಇದನ್ನು ತಿನ್ನುವಾಗ ಚೂಯಿಂಗಂ ಜಗಿದ ಅನುಭವವಾಗುವುದು.

ಚೀನೀ ಪ್ಲಾಸ್ಟಿಕ್ ಮೊಟ್ಟೆಗಳಿಂದಾಗುವ ಹನಿ

ಇಂತಹ ಮೊಟ್ಟೆಗಳಿಂದ ಕಿಡ್ನಿ , ಕರುಳು ಮತ್ತು ಹೊಟ್ಟೆಯನ್ನು ಬಾಸುವ ಗಂಭೀರ ರೋಗಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಗ್ರಾಹಕರೇ ಇಂತಹ ಚೀನೀ ಪ್ಲಾಸ್ಟಿಕ್ ಮೊಟ್ಟೆಗಳ ಹಾವಳಿಯಿಂದ ತಮ್ಮಆರೋಗ್ಯವನ್ನು ರಕ್ಷಿಸಿಕೊಳ್ಳಿ .